ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುಮಾರು 15 ಕೋಟಿ ರು. ವೆಚ್ಚದ ಕಾಮಗಾರಿಗಳಿಗೆ ಶಾಸಕ ಶರಣು ಸಲಗರ ಶುಕ್ರವಾರ ಚಾಲನೆ ನೀಡಿದರು.ತಾಲೂಕಿನ ಬೇಟಬಾಲಕುಂದಾ ದಿಂದ ಹುಲಸೂರವರೆಗೆ ₹4 ಕೋಟಿ ವೆಚ್ಚದಲ್ಲಿ ರಸ್ತೆ ಸುಧಾರಣಾ ಕಾಮಗಾರಿ ಹಾಗೂ ಖಾನಾಪೂರ (ಕೆ)ದಿಂದ ರಾಷ್ಟ್ರೀಯ ಹೆದ್ದಾರಿವರೆಗೆ ಸುಮಾರು 3 ಕೋಟಿ ರು. ವೆಚ್ಚದಲ್ಲಿ ರಸ್ತೆ ಕಾಮಗಾರಿ ಮಂಠಾಳದಲ್ಲಿ 50 ಲಕ್ಷ ರು. ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಶಾಸಕ ಶರಣು ಸಲಗರ ಮಾತನಾಡಿ, ಸರ್ಕಾರದ ಜೊತೆಯಲ್ಲಿ ಸ್ಥಳೀಯರು ಸಹಭಾಗಿಯಾಗಿ ಕಾಮಗಾರಿಗಳನ್ನು ಮಾಡಿಕೊಳ್ಳಬೇಕು. ಈ ಕೆಲಸಗಳು ನಮ್ಮ ಗ್ರಾಮದು ಎಂಬ ಭಾವನೆ ಎಲ್ಲರಲ್ಲಿ ಬರಲಿ ಎಂದರು.ತಾಲೂಕಿನ ಭೋಸಗಾ, ಬೇಟಬಾಲಕುಂದಾ, ಖಾನಾಪೂರ (ಕೆ), ಮಂಠಾಳ, ಮುಡಬಿ ಗ್ರಾಮಗಳಲ್ಲಿ ಸುಮಾರು 15 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.
ತಾಲೂಕಿನ ಭೋಸಗಾ ಗ್ರಾಮ ಮಾದರಿ ಗ್ರಾಮವಾಗಿ ಅಭಿವೃದ್ಧಿ ಪಡಿಸಲು ಲೋಕೊಪಯೋಗಿ ಇಲಾಖೆಯಿಂದ ಕೆಕೆಆರಡಿಬಿ ಯೋಜನೆ ಅಡಿ 4 ಕೋಟಿ ರೂಪಾಯಿ ವೆಚ್ಚದ ರಸ್ತೆ ವಿಭಜಕ, ಬೀದಿ ದೀಪ, ಒಳಚರಂಡಿ ಹಾಗೂ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಗುರುವಾರ ಶಾಸಕರು ಭೂಮಿ ಪೂಜೆ ನೇರವೆರಿಸಿದರು.ಇದಲ್ಲದೇ ಮುಡಬಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸುಮಾರು 90 ಲಕ್ಷ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ನಡೆಯಲಿರುವ ಐದು ನೂತನ ಶಾಲೆ ಕೋಣೆಗಳ ಕಟ್ಟಡ ಹಾಗೂ ಕೊಳವೆಬಾವಿ ಕೊರೆಸುವ ಕಾಮಗಾರಿಗೆ ಭೂಮಿ ಪೂಜೆ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಲೋಕೊಪಯೋಗಿ ಇಲಾಖೆ ಎಇಇ ಧನರಾಜ ಚವ್ಹಾಣ, ಜೀವನರಾವ ಪಾಟೀಲ, ಪಂಡಿತ ಪಾಟೀಲ, ಜ್ಞಾನದೇವ ಜಾಧವ, ಧನರಾಜ ಶಿಂಧೆ, ಮನೋಜ ಬಿರಾದಾರ, ಶಿವರಾಜ ಪಾಟೀಲ, ಸಂಜಯ ಕಂದಗೂಳೆ ಮುಂತಾದವರು ಭಾಗವಹಿಸಿದರು.