ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು

KannadaprabhaNewsNetwork |  
Published : Jun 08, 2025, 01:36 AM ISTUpdated : Jun 08, 2025, 01:37 AM IST
ಸಿಕೆಬಿ-5 ಕೌಶಲ್ಯ ಕರ್ನಾಟಕ ಯೋಜನೆಯಡಿಯಲ್ಲಿ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ   ಪ್ರಮಾಣ ಪತ್ರಗಳನ್ನು ಡಾ.ಎನ್.ಲೋಕನಾಥ್ ವಿತರಿಸಿದರು | Kannada Prabha

ಸಾರಾಂಶ

ಮಹಿಳೆಯರಿಗಾಗಿ ಸರ್ಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿವೆ. ಈ ಯೋಜನೆಗಳ ಪ್ರಯೋಜನ ಪಡೆಯುವುದರ ಜೊತೆಗೆ ತಾವು ಮೂರು ತಿಂಗಳ ಹೊಲಿಗೆ ತರಬೇತಿ ಪಡೆದ ನೀವು ತಮ್ಮ ಸ್ವಂತ ಉದ್ಯಮಿಗಳನ್ನ ಪ್ರಾರಂಭಿಸುವಂತಹ ಸಶಕ್ತ ಮಹಿಳೆಯರಾಗಿ ಹೊರಹೊಮ್ಮಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಲು ಪ್ರತಿಯೊಬ್ಬ ಮಹಿಳೆಯು ಆತ್ಮವಿಶ್ವಾಸವನ್ನು ತೋರಬೇಕು ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ. ಮೌಲ್ಯಮಾಪನ ಕುಲಸಚಿವ ಡಾ.ಎನ್.ಲೋಕನಾಥ್ ತಿಳಿಸಿದರು.

ನಗರದ 23ನೇ ವಾರ್ಡಿನ ಹಳೆ ಕೆನರಾ ಬ್ಯಾಂಕ್ ಕಟ್ಟಡದಲ್ಲಿನ ಐ ಸಾಪ್ಟೆಕ್ ಅಕಾಡಮಿ ಪ್ರೈ ಲಿಮಿಟೆಡ್ ವತಿಯಿಂದ ನಡೆದ ಕೌಶಲ ಕರ್ನಾಟಕ ಯೋಜನೆಯಡಿ ಮೂರು ತಿಂಗಳ ಹೊಲಿಗೆ ತರಬೇತಿ ಪಡೆದ 90 ಮಂದಿ ಮಹಿಳೆಯರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದರು.

ಸ್ವಂತ ಉದ್ಯಮ ಆರಂಭಿಸಿ

ಮಹಿಳೆಯರಿಗಾಗಿ ಸರ್ಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿವೆ. ಈ ಯೋಜನೆಗಳ ಪ್ರಯೋಜನ ಪಡೆಯುವುದರ ಜೊತೆಗೆ ತಾವು ಮೂರು ತಿಂಗಳ ಹೊಲಿಗೆ ತರಬೇತಿ ಪಡೆದ ನೀವು ತಮ್ಮ ಸ್ವಂತ ಉದ್ಯಮಿಗಳನ್ನ ಪ್ರಾರಂಭಿಸುವಂತಹ ಸಶಕ್ತ ಮಹಿಳೆಯರಾಗಿ ಹೊರಹೊಮ್ಮಬೇಕು. ಆ ಮೂಲಕ ವಿದ್ಯಾವಂತ ನಿರುದ್ಯೋಗಿಗಳಿಗೆ ಯಾವುದೇ ಉದ್ಯೋಗದ ಖಾತ್ರಿ ಇಲ್ಲದವರಿಗೆ ನಮ್ಮ ಕೈಲಾದ ಸಹಾಯ ಸಹಾನುಭೂತಿಯನ್ನ ನೀಡುವುದರ ಜೊತೆಗೆ ಅವರನ್ನು ಸಹ ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂದರು.

ಇನ್ನು ಮೊಬೈಲ್ ಗಳನ್ನು ತಾವು ಮೋಬೈಲ್ ನಲ್ಲಿ ಕೇವಲ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಚಾಟಿಂಗ್ ಮಾಡಲು ಮಾತ್ರ ಮೊಬೈಲ್ ಬಳಸುವ ಬದಲು, ಮೊಬೈಲ್ ನ ಗೂಗಲ್‌ನಲ್ಲಿರುವ ಎಂಐ ಕೃತಕ ಬುದ್ದಿ ಮೆತ್ತೆ ಬಳಸಿ ತಮ್ಮ ವೃತ್ತಿಗೆ ಅನುಕೂಲವಾಗುವ ವಿಷಯಗಳನ್ನು ಮಾತ್ರ ಪಡೆಯಲು ಬಳಸಿ ಕೊಂಡಲ್ಲಿ ತಮಗೂ ಉಪಯೋಗವಾಗುತ್ತದೆ. ಕೇವಲ ನಾನ ಚಟಗಳಿಗೆ ಉಪಯೋಗಿಸದೆ ಒಳ್ಳೆಯ ಸದುದ್ದೇಶಕ್ಕೆ ಬಳಕೆ ಮಾಡಿಕೊಂಡರೆ ಅದು ಆತ್ಮವಿಶ್ವಾಸದ ಬದುಕಿಗೆ ಸಹಕಾರಿಯಾಗಲಿದೆ ಎಂದರು.

ಮಹಿಳೆಗೂ ಸಾಕಷ್ಟು ಅವಕಾಶ

ಐ ಸಾಪ್ಟೆಕ್ ಅಕಾಡಮಿ ಪ್ರೈ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಜಿ.ಗೋವಿಂದ್ ಮಾತನಾಡಿ, ಹಿಂದೆ ಹೆಣ್ಣು ಮಗು ಹುಟ್ಟಿದರೆ ಮೂಗು ಮುರಿಯುವ ಕಾಲವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇದು ಬದಲಾಗಿದೆ. ಸಮಾಜದಲ್ಲಿ ಹೆಣ್ಣಿಗೆ ಗಂಡಿನಷ್ಟೇ ಸಮಾನ ಅವಕಾಶಗಳಿದ್ದು, ಹೆಣ್ಣು ಮಕ್ಕಳಿಗೆ ಒಳ್ಳೆಯ ಮತ್ತು ಕಡ್ಡಾಯ ಶಿಕ್ಷಣ ನೀಡುವಂತಾಗಬೇಕು, ಮಹಿಳೆಯರು ದುಡಿಯುವಂತಾಗಬೇಕು. ದುಡಿದು ಬದುಕಿದರೆ ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು, ಇದರಿಂದ ಆತ್ಮಾಭಿಮಾನ ಮತ್ತು ಆತ್ಮಸ್ಥೈರ್ಯ ಹೆಚ್ಚಲಿದೆ ಎಂದರು.

ಭಾರತದ ಸಂವಿಧಾನದಲ್ಲಿ ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳು ಇದ್ದು, ಅವುಗಳನ್ನು ಬಳಸಿಕೊಳ್ಳುವಂತಾಗಬೇಕು. ಕಾನೂನಿನಲ್ಲಿ ಮಹಿಳೆಯರಿಗೆ ವಿಶೇಷ ರಕ್ಷಣೆ ಒದಗಿಸಿದೆ. ಇಂದಿರಾ ಗಾಂಧಿ, ಕಲ್ಪನಾ ಚಾವ್ಲಾ ಮತ್ತಿತರ ಮಹಿಳೆಯರು ರಾಷ್ಟ್ರದಲ್ಲಿ ಮಹಾನ್ ಸಾಧನೆ ಮಾಡಿದ್ದಾರೆ. ಅಂತಹವರ ಹಾದಿಯಲ್ಲಿ ಮುನ್ನುಗ್ಗಬೇಕು ಎಂದರು.

ಕುಲಸಚಿವರಿಗೆ ಸನ್ಮಾನ

ಇದೆ ವೇಳೆ ಸಾಫ್ಟೇಕ್ ಗೋವಿಂದ ಅವರು ಬೆಂಗಳೂರು ವಿವಿಗೆ ನೂತನವಾಗಿ ನೇಮಕಗೊಂಡ ಕುಲಸಚಿವ ಡಾ. ಎನ್. ಲೋಕನಾಥ್ ಹಾಗೂ ವಾಲ್ಮೀಕಿ ರತ್ನ ಪ್ರಶಸ್ತಿ ಪಡೆದ ಪತ್ರಕರ್ತ ಎಂ.ಕೃಷ್ಣಪ್ಪ ಅವರನ್ನು ಗೌರವಿಸಿ ಸನ್ಮಾನಿಸಿದರು.

ಸಂದರ್ಭದಲ್ಲಿ ಐ ಸಾಫ್ಟಕ್ ಅಕಾಡೆಮಿ ಪ್ರವೇಟ್ ಲಿ. ವ್ಯವಸ್ಥಾಪಕ ನಿರ್ದೇಶಕ ಸಾಫ್ಟಕ್ ಗೋವಿಂದ್, ಆಡಳಿತ ವಿಭಾಗದ ಶ್ವೇತ, ಗೌತಮಿ, ಅರ್ಪಿತ, ಚೈತನ್ಯ, ಬೋಧನಾ ವಿಭಾಗದ ಶಶಿಕಲಾ, ರಮ್ಯಾ ವೇಧ, ನಾಜಿಯಾ, ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''