ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಅಗತ್ಯ: ಮಮತಾ ಗಟ್ಟಿ

KannadaprabhaNewsNetwork |  
Published : Mar 28, 2026, 02:30 AM IST
ಮಹಿಳಾ ಸಾಧಕರಿಗೆ ಸನ್ಮಾನ  | Kannada Prabha

ಸಾರಾಂಶ

ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಅಗತ್ಯ, ಜಿಲ್ಲೆಯ ಮಹಿಳೆಯರು ತಮ್ಮ ಕುಟುಂಬದ ಆರ್ಥಿಕ ನಿರ್ವಹಣೆಯನ್ನು ಕಷ್ಟಪಟ್ಟು ಎಚ್ಚರಿಕೆಯಿಂದ ಮಾಡುತ್ತಾ ಬಂದಿದ್ದಾರೆ ಎಂದು ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ತಿಳಿಸಿದ್ದಾರೆ.

ಮಂಗಳೂರು: ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಅಗತ್ಯ, ಜಿಲ್ಲೆಯ ಮಹಿಳೆಯರು ತಮ್ಮ ಕುಟುಂಬದ ಆರ್ಥಿಕ ನಿರ್ವಹಣೆಯನ್ನು ಕಷ್ಟಪಟ್ಟು ಎಚ್ಚರಿಕೆಯಿಂದ ಮಾಡುತ್ತಾ ಬಂದಿದ್ದಾರೆ ಎಂದು ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ತಿಳಿಸಿದ್ದಾರೆ.

ಅವರು ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಕಚೇರಿ ಸಭಾಂಗಣ ಗುರುವಾರ ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಗ್ಲೋಬಲ್ ಗ್ರೀನ್ ಇಕೋ ಫೌಂಡೇಶನ್ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಮತ್ತು ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ, ಮಹಿಳಾ ಸಾಧಕರಿಯರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಮಹಿಳೆ ಕುಟುಂಬದಲ್ಲಿ ವಿವಿಧ ರೀತಿಯಲ್ಲಿ ಕುಟುಂಬದ ಸಮಾಜದ ಶಕ್ತಿಯಾಗಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಯ ಮೂಲಕ ಮಹಿಳೆಯರ ಖಾತೆಗೆ ಹಣ ಜಮೆಯಾಗುತ್ತಿದೆ. ಇದರಿಂದ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿಯಾಗುತ್ತದೆ ಎಂದರು.ಮಂಗಳೂರು ಸಂಚಾರಿ ಪೊಲೀಸ್ ಸಹಾಯಕ ಆಯಕ್ತೆ ನಜ್ಮಾ ಫಾರೂಕಿ ಮಾತನಾಡಿ, ತೊಟ್ಟಿಲು ತೂಗುವ ಕೈ ಜಗತ್ತು ಆಳುತ್ತವೆ ಎನ್ನುವ ಮಾತಿನಂತೆ ಮಹಿಳೆಯರು ದೇಶದಲ್ಲಿ ಸಾಧನೆ ಮಾಡಿದ್ದಾರೆ. ಆದರೆ ಇನ್ನೂ ಸಾಕಷ್ಟು ಹಿಂದುಳಿದ ಪ್ರದೇಶದಲ್ಲಿ ಮಹಿಳೆಯರು ಸ್ಥಾನಮಾನ ಪಡೆಯಲು ಕಷ್ಟ ಪಡುತ್ತಿದ್ದಾರೆ. ಈ ಪರಿಸ್ಥಿತಿ ಬದಲಾಗಬೇಕಾಗಿದೆ. ಪೊಲೀಸ್ ಇಲಾಖೆ ಮಹಿಳೆಯರ ರಕ್ಷಣೆಗೆ ಗುಲಾಬಿ ಹೊಯ್ಸಳ ಪೊಲೀಸ್ ತಂಡ ಇದೆ. ಮಹಿಳಾ ಸುರಕ್ಷತೆ ಪೊಲೀಸರ ಜೊತೆ ಸಾಮೂಹಿಕ ಜವಾಬ್ದಾರಿ ವಹಿಸಬೇಕಾಗಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಉಪ ಕಾರ್ಯದರ್ಶಿ ಜಯಲಕ್ಷ್ಮಿ ರಾಯಕೋಡ್ ಮಾತನಾಡಿ, ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಮಹಿಳಾ ದಿನಾಚರಣೆ ನಡೆಯುತ್ತಿದೆ. ಮಹಿಳಾ ಸಶಕ್ತತೆಗೆ ಪುರುಷ -ಮಹಿಳೆ ಪರಸ್ಪರ ಸಮಾನವಾಗಿ ಪೂರಕವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಉಸ್ಮಾನ್ ಎ, ದಕ್ಷಿಣ ಕನ್ನಡ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟ(ರಿ) ಅಧ್ಯಕ್ಷೆ ಶಕುಂತಳ ಇವರು ಸಾಧಕರನ್ನು ಸನ್ಮಾನಿಸಿದರು.

ವಲಯ-2 ರೋಟರಿ ಜಿಲ್ಲೆ 3181 ಅಸಿಸ್ಟಂಟ್‌ ಗವರ್ನರ್‌ ಪ್ರೊ. ಚೆನ್ನಗಿರಿ ಗೌಡ, ರಜನಿ ಭಟ್ (ಅಸಿಸ್ಟೆಂಟ್ ಗವರ್ನರ್, ವಲಯ-3 ರೋಟರಿ ಜಿಲ್ಲೆ 3181), ಚಂದ್ರಿಕಾ ಎಸ್. ನಾಯಕ್ (ಅಭಿವೃದ್ಧಿ ನಿರೀಕ್ಷಕರು, ಮಹಿಳಾ ಅಭಿವೃದ್ಧಿ ನಿಗಮ), ಸತೀಶ್ ಮೊಬೆನ್, (ಜಿಲ್ಲಾ ಸಂಪನ್ಮೂಲ ವ್ಯಕ್ತಿ, ಪಿ.ಎಂ.ಎಫ್.ಎ.ಇ. ಯೋಜನೆ), ಪುಷ್ಪರಾಜ್ ಬಿ.ಎನ್.(ಅಧ್ಯಕ್ಷರು, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಮಾಜಿ ರೋಟರಿ ಅಸಿಸ್ಟೆಂಟ್ ಗವರ್ನರ್ ರಾಜಗೋಪಾಲ ರೈ, ಮಾಜಿ ಅಧ್ಯಕ್ಷ ಸಂತೋಷ್ ಶೇಟ್, ರಾಜೇಶ್ ಶೆಟ್ಟಿ, ಕಾರ್ಯದರ್ಶಿ ವಿಕಾಸ್ ಕೋಟ್ಯಾನ್, ರೋಟರಿ ಪದಾಧಿಕಾರಿಗಳಾದ ಜಾಕ್ಸನ್ ಸಲ್ದಾನ,ಶೆಲ್ಡನ್ ಕ್ರಾಸ್ತಾ, ಡೆರಿಲ್ ಡಿ ಸೋಜ, ಪ್ರಮೀಳ ಶೆಟ್ಟಿ ಮತ್ತಿತರರಿದ್ದರು. ಮಹಿಳಾ ಸಾಧಕರಾದ ಜ್ಯೋತಿ ಕೆ. ಉಳೆಪ್ಪಾಡಿ, ದೇವಿಕಾ ಪುರುಷೋತ್ತಮ್, ಪೂರ್ಣಿಮಾ ರೈ, ಪ್ರಮೀಳಾ ರಾವ್, ಜಯಶ್ರೀ ರಟ್ಟಿಹಳ್ಳಿ, ವಿಭಾ ಎಸ್. ನಾಯಕ್, ಡಾ. ರಶ್ಮಿ ಕೆ.ಸುಜಾತ (ಅಂಗನವಾಡಿ ಶಿಕ್ಷಕಿ, ಅಶೋಕ್‌ ನಗರ) ಶ್ರದ್ಧಾ ಕೇಶವ ರಾಮಕುಂಜ, ಪೊಟ್ಟಮ್ಮ ಮಂಗಳೂರು, ಲಕ್ಷ್ಮೀ ಗಾಣಿಗ, ದೀಕ್ಷಿತಾ ಟಿ.ಎಸ್. ಇವರನ್ನು ಸನ್ಮಾನಿಸಲಾಯಿತು. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಘಟಕದ ಅಧ್ಯಕ್ಷ ಭಾಸ್ಕರ ರೈ ಕಟ್ಟ ಸ್ವಾಗತಿಸಿದರು. ಪ್ರಮೀಳಾ ಹೆಗ್ಡೆ ಮತ್ತು ಗೀತಾ ಬಿ. ರೈ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುರಿ ನಿರ್ಧಾರದಲ್ಲಿ ಸ್ಪಷ್ಟತೆ ಅಗತ್ಯ: ಡಾ.ಕುರಿಯನ್‌
ಬನ್ನಂಜೆ ಬ್ರಹ್ಮಕಲಶೋತ್ಸವ: ಚಪ್ಪರ ಮುಹೂರ್ತ ಸಂಪನ್ನ