ಕಾಮಗಾರಿ ಹಿನ್ನೆಲೆ: ಪುತ್ತೂರು-ಸುಬ್ರಹ್ಮಣ್ಯ ಪ್ಯಾಸೆಂಜರ್‌ ರೈಲು ರದ್ದು, ಇತರೆ ರೈಲು ಓಡಾಟ ವ್ಯತ್ಯಯ

KannadaprabhaNewsNetwork |  
Published : Mar 22, 2026, 02:45 AM IST
ಇರಾನ್ | Kannada Prabha

ಸಾರಾಂಶ

ಪುತ್ತೂರಿನ ನರಿಮೊಗರು–ಪಡೀಲ್ ನಿಲ್ದಾಣಗಳ ನಡುವೆ ಬಿಸಿಎಂ ಕಾರ್ಯಕ್ಕಾಗಿ ಲೈನ್ ಬ್ಲಾಕ್ ಹಾಗೂ ಪವರ್ ಬ್ಲಾಕ್ ಕೈಗೊಳ್ಳಲಾಗುತ್ತಿರುವುದರಿಂದ ಪುತ್ತೂರು-ಸುಬ್ರಹ್ಮಣ್ಯ ಮಾರ್ಗ ಪ್ಯಾಸೆಂಜರ್‌ ರೈಲು ಸಂಚಾರ ರದ್ದುಗೊಳ್ಳಲಿದೆ ಹಾಗೂ ಇತರೆ ರೈಲುಗಳ ಓಡಾಟದಲ್ಲಿ ವ್ಯತ್ಯಯವಾಗಲಿದೆ.

ಮಂಗಳೂರು: ಪುತ್ತೂರಿನ ನರಿಮೊಗರು–ಪಡೀಲ್ ನಿಲ್ದಾಣಗಳ ನಡುವೆ ಬಿಸಿಎಂ ಕಾರ್ಯಕ್ಕಾಗಿ ಲೈನ್ ಬ್ಲಾಕ್ ಹಾಗೂ ಪವರ್ ಬ್ಲಾಕ್ ಕೈಗೊಳ್ಳಲಾಗುತ್ತಿರುವುದರಿಂದ ಪುತ್ತೂರು-ಸುಬ್ರಹ್ಮಣ್ಯ ಮಾರ್ಗ ಪ್ಯಾಸೆಂಜರ್‌ ರೈಲು ಸಂಚಾರ ರದ್ದುಗೊಳ್ಳಲಿದೆ ಹಾಗೂ ಇತರೆ ರೈಲುಗಳ ಓಡಾಟದಲ್ಲಿ ವ್ಯತ್ಯಯವಾಗಲಿದೆ.

ಪ್ಯಾಸೆಂಜರ್‌ ರೈಲು ರದ್ದು: ರೈಲು ಸಂಖ್ಯೆ 56629 ಮಂಗಳೂರು ಸೆಂಟ್ರಲ್–ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲು 23.03.2026 ರಿಂದ 14. 04.2026 ರವರೆಗೆ ಹಾಗೂ 10.06.2026 ರಿಂದ 21.06.2026 ರವರೆಗೆ ರದ್ದುಪಡಿಸಲಾಗಿದೆ.ರೈಲು ಸಂಖ್ಯೆ 56630 ಸುಬ್ರಹ್ಮಣ್ಯ ರೋಡ್ –ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲು 23.03.2026 ರಿಂದ 14.04.2026 ರವರೆಗೆ ಹಾಗೂ 10.06.2026 ರಿಂದ 21.06.2026 ರವರೆಗೆ ರದ್ದುಪಡಿಸಲಾಗಿದೆ.

ರೈಲುಗಳ ನಿಯಂತ್ರಣ: ರೈಲು ಸಂಖ್ಯೆ 16515 ಯಶವಂತಪುರ ಜಂಕ್ಷನ್–ಕಾರವಾರ ಎಕ್ಸ್‌ಪ್ರೆಸ್ ರೈಲು 15.04.2026, 17.04.2026 ಮತ್ತು 20.04.2026 ರಂದು ಮಾರ್ಗ ಮಧ್ಯದಲ್ಲಿ 20 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

ರೈಲು ಸಂಖ್ಯೆ 16575 ಯಶವಂತಪುರ ಜಂಕ್ಷನ್–ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲು 16.04.2026 ಮತ್ತು 19.04.2026 ರಂದು ಮಾರ್ಗ ಮಧ್ಯದಲ್ಲಿ 20 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

ರೈಲು ಸಂಖ್ಯೆ 16539 ಯಶವಂತಪುರ–ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲು 18.04.2026 ರಂದು ಮಾರ್ಗ ಮಧ್ಯದಲ್ಲಿ 20 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.ರೈಲು ಸಂಖ್ಯೆ 56229 ಮಂಗಳೂರು ಸೆಂಟ್ರಲ್–ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲು 21.04.2026 ರಿಂದ 09.06.2026 ರವರೆಗೆ ಮಾರ್ಗ ಮಧ್ಯದಲ್ಲಿ 55 ನಿಮಿಷಗಳ ಕಾಲ ನಿಯಂತ್ರಿಸಲಾಗಿದೆ.ರೈಲು ಮರು ನಿಗದಿ : ರೈಲು ಸಂಖ್ಯೆ 56630 ಸುಬ್ರಹ್ಮಣ್ಯ ರೋಡ್ –ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲು ಕೆಳಗಿನ ದಿನಾಂಕಗಳಲ್ಲಿ ಸುಬ್ರಹ್ಮಣ್ಯ ರೋಡ್ ನಿಂದ 15 ನಿಮಿಷ ತಡವಾಗಿ ಮರು ನಿಗದಿಪಡಿಸಲಾಗಿದೆ.

21.04.2026, 23.04.2026, 25.04.2026, 28.04.2026, 30.04.2026, 02.05.2026, 05.05.2026, 07.05.2026, 09.05.2026, 12.05.2026, 14.05.2026, 16.05.2026, 19.05.2026, 21.05.2026, 23.05.2026, 26.05.2026, 28.05.2026, 30.05.2026, 02.06.2026, 04.06.2026, 06.06.2026 ಹಾಗೂ 09.06.2026.ಪ್ರಯಾಣಿಕರು ಮೇಲ್ಕಂಡ ಬದಲಾವಣೆಗಳನ್ನು ಗಮನಿಸಿ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಂಗಳೂರಿಗೆ ಆಗಮಿಸಿದ ಕಚ್ಚಾತೈಲ ಹಡಗು
ಶೈವ-ವೈಷ್ಣವರ ಅಪರೂಪದ ಸಂಗಮ ಕ್ಷೇತ್ರ