ಮಹಿಳೆಯರು ದೈನಂದಿನ ಕೆಲಸದ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಬೇಕು: ಜುಬೇದ

KannadaprabhaNewsNetwork |  
Published : Sep 21, 2025, 02:00 AM IST
 ನರಸಿಂಹರಾಜಪುರ ಪಟ್ಟಣದ ಮೇದರ ಬೀದಿಯ ಅಂಗನವಾಡಿ ಕೇಂದ್ರದಲ್ಲಿ ನಡೆದ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದ ಉದ್ಘಾಟಿಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರ: ಮಹಿಳೆಯರು ತಮ್ಮ ದೈನಂದಿನ ಕೆಲಸದ ಜೊತೆಗೆ ತಮ್ಮ ಆರೋಗ್ಯದ ಕಡೆಗೂ ಗಮನ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಕರೆ ನೀಡಿದರು.

- ಮೇದರಬೀದಿ ಅಂಗನವಾಡಿಯಲ್ಲಿ ಪೋಷಣ್ ಮಾಸಾಚರಣೆ

ನರಸಿಂಹರಾಜಪುರ: ಮಹಿಳೆಯರು ತಮ್ಮ ದೈನಂದಿನ ಕೆಲಸದ ಜೊತೆಗೆ ತಮ್ಮ ಆರೋಗ್ಯದ ಕಡೆಗೂ ಗಮನ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಕರೆ ನೀಡಿದರು.

ಪಟ್ಟಣದ ಮೇದರಬೀದಿ ಅಂಗನವಾಡಿ ಕೇಂದ್ರದಲ್ಲಿ ಶುಕ್ರವಾರ ನಡೆದ ಪೋಷಣ್ ಮಾಸಾಚರಣೆ ಉದ್ಘಾಟಿಸಿ ಮಾತನಾಡಿ, ಗರ್ಭಿಣಿಯರು ಹೆಚ್ಚು ಪೌಷ್ಠಿಕಾಂಶಗಳಿರುವ ಆಹಾರ ಪದಾರ್ಥಗಳನ್ನೇ ಸೇವಿಸಬೇಕು. ಹಣ್ಣು, ತರಕಾರಿ, ಸೊಪ್ಪು, ಬೇಳೆ ಕಾಳನ್ನು ಸೇವಿಸಬೇಕು. ಪೌಷ್ಠಿಕ ಆಹಾರದ ಸೇವನೆಯಿಂದ ಮಗು ಆರೋಗ್ಯವಾಗಿರುತ್ತದೆ. ಗರ್ಭಿಣಿಯರು, ಬಾಣಂತಿಯರು ತಮ್ಮ ವೈಯಕ್ತಿಕ ಸ್ವಚ್ಛತೆ ಬಗ್ಗೆ ಹೆಚ್ಚಿನ ಕಾಳಜಿ ತೋರಿಸಬೇಕು. ನಾನು ವೈಯಕ್ತಿಕವಾಗಿ ವಾರದಲ್ಲಿ ಒಂದು ದಿನ, ಒಂದೊಂದು ಅಂಗನವಾಡಿ ಕೇಂದ್ರಗಳಿಗೆ ಉಚಿತವಾಗಿ ತರಕಾರಿ ನೀಡುತ್ತೇನೆ. ಪಟ್ಟಣ ಪಂಚಾಯಿತಿಯಿಂದ ಅಂಗನವಾಡಿ ಕೇಂದ್ರಗಳಿಗೆ ಬೇಕಾದ ಮೂಲಭೂತ ಸೌಕರ್ಯ ಒದಗಿಸಲು ಸಂಪೂರ್ಣ ಸಹಕಾರ ನೀಡುತ್ತೇನೆ ಎಂಬ ಭರವಸೆ ನೀಡಿದರು.ಸಿಡಿಪಿಒ ಇಲಾಖೆ ಮೇಲ್ವಿಚಾರಕಿ ಸಾವಿತ್ರಿ ಮಾತನಾಡಿ, ಪ್ರತಿ ವರ್ಷ ಒಂದು ತಿಂಗಳು ಪೂರ್ತಿ ಎಲ್ಲಾ ಅಂಗನವಾಡಿ ಕೇಂದ್ರ ಗಳಲ್ಲೂ ಪೋಷಣ್ ಮಾಸಾಚರಣೆ ಆಚರಿಸುವ ಮೂಲಕ ಪೌಷ್ಠಿಕ ಆಹಾರ ಸೇವನೆ ಬಗ್ಗೆ ಮಕ್ಕಳಿಗೆ, ಪೋಷಕರಿಗೆ, ಗರ್ಭೀಣಿ ಯರಿಗೆ ಅರಿವು ಮೂಡಿಸಲಾಗುವುದೆ ಎಂದರು.ಕಾರ್ಯಕ್ರಮದಲ್ಲಿ ಸ್ಥಳೀಯವಾಗಿ ಬೆಳೆದ ತರಕಾರಿ, ಹಣ್ಣುಗಳ ಪ್ರದರ್ಶನ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಪಂ ಉಪಾಧ್ಯಕ್ಷೆ ಉಮಾಕೇಶವ್ ವಹಿಸಿದ್ದರು. ಆರೋಗ್ಯ ಇಲಾಖೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪಪಂ ಸದಸ್ಯೆ ಸುರಯ್ಯಭಾನು, ನಿವೃತ್ತ ಸೈನಿಕ ಸುಬ್ರಮಣ್ಯಶೆಟ್ಟಿ, ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಜಯಂತಿ, ಸದಸ್ಯೆ ಪ್ರೇಮಾ ಕೋಟ್ಯಾನ್, ಸುನೀತ, ನಿವೃತ್ತ ಶಿಕ್ಷಕ ರಾಜಕುಮಾರ್, ಕೆಪಿಎಸ್ ಶಾಲೆ ಮುಖ್ಯ ಶಿಕ್ಷಕಿ ರಾಜೇಶ್ವರಿ, ಅಂಗನವಾಡಿ ಕಾರ್ಯಕರ್ತೆಯರಾದ ಅನಿತಾ, ಆಶಾ, ಲಕ್ಷ್ಮೀದೇವಿ, ಕವಿತಾ, ಶೈಲಾ, ಮಂಜುಳ, ಹೇಮ, ಜಯಂತಿ, ಆಶಾ ಕಾರ್ಯಕರ್ತೆ ಕುಸುಮಾ, ಅಂಗನವಾಡಿ ಸಹಾಯಕಿ ಆಶಾ ಬಸವರಾಜ್ ಇದ್ದರು.

PREV

Recommended Stories

ಕುಕ್ಕೆ ಸುಬ್ರಹ್ಮಣ್ಯದಲ್ಲಿ 40 ಸೇವೆಗಳ ದರ ಪರಿಷ್ಕರಣೆ
ಟಾಕ್ಸಿಕ್‌ ಮುಂಬೈ ಶೂಟ್‌ ಮುಗಿಸಿ ಲಂಡನ್‌ಗೆ ಹಾರಿದ ಯಶ್‌