ಸಹಕಾರಿ ಕ್ಷೇತ್ರಗಳಲ್ಲಿ ಮಹಿಳೆಯರು ಹೆಚ್ಚು ಪಾಲ್ಗೊಳ್ಳಲಿ: ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ

KannadaprabhaNewsNetwork |  
Published : Nov 21, 2025, 02:30 AM IST
ಸ | Kannada Prabha

ಸಾರಾಂಶ

ಸಹಕಾರಿ ಕ್ಷೇತ್ರಗಳಲ್ಲಿ ಮಹಿಳೆಯರು ಹೆಚ್ಚು ಹೆಚ್ಚು ಪಾಲ್ಗೊಂಡು ಆರ್ಥಿಕವಾಗಿ ಸದೃಢರಾಗಿ

ಹರಪನಹಳ್ಳಿ: ಸಹಕಾರಿ ಕ್ಷೇತ್ರಗಳಲ್ಲಿ ಮಹಿಳೆಯರು ಹೆಚ್ಚು ಹೆಚ್ಚು ಪಾಲ್ಗೊಂಡು ಆರ್ಥಿಕವಾಗಿ ಸದೃಢರಾಗಿ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.

ಅವರು ಪಟ್ಟಣದ ರೇಣುಕಾಚಾರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು.

ರೈತರಿಗೆ ಅನುಕೂಲವಾಗಲೆಂದು ಸಹಕಾರ ಸಂಘಗಳ ಸ್ಥಾಪನೆ ಯಾಗಿದ್ದು, ಸಹಕಾರಿ ಕ್ಷೇತ್ರದಲ್ಲಿ ರೈತರಿಗೆ ಇನ್ನೂ ಸರಿಯಾದ ಸೌಕರ್ಯ ಸಿಗುತ್ತಾ ಇಲ್ಲ, ನಿಷ್ಠೆ ಇರಬೇಕು ಎಂದರು.

ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಜೀವನ ಕಟ್ಟಿಕೊಳ್ಳಲು ಸಹಕಾರ ಸಂಘಗಳು ಪ್ರಮುಖ ಪಾತ್ರ ವಹಿಸಿವೆ. ಸಾಲ ಪಡೆದು ಸರಿಯಾಗಿ ಮರು ಪಾವತಿ ಮಾಡಿ ತಾವು ಬೆಳೆದು ಸಹಕಾರ ಕ್ಷೇತ್ರ ಸಹ ಬೆಳೆಸಿ ಎಂದು ಹೇಳಿದರು.ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಮುಂದಾಗಬೇಕು ಎಂದು ಶ್ರೀಗಳು ಸಹಕಾರ ಕ್ಷೇತ್ರದ ಪ್ರತಿನಿಧಿಗಳಿಗೆ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತಾ ಸಹಕಾರಿಯ ಅಧ್ಯಕ್ಷ ಜಿ.ನಂಜನಗೌಡ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳು ಸಾಕಷ್ಟು ಇವೆ,ಸಹಕಾರಿ ಕ್ಷೇತ್ರ ಆರ್ಥಿಕ ಅಸಮಾನತೆ ಹೋಗಲಾಡಿಸುತ್ತದೆ, ಸಾಮಾಜಿಕ ಸಮಾನತೆ ಕೊಟ್ಟಿದೆ ಆದರೆ ಇಲ್ಲೂ ಸಹ ಭ್ರಷ್ಟಾಚಾರ ನಿರ್ಮೂಲನೆಯಾಗಬೇಕಿದೆ ಎಂದು ಹೇಳಿದರು.

ಸರ್ಕಾರ ಮಾಡುವ ಸಾಲಮನ್ನಾ ಯೋಜನೆಯಿಂದ ಸಹಕಾರಿ ಕ್ಷೇತ್ರದಲ್ಲಿ ಆರ್ಥಿಕ ಸ್ಥಿತಿಗೆ ಹೊಡೆತ ಬೀಳುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಡಿಸಿಸಿ ಬ್ಯಾಂಕ್‌ ನಿರ್ದೆಶಕ ವೈ.ಡಿ.ಅಣ್ಣಪ್ಪ ಅವರು ಸಹಕಾರ ಸಪ್ತಾಹ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ನಡೆಸಬೇಕು ಎಂದು ಸಲಹೆ ನೀಡಿದ ಅವರು ಎಲ್ಲರೂ ಸೇರಿ ಸಹಕಾರಿ ಸಂಘಗಳನ್ನು ಬೆಳೆಸಬೇಕು ಎಂದು ನುಡಿದರು.

ದಾವಣಗೆರೆಯ ಎಚ್‌.ಬಿ.ಮಂಜುನಾಥ ಉಪನ್ಯಾಸ ನೀಡಿದರು. ಬಳ್ಳಾರಿ ಸಹಕಾರ ಸಂಘಗಳ ಉಪನಿಬಂದಕ ಜಿ.ಎಂವೀರಭದ್ರಯ್ಯನವರು ಪ್ರಸ್ಥಾವಿಕವಾಗಿ ಮಾತನಾಡಿದರು.

ರಾ ಬ ಕೊ ವಿ ಹಾಲು ಒಕ್ಕೂಟದ ನಿರ್ದೆಶಕಿ ಎಚ್‌.ರತ್ನಮ್ಮ ಅಶೋಕ, ಪಿಕಾರ್ಡ ಬ್ಯಾಂಕ್‌ ಅಧ್ಯಕ್ಷ ಲಾಟಿದಾದಾಪೀರ, ಸಹಕಾರ ಕ್ಷೇತ್ರದ ವಿವಿಧ ಸಂಘ, ಯೂನಿಯನ್‌ ಗಳ ನಿರ್ಧೆಶಕರಾದ ಎಂ.ದೊಡ್ಡಬಸಪ್ಪ, ಕೆ.ಮೆಹಬೂಬ್‌ ಭಾಷ. ಎಚ್.ಚೆನ್ನಬಸಪ್ಪ, ಎಚ್.ತಿಮ್ಮನಾಯ್ಕ, ವಹಾಬ್, ಸಹಾಯಕ ನಿಬಂದಕ ಶರಣಬಸಪ್ಪ, ಟಿಎಪಿಸಿಎಂಎಸ್‌ ಆಡಳಿತ ಮಂಡಳಿ ಆಡಳಿತಾಧಿಕಾರಿ ಜಿ.ಎಸ್.ಸುರೇಂದ್ರ, ಬಿಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ನಿರಂಜನಸ್ವಾಮಿ, ಬಿ90 ಸೊಸೈಟಿ ಅಧ್ಯಕ್ಷ ಎಂ.ವಿ.ಕೃಷ್ಣ, ಬಿ.ಮನೋಹರ, ಎಚ್.ಅಂಜಿನಪ್ಪ, ಟಿಎಪಿಸಿಎಂಎಸ್‌ ನ ವ್ಯವಸ್ಥಾಪಕ ತಿರುಪತಿ, ಬಿ.90 ಸೊಸೈಟಿ ಇಒ ಬಸವರಾಜ ಇತರರು ಉಪಸ್ಥಿತರಿದ್ದರು.

PREV

Recommended Stories

8 ವರ್ಷದ ಬಾಲಕಿ ಹೊಟ್ಟೇಲಿ ಮೂರು ಕೆ.ಜಿ. ಕೂದಲು ಪತ್ತೆ! ಇದೊಂದು ಕಾಯಿಲೆ
ಜೈಪುರ ಸಾಹಿತ್ಯೋತ್ಸವ 2026ರಲ್ಲಿ ಬಾನು ಮುಷ್ತಾಕ್, ಸುಧಾಮೂರ್ತಿ