ಸೇವಾ ಮನೋಭಾವದಿಂದ ಕೆಲಸ ಮಾಡಿ

KannadaprabhaNewsNetwork | Published : Mar 26, 2025 1:35 AM

ಸಾರಾಂಶ

ವೀರಶೈವ ಲಿಂಗಾಯತ ಎರಡೂ ಒಂದೇ ಎಂಬ ಭಾವನೆಯಿಂದ ನಾವು ಸಂಘಟಿತರಾಗಬೇಕಾಗಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೇಂದ್ರ ಮತ್ತು ರಾಜ್ಯ ಮಟ್ಟದ ಪ್ರಬಲ ನಮ್ಮ ಸಮಾಜದ ಸಂಸ್ಥೆಯಾಗಿದ್ದು, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪ್ರತಿ ಹಳ್ಳಿಗಳಿಂದಲು ಸದಸ್ಯತ್ವ ಮಾಡಲು ಸಲಹೆ ನೀಡಿದರು. ನಮ್ಮ ಧರ್ಮ, ಸಂಸ್ಕೃತಿ, ಆಚಾರ-ವಿಚಾರಗಳಿಗೆ ಆದ್ಯತೆ ನಿಡಬೇಕು. ಮಕ್ಕಳು ಉತ್ತಮ ಸಂಸ್ಕೃತಿಯನ್ನು ಕಲಿಯಬೇಕು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಸಮಾಜದ ಸಂಘಟನೆ ಅತ್ಯಂತ ಪ್ರಮುಖವಾಗಿದ್ದು, ಸಂಘಟನೆಗೆ ಮಹತ್ವ ನೀಡುವುದರ ಜೊತೆಗೆ ಸೇವಾ ಮನೋಭಾವದಿಂದ ಕೆಲಸ ಮಾಡುವಂತರಾಗಿ ಎಂದು ಸಕಲೇಶಪುರ ತಾಲೂಕು ಯಸಳೂರು ತೆಂಕಲಗೂಡು ಮಠದ ಮಠಾಧೀಶ ಶ್ರೀ ಚನ್ನಸಿದ್ದೇಶ್ವರಶಿವಚಾರ್ಯ ಸ್ವಾಮೀಜಿ ಕರೆ ನೀಡಿದರು.

ನಗರದ ಅರಳೇಪೇಟೆ ರಸ್ತೆ ಬಳಿ ಇರುವ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದಿಂದ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಎರಡೂ ಒಂದೇ ಎಂಬ ಭಾವನೆಯಿಂದ ನಾವು ಸಂಘಟಿತರಾಗಬೇಕಾಗಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೇಂದ್ರ ಮತ್ತು ರಾಜ್ಯ ಮಟ್ಟದ ಪ್ರಬಲ ನಮ್ಮ ಸಮಾಜದ ಸಂಸ್ಥೆಯಾಗಿದ್ದು, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪ್ರತಿ ಹಳ್ಳಿಗಳಿಂದಲು ಸದಸ್ಯತ್ವ ಮಾಡಲು ಸಲಹೆ ನೀಡಿದರು. ನಮ್ಮ ಧರ್ಮ, ಸಂಸ್ಕೃತಿ, ಆಚಾರ-ವಿಚಾರಗಳಿಗೆ ಆದ್ಯತೆ ನಿಡಬೇಕು. ಮಕ್ಕಳು ಉತ್ತಮ ಸಂಸ್ಕೃತಿಯನ್ನು ಕಲಿಯಬೇಕು ಎಂದರು.

ಮುಖ್ಯ ಭಾಷಣಗಾರರಾದ ವಕೀಲೆ ಗಿರಿಜಾಂಬಿಕೆ ಮಾತಾನಾಡಿ, ೧೨೦ನೇ ಅಂತಾರಾಷ್ಟ್ರೀಯ ಮಹಿಳಾ ದಿನಾಚಾರಣೆ ಎಲ್ಲಾ ಕಡೆ ನಡೆಯುತ್ತಿದೆ. ಮಹಿಳೆಯರಿಗೆ ಸಮಾನತೆ ಸಿಗಲು ಬುದ್ಧ, ಬಸವಣ್ಣ, ಅಂಬೇಡ್ಕರ್‌ರವರ ಪ್ರಯತ್ನ, ಶ್ರಮದಿಂದ ಸಮಾನತೆಯನ್ನು ನಾವು ಮೆಚ್ಚುವಂತದ್ದು ಹಾಗೂ ಅವರಿಗೆ ಗೌರವ ನಿಡುವ ನಿಟ್ಟಿನಲ್ಲಿ ಇಂಥ ಅನೇಕ ಕಾರ್ಯಕ್ರಮಗಳು ನಮಗೆ ಸ್ಫೂರ್ತಿ ನೀಡುತ್ತವೆ ಎಂದು ಹೇಳಿದರು. ಹಾಸನ ತಾಲೂಕು ಅಖಿಲ ಭಾರತ ವೀರಶೈವ, ಲಿಂಗಾಯತ ಮಹಿಳಾ ಘಟಕ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾಡಿರುವುದು ಸಂತೋಷ ತಂದಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಬಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಕಟ್ಟಾಯ ಶಿವಕುಮಾರ್ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಮಹಿಳಾ ಘಟಕದ ಮಾಜಿ ಅಧ್ಯಕ್ಷರಾದ ಶೋಭಾ ಮಹೇಶ್, ತಾಲೂಕು ಘಟಕದ ಉಪಾಧ್ಯಕ್ಷ ಎಚ್.ಪಿ. ಹೇಮೇಶ್, ಲೀಲಾ ಧರ್ಮಪ್ಪ, ಪ್ರದಾನ ಕಾರ್ಯದರ್ಶಿ ಹೇಮಂತ್, ಸಹಕಾರ್ಯದರ್ಶಿಗಳಾದ ಶೆಟ್ಟಿಹಳ್ಳಿ ಧರ್ಮ, ಸಹಕಾರ್ಯದರ್ಶಿಹಳ್ಳಿ ಶೆಟ್ಟಿ ಧರ್ಮ, ಚಾಂದಿನಿ ಭೂಷಣ್, ನಿರ್ದೇಶಕರಾದ ಮಯೂರಿ ಲೋಕೇಶ್, ಕಿರಣ್ ಕುಮಾರ್ ಹೊಸಮನಿ, ಮದನ್, ದೀಲಿಪ್, ದರ್ಶನ್, ರಾಜಶೇಖರ್ ಮೂರ್ತಿ, ಸಾವಿತ್ರಿ ವಿಜಯಕುಮಾರ, ಸುಜಾತಾ ರಾಜಶೇಖರ್. ಲತಾಸಂಪತ್, ರಾಜ್ಯ ಸಮಿತಿಯ ಸದಸ್ಯರಾದ ಶಿವಕುಮಾರ್. ರಾಜ್ಯ ಮಹಿಳಾ ಸಮಿತಿ ನಿರ್ದೇಶಕರಾದ ನಾಗರತ್ನ, ಜಿಲ್ಲಾ ಉಪಾಧಕ್ಷ ಪುನೀತ್ ಪಟೇಲ್, ಗೀತಾಪುಟ್ಟಸ್ವಾಮಿ, ಜಿಲ್ಲಾ ನಿರ್ದೇಶಕರಾದ ಶೋಭನ್ ಬಾಬು ಹಾಗೂ ತಾಲೂಕು ಮಹಿಳಾ ಘಟಕದ ಸದಸ್ಯರು ಪಾಲ್ಗೊಂಡಿದ್ದರು.

Share this article