ಸಹಕಾರಿ ಸಂಘದ ಬಲವರ್ಧನೆಗೆ ಶ್ರಮಿಸಿ

KannadaprabhaNewsNetwork |  
Published : Apr 13, 2026, 01:45 AM IST
ಹೊಸಪೇಟೆ ನಗರದ ಹೋಟಲ್ ಮಲ್ಲಿಗೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಹಕಾರ ಭಾರತೀಯ ರಾಜ್ಯ ಕಾರ್ಯಕಾರಿಣಿ ಸಮಾವೇಶದಲ್ಲಿ ಹೊಸಪೇಟೆಯ ಕೊಟ್ಟೂರು ಸಂಸ್ಥಾನ ಮಠದ ಜ.ಬಸವಲಿಂಗ ಸ್ವಾಮೀಜಿ ಮಾತನಾಡಿದರು. | Kannada Prabha

ಸಾರಾಂಶ

ದೇಶಾದ್ಯಂತ ಎಲ್ಲ ರಾಜ್ಯಗಳು ಸಹಕಾರ ಸಂಘಗಳು ಬಳಸಿಕೊಳ್ಳಬೇಕು

ಹೊಸಪೇಟೆ: ಸಹಕಾರ ಭಾರತಿ ದೇಶದ ಎಲ್ಲ ಕಡೆಗೂ ಸಹಕಾರ ಸಂಘಗಳು ಸ್ಥಾಪನೆಗೊಂಡಿವೆ. ಅದನ್ನು ದೇಶಾದ್ಯಂತ ಎಲ್ಲ ರಾಜ್ಯಗಳು ಸಹಕಾರ ಸಂಘಗಳು ಬಳಸಿಕೊಳ್ಳಬೇಕು ಎಂದು ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ಉದಯ್ ವಾಸುದೇವ ಜೋಶಿ ಹೇಳಿದರು.

ನಗರದ ಹೋಟಲ್ ಮಲ್ಲಿಗೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಹಕಾರ ಭಾರತೀಯ ರಾಜ್ಯ ಕಾರ್ಯಕಾರಿಣಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಭಾರತಿ ಪರಿಶ್ರಮದಿಂದಾಗಿ ಕೇಂದ್ರ ಸರ್ಕಾರ ಪ್ರತ್ಯೇಕವಾದ ಸಹಕಾರ ಸಚಿವಾಲಯವನ್ನೂ ಸ್ಥಾಪಿಸಿ, ಸಚಿವರನ್ನೂ ನೇಮಿಸಿತು. ಪರಿಣಾಮ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆ ಸಾಧ್ಯವಾಗುತ್ತಿದೆ. ಇದು ನಮ್ಮ ಸಂಸ್ಥೆಯ ಹೆಮ್ಮೆ ಎಂದು ಅವರು ತಿಳಿಸಿದರು.

ರಾಷ್ಟೖವಾದದ ನೆಲೆಗಟ್ಟಿನಲ್ಲಿ ಸ್ಥಾಪನೆಗೊಂಡಿರುವ ರಾಷ್ಟ್ರೀಯ ಸಹಕಾರ ಭಾರತಿ ಇನ್ನೆರಡು ವರ್ಷಗಳಲ್ಲಿ ಸುವರ್ಣ ಮಹೋತ್ಸ ವವನ್ನು ಆಚರಿಸಿಕೊಳ್ಳಲಿದೆ. ಈ ಹಿನ್ನಲೆಯಲ್ಲಿ ಸಹಕಾರ ಭಾರತಿಯನ್ನು ದೇಶದ ಎಲ್ಲ ಭಾಗಗಳಿಗೂ ವಿಸ್ತರಿಸುವ ಮೂಲಕ ಬಲವರ್ಧನೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಅವರು ಹೇಳಿದರು.

ನಮ್ಮ ಸಂಸ್ಕೃತಿ, ಇತಿಹಾಸ, ಪರಂಪರೆಯ ಬಗ್ಗೆ ನಾವು ಮಾತನಾಡುವುದನ್ನು ಬಿಡಬಾರದು, ಇಂತಹ ಚರ್ಚೆಗಳು, ಸಂವಾದಗಳೇ ನಮ್ಮ ಸಂಸ್ಕೃತಿಯನ್ನು ಉಳಿಸಲು ಇರುವ ದಾರಿ. ಸಂಸ್ಕೃತಿ ಗಟ್ಟಿಯಾದಷ್ಟೂ ಸಹಕಾರ ಚಳವಳಿಯೂ ಪ್ರಬಲವಾಗುತ್ತದೆ ಎಂದು ಅವರು ಹೇಳಿದರು.

ಹೊಸಪೇಟೆಯ ಕೊಟ್ಟೂರು ಸಂಸ್ಥಾನ ಮಠದ ಜ.ಬಸವಲಿಂಗ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿಕೊಂಡು ಆಶೀವರ್ಚನ ನೀಡಿ ಮಾತನಾಡಿ ನಮ್ಮ ಸಂಸ್ಕೃತಿಯನ್ನು ಗಟ್ಟಿಯಾಗಿ ಉಳಿಸಿ, ಬೆಳಸಿದರೆ ಮಾತ್ರ ಸಹಕಾರ ಚಳವಳಿಯು ಗಟ್ಟಿಯಾಗಿ ಬೆಳೆಯಲು ಸಾಧ್ಯವಾಗಲಿದೆ. ಸಹಕಾರ ಎಂಬುದೇ ಮಾನವ ಬದುಕಿನ ಮೂಲ ತಿರುಳು. ಸಹಕಾರವಿಲ್ಲದೇ ಜೀವನದಲ್ಲಿ ಯಾರೂ, ಏನನ್ನೂ ಸಾಧಿಸಲಾರರು. ಪರಸ್ಪರ ಸಹಕಾರದೊಂದಿಗೆ ಇದ್ದಾಗ ಮಾತ್ರ ಸಹಕಾರ ಚಳುವಳಿಯೂ ಗಟ್ಟಿಯಾಗಿ ಉಳಿಯುತ್ತದೆ ಎಂದು ಅವರು ಹೇಳಿದರು.

ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಭುದೇವ ಚೌರಾಸಿಯಾ, ರಾಜ್ಯ ಪ್ರಧಾನ ಕಾರ್ಯದರ್ಶಿ ನರಸಿಂಹ ಕಾಮತ್, ಕಾರ್ಯಕಾರಿಣಿ ಸಮಿತಿ ಸಂಚಾಲಕ ಜಿ.ನಂಜನಗೌಡ, ರಾಜ್ಯ ಮಹಿಳಾ ಪ್ರಮುಖ್ ವಿದ್ಯಾಪೈ, ವಿಜಯನಗರ ಜಿಲ್ಲಾ ಅಧ್ಯಕ್ಷ ಕರಿಬಸವರಾಜ್ ಬದಾಮಿ ಉಪಸ್ಥಿತರಿದ್ದರು.

ಕಾರ್ಯಕಾರಿಣಿಯ ಜೊತೆಗೆ ಸಂಜೆ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳ ಪ್ರಮುಖ ಸಹಕಾರಿಗಳ ಸಮಾವೇಶ ನಡೆಯಿತು. ಆರ್ಎಸ್ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ್ ಭೆಂಡೆ ದಿಕ್ಸೂಚಿ ಭಾಷಣ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವರದಕ್ಷಿಣೆ ಕಿರುಕುಳ ಆರೋಪ, ಮಹಿಳೆ ಆತ್ಮಹತ್ಯೆ
ಮಹಿಳಾ ಮೀಸಲಾತಿ ಮಸೂದೆ ಕುರಿತು ಇಂದಿನಿಂದ ಜಾಗೃತಿ