ಕನ್ನಡಪ್ರಭ ವಾರ್ತೆ ಬೆಂಗಳೂರು
ಮಂಗಮ್ಮನಪಾಳ್ಯದ ನಿವಾಸಿ ಯೂಸೇಫ್ ಷರೀಫ್ (30) ಮೃತ ದುರ್ದೈವಿ. ಈ ಘಟನೆಯಲ್ಲಿ ಸೆಂಟ್ರಿಂಗ್ ವಸ್ತುಗಳು ಬಿದ್ದು ಚಹಾ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದ ಆಕಾಶ್ ಹಾಗೂ ಅವರ ಪತ್ನಿ ತನುಜಾ ಗಾಯಗೊಂಡಿದ್ದಾರೆ. ತನುಜಾ ಅವರಿಗೆ ತೀವ್ರ ಸ್ವರೂಪದ ಪೆಟ್ಟಾಗಿದ್ದು, ಪ್ರಾಣಾಪಾಯದಿಂದ ಪರಾಗಿದ್ದಾರೆ.
ಮಹದೇವಪುರ ಸಮೀಪದ ಅಬ್ದುಲ್ ವಾಹಿದ್ ಎಂಬುವರಿಗೆ ಸೇರಿದ ಕಟ್ಟಡದ 5ನೇ ಮಹಡಿಯಲ್ಲಿ ನವೀಕರಣ ಕೆಲಸ ನಡೆಯುತ್ತಿದ್ದು, ಇಲ್ಲಿ ಯೂಸೂಫ್ ಷರೀಪ್ ಸೇರಿ ಇಬ್ಬರು ಗುತ್ತಿಗೆ ಪಡೆದು ಕೆಲಸ ಮಾಡುತ್ತಿದ್ದರು. ಕಳಪೆಯಾದ ಮರಗಳನ್ನು ಅವರು ಬಳಸಿದ್ದರು. ಸೆಂಟ್ರಿಂಗ್ ವಸ್ತುಗಳನ್ನು ಸಾಗಿಸುವಾಗ ಆಯ ತಪ್ಪಿ ಷರೀಫ್ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಆಗ ಆ ಕಟ್ಟಡದ ಖಾಲಿ ಪ್ರದೇಶದ ಆವರಣದಲ್ಲಿದ್ದ ಪುಟ್ಟ ಚಹಾ ಅಂಗಡಿಯಲ್ಲಿ ಕುಳಿತು ಚಹಾ ಸೇವಿಸುತ್ತಿದ್ದ ದಂಪತಿ ಮೇಲೆ ಸೆಂಟ್ರಿಂಗ್ ವಸ್ತುಗಳು ಬಿದ್ದಿವೆ ಎಂದು ಪೊಲೀಸರು ಹೇಳಿದ್ದಾರೆ.ಈ ಘಟನೆ ಸಂಬಂಧ ಕಟ್ಟಡದ ಮಾಲಿಕನ ವಿರುದ್ಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.