ಕನಕಪುರ: ಹಾರೋಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಆವರಣದಲ್ಲಿ 14 ದಿನಗಳ ಸೆಣಬು ಉತ್ಪನ್ನಗಳ ತಯಾರಿಕಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಹಾಗೂ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ನಡೆಯಿತು.
ನಾಗಭೂಷಣ್ ಮಾತನಾಡಿ, ಹಾರೋಹಳ್ಳಿಯ ಕೆನರಾ ಬ್ಯಾಂಕ್ ತರಬೇತಿ ಸಂಸ್ಥೆಯವರು ಕೌಶಲ್ಯಾಭಿವೃದ್ಧಿ ತರಬೇತಿ ನೀಡುತ್ತಿರುವುದು ಉತ್ತಮ ಕೆಲಸ. ನಮ್ಮ ಮಹಿಳೆಯರು ಸ್ವ ಉದ್ಯೋಗ ಮಾಡುವುದರಿಂದ ಆರ್ಥಿಕ ಸಬಲೀಕರಣ ಸಾಧಿಸಬಹುದು. ಈ ತರಬೇತಿ ತಮ್ಮ ಜೀವನದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂದರು.
ಸಂಸ್ಥೆಯ ನಿರ್ದೇಶಕ ಚಂದ್ರಚರಣ್ ಮಾತನಾಡಿ, ಸೆಣಬು ಉತ್ಪನ್ನಗಳ ತಯಾರಿಕೆಯಿಂದ ಉತ್ತಮ ಆದಾಯ ಗಳಿಸಬಹುದು. ಮಾರುಕಟ್ಟೆ ವಿಧಾನಗಳ ಬಗ್ಗೆ ವಿವರಣೆ ನೀಡಿದರು. ತರಬೇತಿಯಿಂದ ಕೇವಲ ಸ್ವ ಉದ್ಯೋಗಿಗಳಾಗಿ ಮಾತ್ರ ಉಳಿಯದೇ ಉದ್ಯಮಿಗಳಾಗಿ ಮುಂದುವರೆಯಬೇಕೆಂಬುದು ನಮ್ಮ ಆಶಯ ಎಂದರು.ಕಾರ್ಯಕ್ರಮದಲ್ಲಿ ತರಬೇತಿ ಸಂಸ್ಥೆ ಉಪನ್ಯಾಸಕಿ ನೇತ್ರಾವತಿ, ಹಾರೋಹಳ್ಳಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರು ಹಾಗೂ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.(2 ಕಾಲಂ ಸುದ್ದಿ 1 ಕಾಲಂ ಫೋಟೋ)
ಕೆ ಕೆ ಪಿ ಸುದ್ದಿ 02:ಹಾರೋಹಳ್ಳಿ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.