ಕೊಪ್ಪಳ:
ಸಮಾಜದಲ್ಲಿ ಮಹಿಳೆ ಪಾತ್ರ ಮಹತ್ವದ್ದು ಎಂದು ವಿವಿ ಕುಲಪತಿ ಡಾ. ಬಿ.ಕೆ ರವಿ ಹೇಳಿದರು.ನಗರದ ಸರ್ಕಾರಿ ನೌಕರರ ಭವನದಲ್ಲಿ ಬೆಳಕು ಚಾರಿಟೇಬಲ್ ಟ್ರಸ್ಟ್ ಹಾಗೂ ಶ್ರೀಅರುಣೋದಯ ಶಿಕ್ಷಣ ಮತ್ತು ಗ್ರಾಮೀಣಾವೃದ್ಧಿ ಸಂಸ್ಥೆ ಚಿಲವಾಡಗಿ ವತಿಯಿಂದ ಜರುಗಿದ ಮಹಿಳಾ ದಿನಾಚರಣೆ, ಧನ್ವಾ ಪ್ರಶಸ್ತಿ ಪ್ರದಾನ ಹಾಗೂ ದಿ. ಡಾ. ಹನುಮಂತಪ್ಪ ಅಂಡಗಿ ನುಡಿ-ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರನ್ನು ಎಲ್ಲ ಕ್ಷೇತ್ರಗಳಲ್ಲಿ ಸಮಾನವಾಗಿ ನೋಡುವ ಜತೆಗೆ ಅವರಿಗೆ ಅವಕಾಶ ಒದಗಿಸಿ ಕೊಟ್ಟಾಗ ಮಾತ್ರ ಮಹಿಳಾ ದಿನಾಚರಣೆಗೆ ಮಹತ್ವ ಬರಲು ಸಾಧ್ಯ ಎಂದರು.
ವಾರ್ತಾ ಮತ್ತು ಜನ ಸಂಪರ್ಕ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ ಮಾತನಾಡಿ, ಡಾ. ಹನುಮಂತಪ್ಪ ಅಂಡಗಿ ಸ್ನೇಹಮಹಿಯಾಗಿದ್ದರು ಎಂದರು.ಸಾಹಿತಿ ಸುರೇಶ ಕಂಬಳಿ ಅವರ ತುಂಡು ಚಂದಿರ ಕೃತಿ ಬಿಡುಗಡೆಗೊಳಿಸಿದ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ನಾಗರಾಜ ಜುಮ್ಮಣ್ಣನ್ನವರ ಮಾತನಾಡಿದರು. ಟ್ರಸ್ಟ್
ಅಧ್ಯಕ್ಷ ಬೀರಪ್ಪ ಅಂಡಗಿ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ಅಮ್ಜದ ಪಟೇಲ ಸಾವಿತ್ರಿಬಾ ಪುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಸಾಹಿತಿಗಳಾದ ಈಶ್ವರ ಹತ್ತಿ, ಸಿದ್ದಲಿಂಗಪ್ಪ ಕೊಟ್ನೇಕಲ್, ಚಲನಚಿತ್ರ ಅಕಾಡೆಮಿ ಸದಸ್ಯರಾದ ಸಾವಿತ್ರಿ ಮುಜುಮದಾರ ಮಾತನಾಡಿದರು.ಸಚಿವ ತಂಗಡಗಿ ಪ್ರಶಸ್ತಿ ಪ್ರದಾನ
ಕಾರ್ಯಕ್ರಮದಲ್ಲಿ ೨೧ ಶಿಕ್ಷಕರಿಗೆ ಧನ್ವಾ ಪ್ರಶಸ್ತಿಯನ್ನು ಸಚಿವ ಶಿವರಾಜ ತಂಗಡಗಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಬಾಲಭವನ ಸೊಸೈಟಿ ಅಧ್ಯಕ್ಷ ಬಿ.ಆರ್. ನಾಯ್ಡು ಪ್ರದಾನ ಮಾಡಿದರು. ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ, ಮಾಧ್ಯಮ ಅಕಾಡೆಮಿ ಸದಸ್ಯ ನಿಂಗಜ್ಜ.ಕೆ., ಜಾನಪದ ಅಕಾಡೆಮಿ ಸದಸ್ಯ ಮಹೆಬೂಬ ಕಿಲ್ಲೇದಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸವನಗೌಡ ಪಾಟೀಲ, ನೌಕರರ ಸಂಘದ ಜಂಟಿ ಕಾರ್ಯದರ್ಶಿ ನಾಗರಾಜ ಕುಷ್ಟಗಿ, ನಿರ್ದೇಶಕರಾದ ಪ್ರಾಣೇಶ ಪೂಜಾರ, ಶರಣಪ್ಪ ರಡ್ಡೇರ, ಜಾಹೀರ ಪತ್ತಿನ ಸಂಘದ ನಿರ್ದೇಶಕ ಹನುಮಂತಪ್ಪ ಕುರಿ, ಮಲ್ಲಪ್ಪ ಗುಡದನ್ನವರ ಇತರರಿದ್ದರು. ಶಿಕ್ಷಕಿ ಫರೀದಾಬೇಗಂ ನಿರೂಪಿಸಿದರು. ಶಿಕ್ಷಕಿ ಭಾರತಿ ಹವೆಳೆ ಪ್ರಾರ್ಥನೆ ನೇರವೇರಿಸಿದಳು.