ಗದಗ: ಮಹಿಳೆಯರು ಆರ್ಥಿಕವಾಗಿ ಸದೃಢತೆ ಹೊಂದಬೇಕು. ಕುಟುಂಬ ನಿರ್ವಹಣೆ, ಸಣ್ಣ ಉದ್ಯಮ ಸಹಕಾರಿಯಾಗಿದ್ದು, ಸರ್ಕಾರದ ತರಬೇತಿ ಪಡೆದು ಯಶಸ್ವಿ ಸ್ವ-ಉದ್ಯೋಗಿಗಳಾಗಬೇಕೆಂದು ಜಿಪಂ ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗದ ಉಪನಿರ್ದೇಶಕ ಕೈಲಾಸ ಮೂರ್ತಿ ಹೇಳಿದರು.
ಸ್ತ್ರೀಯರು ಸರ್ಕಾರದ ಹಲವಾರು ಯೋಜನೆ ಸದ್ಭಳಕೆ ಮಾಡಿಕೊಂಡು ಅದಕ್ಕಾಗಿ ನೀಡಲಾಗುವ ತರಬೇತಿ ಪಡೆದು ಬದುಕಿನಲ್ಲಿ ಆರ್ಥಿಕ ಸದೃಢತೆ ಹೊಂದಬೇಕು. ಇದರಿಂದ ಕುಟುಂಬ ನಿರ್ವಹಣೆಗೆ ಸಹಾಯಕವಾಗಲಿದೆ ಎಂದರು.
ಕೈಗಾರಿಕಾ ವಿಸ್ತರಣಾ ಅಧಿಕಾರಿ ಬಿ.ಎಸ್. ಮಳಲಿ ಮಾತನಾಡಿ, ಮಹಿಳೆಯರಿಗಾಗಿಯೇ ಹಲವಾರು ಸ್ವಉದ್ಯೋಗದ ಯೋಜನೆಗಳಿದ್ದು, ಅದಕ್ಕಾಗಿ ನಿರ್ದಿಷ್ಟ ತರಬೇತಿ ಸರ್ಕಾರದ ವತಿಯಿಂದ ಉಚಿತವಾಗಿ ನೀಡಲಾಗುತ್ತಿದ್ದು, ತರಬೇತಿ ಪಡೆದು ಸರ್ಕಾರದಿಂದ ಸಿಗುವ ಆರ್ಥಿಕ ಸೌಲಭ್ಯ ಉಪಯೋಗಿಸಿಕೊಂಡು ಸ್ವ-ಉದ್ಯೋಗಿಗಳಾಗಿ ಎಂದರು.ಪ್ರೀತಿ ಶಿವಪ್ಪಯ್ಯನಮಠ ಮಾತನಾಡಿ, ಮಹಿಳೆಯರು ತಮ್ಮ ಕುಶಲತೆಗೆ ಸಂಬಂಧಿಸಿದ ಆಸಕ್ತಿವುಳ್ಳ ವಿವಿಧ ತರಬೇತಿ ಪಡೆದು ಸಣ್ಣ ಬಂಡವಾಳದಿಂದ ಪ್ರಾರಂಭಿಸಿ ಬದುಕಿನಲ್ಲಿ ಮುನ್ನಡೆಯಬೇಕು ಎಂದರು.
ಈ ವೇಳೆ ಮೆಕ್ಸಿಕೋದ ಯುನಿವರ್ಸಿಟಿ ಆಫ್ ಟೋಲ್ಸಾ ಸಂಸ್ಥೆಯಿಂದ ಗೌರವ ಡಾಕ್ಟರೇಟ್ ಪಡೆದ ಜಯಶ್ರೀ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.ಅಧ್ಯಕ್ಷತೆ ವಹಿಸಿದ್ದ ಚಿಂತಕಿ ಕವಿತಾ ದಂಡಿನ, ಅಬ್ದುಲ್ ಮುನಾಫ ಮುಲ್ಲಾ ಮಾತನಾಡಿದರು.
ಕೈಗಾರಿಕಾ ವಿಸ್ತರಣಾ ಅಧಿಕಾರಿ ಆರ್.ಡಿ. ಕದಡಿ, ನಿರ್ಮಲಾ ನಾಯಕ್, ರೇಣುಕಾ ಇಂಗಳಗಿ, ಶಾಂತಾ ಹೊಸಳ್ಳಿಮಠ, ರೇಣುಕಾ ಹಂದ್ರಾಳ, ಸಾವಿತ್ರಿ ಚಲವಾದಿ, ಸುವರ್ಣಾ ಹೂಲ್ಲೂರ, ಲಕ್ಷ್ಮೀ ಕಲಬುರ್ಗಿ, ಪಂಚಾಕ್ಷರಯ್ಯ ಹಿರೇಮಠ, ಉಷಾ ನಾಲವಾಡ, ಅನೀಲಕುಮಾರ ಹಿರೇಮಠ, ಜಾನಕಿ ಪಾಟೀಲ, ಮಹಾಲಕ್ಷ್ಮೀ ಜೂಜಗಾರ, ಪೂಜಾ ರಾಂಪೂರ, ಸುನೀತಾ ಸುಳೆಕರ್, ರೇಖಾ ಪೂಜಾರ, ಭುವನೇಶ್ವರಿ ಅಂಗಡಿ, ಪ್ರಜ್ಞಾ ಹೂಗಾರ, ಪುಷ್ಪಾ ಚುಳಕಿ, ಕೀರ್ತಿ ಇಟಗಿ, ಪ್ರಿಯಾಂಕಾ ಲಮಾಣಿ, ಗೌರಮ್ಮ ನಡುವಿನಹಳ್ಳಿ, ಪ್ರಿಯದರ್ಶಿನಿ ಮಾದಗುಂಡಿ ಮಂತಾದವರು ಇದ್ದರು. ಪುಷ್ಪಾ ಮುನವಳ್ಳಿ ಹಾಗೂ ರಶ್ಮಿಕಾ ಹಿರೇಮಠ ಪ್ರಾರ್ಥಿಸಿದರು. ಲಲಿತಾ ಸಂಗನಾಳ ಸ್ವಾಗತಿಸಿದರು. ಮಂಜುಳಾ ಮಲ್ಲಾಪುರ ಪರಿಚಯಿಸಿದರು. ಪುಷ್ಪಾ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀಣಾ ಬೈಲಿ ನಿರೂಪಿಸಿದರು. ರೇಖಾ ಶಿಗ್ಲಿಮಠ ವಂದಿಸಿದರು.