ಬ್ಯಾಡಗಿ: ಮಹಿಳೆ ಯಾರ ಮೇಲೂ ಹೊರೆಯಾಗುವುದು ಬೇಡ, ಹೀಗಾಗಿ ಮಹಿಳಾ ಸಬಲಿಕರಣ ಕೇವಲ ಭಾಷಣಕ್ಕೆ ಸೀಮಿತವಾಗುವುದು ಬೇಡ ಸರ್ಕಾರಿ ಸೇವೆ ಸೇರುವ ಮಹಿಳಾ ಕ್ರೀಡಾಪಟುಗಳಿಗೆ ವಿಶೇಷ ರಿಯಾಯಿತಿ ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಸರ್ಕಾರಗಳಿಂದಾಗಬೇಕಾಗಿದೆ ಎಂದು ಇನ್ನರವೀಲ್ ಕ್ಲಬ್ ಅಧ್ಯಕ್ಷೆ ಪ್ರತಿಭಾ ಮೇಲಗಿರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಎಸ್ಎಸ್ ಪಿಎನ್ ಹೆಣ್ಣುಮಕ್ಕಳ ಶಾಲೆಯಲ್ಲಿನ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಹಾಗೂ ಕ್ರೀಡಾಪಟುಗಳ ಶೈಕ್ಷಣಿಕ ಅಭಿವೃದ್ಧಿಗೆ ಇನ್ನರವೀಲ್ ಕ್ಲಬ್ ವತಿಯಿಂದ ವಿವಿಧ ಸೌಲಭ್ಯ ವಿತರಿಸಿ ಮಾತನಾಡಿದರು.ಮಹಿಳೆಯರನ್ನು ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಅವರನ್ನು ಸಬಲಗೊಳಿಸಿದಂತಹ ದೇಶಗಳು ಮತ್ತು ಸರ್ಕಾರಗಳು ಇಂದು ಸುಭೀಕ್ಷವಾಗಿವೆ ಎಂದರು.
ಮಹಿಳೆ ಯಾರ ಮೇಲೂ ಹೊರೆಯಾಗುವುದು ಬೇಡ: ಇನ್ನರವೀಲ್ ಕ್ಲಬ್ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಮಹಿಳೆ ಅಬಲೆಯಲ್ಲ ಸಬಲೆ ಎಂಬುದನ್ನು ಸಮಾಜಕ್ಕೆ ದೃಢಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹೊರಗಿನ ಜಗತ್ತು ಕಾಣದಿರುವಂತಹ ಪ್ರತಿಭೆ ಬೆಳಕಿಗೆ ತರುವಂತಹ ಕೆಲಸ ಇನ್ನರವೀಲ್ ಕ್ಲಬ್ ನಿಂದಾಗಲಿದೆ, ಇದರಲ್ಲಿ ಯಾವುದೇ ಸಂಶಯ ಬೇಡ ಎಂದ ಅವರು, ಸದರಿ ವಿಷಯದಲ್ಲಿ ಇನ್ನರವೀಲ್ ಕ್ಲಬ್ ಮುಕ್ತ ಅಭಿಪ್ರಾಯ ಹೊಂದಿದೆ ಎಂದರು.ಸಂಸಾರದ ಜೊತೆಗೆ ಸಮಾಜ ಸೇವೆ: ಕುಟುಂಬ ನಿರ್ವಹಣೆ ಮಧ್ಯೆಯೂ ಸಾರ್ವಜನಿಕ ಬದುಕಿನಲ್ಲಿ ತಮ್ಮದೇ ಆದ ಕೊಡುಗೆ ಇರಬೇಕಾಗುತ್ತದೆ, ತಮ್ಮದೇ ದುಡಿಮೆ ಹಣದಲ್ಲಿ ಬಡವರಿಗೆ ಸಹಾಯ ಸಹಕಾರ ನೀಡುವುದು ಕೂಡ ಉತ್ತಮ ಪುಣ್ಯದ ಕೆಲಸಗಳಲ್ಲಿ ಒಂದಾಗಿದ್ದು, ಈ ನಿಟ್ಟಿನಲ್ಲಿ ಇನ್ನರವೀಲ್ ಕ್ಲಬ್ ಕಾರ್ಯೋನ್ಮುಖವಾಗಿದೆ ಎಂದರು.
ಈ ವೇಳೆ ಕ್ಲಬ್‌ನ ಸಂಧ್ಯಾರಾಣಿ ದೇಶಪಾಂಡೆ ಸ್ಕಿಲ್ ಡೆವಲಪ್ಮೆಂಟ್ ಕುರಿತು ಉಪನ್ಯಾಸ ನೀಡಿದರು, ಶಾಲೆಯ ಇಬ್ಬರು ಮಹಿಳಾ ಕ್ರೀಡಾಪಟುಗಳ ಶಾಲಾ ಶುಲ್ಕ, ಇಬ್ಬರು ವಿದ್ಯಾರ್ಥಿಗಳ ವಾರ್ಷಿಕ ಶೈಕ್ಷಣಿಕ ವೆಚ್ಚ, ಶಾಲೆಯ ಅಡುಗೆ ಮನೆಗೆ ಉಪಯುಕ್ತ ಪರಿಕರ, ಶಾಲೆಯ ಪ್ಯೂನ್ ಬ್ಲಾಂಕೆಟ್ ಕಿಟ್, ಬಿಸಿಯೂಟ ತಯಾರಕರಿಗೆ ವಿಶೇಷ ಸಮವಸ್ತ್ರ ಸೇರಿದಂತೆ ಇನ್ನಿತರ ಸೌಲಭ್ಯ ನೀಡಲಾಯಿತು.ಈ ಸಂದರ್ಭದಲ್ಲಿ ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಲಕ್ಷ್ಮಿ ಉಪ್ಪಾರ ಸದಸ್ಯರಾದ ಲತಾ ಶೆಟ್ಟರ ಮತ್ತು ಮಮತಾ ಚಂದ್ರಾಪಟ್ಟಣ, ಮಹೇಶ್ವರಿ ಪಸಾರದ, ವಿಜಯಲಕ್ಷ್ಮಿ ಯಾದವಾಡ, ಶೋಭಾ ಅಂಗಡಿ, ವಿಜಯಲಕ್ಷ್ಮಿ ಗೌಡರ, ಪುಷ್ಪ ಇಂಡಿಮಠ, ವಿಜಯಲಕ್ಷ್ಮಿ ಪಾಟೀಲ, ಗುರುದೇವಿ ಉಕ್ಕುಂದ, ಸುಶೀಲ ದೊಡ್ಡಮನಿ, ಸುಧಾ ಮಾಳೇನಹಳ್ಳಿ, ಎಸ್ ಎಸ್ ಪಿಎನ್ ಶಾಲೆಯ ಮುಖ್ಯ ಶಿಕ್ಷಕ ಸುಭಾಸ ಎಲಿ ಇನ್ನಿತರ ಶಿಕ್ಷಕ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.