ಜಮಖಂಡಿ; ತಾಲೂಕಿನ ಆಳಬಾಳ ಗ್ರಾಮದ ಬಳಿಯ ಸಾಯಿಪ್ರಿಯಾ ಸಕ್ಕೆರೆ ಕಾರ್ಖಾನೆಯಲ್ಲಿ ಆಯತಪ್ಪಿ ಮೇಲಿಂದ ಬಿದ್ದ ಕಾರ್ಮಿಕ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಮಹರಾಷ್ಟ್ರದ ಲಾತೂರು ಜಿಲ್ಲೆಯ ಅಪ್ಸರ್ ಬಾಗವಾನ (37) ಮೃತ ಕಾರ್ಮಿಕ. ಜಮಖಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.