ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ

KannadaprabhaNewsNetwork |  
Published : Oct 21, 2024, 12:31 AM IST
20ಎಚ್‌ಪಿಟಿ4- ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ ಮತ್ತು ಪಾಪಿನಾಯಕನಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಶಾಸಕ ಎಚ್.ಆರ್. ಗವಿಯಪ್ಪ ಅವರು ಚಾಲನೆ ನೀಡಿದರು. | Kannada Prabha

ಸಾರಾಂಶ

ಗಣಿ ಕಾರ್ಮಿಕರಿಗೆ ಆದಷ್ಟು ಬೇಗ ಮನೆಗಳು ಕಟ್ಟಿಸಿ ಕೊಡುವ ಯೋಜನೆ ಜಾರಿಗೆ ತರಲಾಗುವುದು.

ಹೊಸಪೇಟೆ: ತಾಲೂಕಿನ ವಡ್ಡರಹಳ್ಳಿ ಮತ್ತು ಪಾಪಿನಾಯಕನಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಶಾಸಕ ಎಚ್.ಆರ್. ಗವಿಯಪ್ಪ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೆಲವೇ ದಿನಗಳಲ್ಲಿ ಚಾಲನೆ ನೀಡಲಾಗುವುದು. ಈ ಭಾಗದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಮತ್ತು ಗಣಿ ಕಾರ್ಮಿಕರಿಗೆ ಆದಷ್ಟು ಬೇಗ ಮನೆಗಳು ಕಟ್ಟಿಸಿ ಕೊಡುವ ಯೋಜನೆ ಜಾರಿಗೆ ತರಲಾಗುವುದು. ರೈತರ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಕೆರೆಗಳಲ್ಲಿ ನೀರು ಭರ್ತಿಯಾದರೆ, ಈ ಭಾಗದಲ್ಲಿ ನೀರಾವರಿ ಹಾಗೂ ಅಂತರ್ಜಲಮಟ್ಟ ವೃದ್ಧಿಗೂ ಸಹಕಾರಿಯಾಗಲಿದೆ ಎಂದರು.

ಸಹಾಯಕ ಆಯುಕ್ತ ಪಿ. ವಿವೇಕಾನಂದ, ತಹಸೀಲ್ದಾರ್ ಶ್ರುತಿ ಎಂ.ಎಂ., ನೀರಾವರಿ ಇಲಾಖೆ ಅಭಿಯಂತರ ಎಲ್. ಧರ್ಮರಾಜ್, ಮುಖಂಡರಾದ ಪಂಪಾಪತಿ, ವಿಜಯಕುಮಾರ್, ಈಶ್ವರಪ್ಪ, ಮಂಜುನಾಥ, ಗಂಗಾಧರಪ್ಪ, ತಿಪ್ಪೇಸ್ವಾಮಿ, ಅನಿತಾ, ಗುರುರಾಜ್, ಕೆ. ಮುರಳೀಧರ, ಕೆ. ಹನುಮಂತರಾಯ, ಬಾಷಾ ಸಾಬ್, ಅಂಕಲೇಶ್, ಅರುಣ್ ಕುಮಾರ್, ಗಂಟೆ ಶ್ರೀನಿವಾಸ್, ರಾಜಣ್ಣ, ಶಿವಾನಂದಪ್ಪ, ಎಚ್. ಶೇಖರಪ್ಪ, ಶಂಕ್ರಪ್ಪ, ದಳವಾಯಿ ಹನುಮಂತಪ್ಪ, ಸಿದ್ದಪ್ಪ, ಹನುಮಂತಪ್ಪ, ಫಕೀರಸ್ವಾಮಿ, ಅಂಕಲಪ್ಪ, ಸಣ್ಣಪ್ಪ, ಹೊನ್ನೂರಪ್ಪ, ಮಲ್ಲಪ್ಪ, ಎ.ಕೆ. ಉದೇದಪ್ಪ ಮತ್ತಿತರರಿದ್ದರು.

ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ ಮತ್ತು ಪಾಪಿನಾಯಕನಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಶಾಸಕ ಎಚ್.ಆರ್. ಗವಿಯಪ್ಪ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!