ಹಾವೇರಿಯಲ್ಲಿ ಹೃದಯಾಘಾತದಿಂದ ಕಾರ್ಮಿಕ ಸಾವು

KannadaprabhaNewsNetwork |  
Published : Jul 11, 2025, 11:48 PM IST
11ಎಚ್‌ವಿಆರ್6-ಸುಭಾಸ ಅಮರಗೋಳ | Kannada Prabha

ಸಾರಾಂಶ

ಸುಭಾಸ ಬಸಪ್ಪ ಅಮರಗೋಳ (47) ಮೃತರು. ಇವರು ಮೂಲತಃ ರೋಣ ತಾಲೂಕಿನ ನಿಡಗುಂದಿ ಗ್ರಾಮದವರು.

ಹಾವೇರಿ: ಅಡುಗೆ ಅನಿಲ ವಿತರಕ ಕಾರ್ಮಿಕನೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ಸ್ಥಳೀಯ ವಿನಾಯಕ ನಗರದಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಸುಭಾಸ ಬಸಪ್ಪ ಅಮರಗೋಳ (47) ಮೃತರು. ಇವರು ಮೂಲತಃ ರೋಣ ತಾಲೂಕಿನ ನಿಡಗುಂದಿ ಗ್ರಾಮದವರು. ಯಾವುದೇ ಕಾಯಿಲೆಗಳಿಲ್ಲದೇ ಉತ್ತಮ ಆರೋಗ್ಯ ಹೊಂದಿದ್ದ ಇವರಿಗೆ ಗುರುವಾರ ತಡರಾತ್ರಿ 2 ಗಂಟೆಗೆ ಹಠಾತ್ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಹೃದಯಾಘಾತ: ಬಿರ್ಲಾ ಕಂಪನಿ ಉದ್ಯೋಗಿ ಸಾವು

ರಾಣಿಬೆನ್ನೂರು: ತಾಲೂಕಿನ ಕುಮಾರಪಟ್ಟಣ ಬಳಿಯ ಬಿರ್ಲಾ ಕಂಪನಿಯ ನೌಕರ ಕರ್ತವ್ಯ ವೇಳೆ ಹೃದಯಾಘಾತದಿಂದ ಸಾವಿಗೀಡಾದ ಘಟನೆ ಶುಕ್ರವಾರ ನಡೆದಿದೆ.ಚಳಗೇರಿ ಗ್ರಾಮದ ರಮೇಶ ಗೋದಮ್ಮನವರ (38) ಮೃತ ನೌಕರ.

ಇವರು ಎಂದಿನಂತೆ ಬೆಳಗ್ಗೆ ಕಂಪನಿಯ ಕೆಲಸಕ್ಕೆ ತೆರಳಿದ್ದರು. ಕೆಲಸ ಮಾಡುವಾಗ ಎದೆನೋವು ಕಾಣಿಸಿಕೊಂಡಿದೆ. ಆದರೂ ಯಾವುದೇ ಮುಂಜಾಗ್ರತಾ ತೆಗೆದುಕೊಳ್ಳದೆ ಮತ್ತೆ ಕೆಲಸ ಮಾಡುವಾಗ ಸ್ಥಳದಲ್ಲಿ ಸಾವಿಗೀಡಾಗಿದ್ದಾರೆ.ಬಿಟ್ ಕಾಯಿನ್‌ ಟ್ರೇಡಿಂಗ್‌ನಲ್ಲಿ ವಂಚನೆ, ಕೇಸ್ ದಾಖಲು

ಹಾವೇರಿ: ಬಿಟ್ ಕಾಯಿನ್‌ ಟ್ರೇಡಿಂಗ್ ಮಾಡುತ್ತಿದ್ದ ಅಂತಾರಾಜ್ಯ ಆನ್‌ಲೈನ್ ವಂಚಕರಿಬ್ಬರ ವಿರುದ್ಧ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇರಳದ ಕೋಜಿಕೊಡ್ ಜಿಲ್ಲೆಯ ಪುಥುಪ್ಪಡಿ ಮೂಲದ ಮೊಹಮ್ಮದ ಮಂಗಲಾಸೆರಿ ಹಾಗೂ ಮಹ್ಮದಸಾಹಲ್ ಮಂಗಲಾಸೆರಿ ಎಂಬವರ ವಿರುದ್ಧ ಜಿಲ್ಲೆಯ ಬಂಕಾಪುರ ಪಟ್ಟಣದ ಜಮಾದಾರ ಓಣಿಯ ನಿವಾಸಿ ಆರೀಫಖಾನ ಮುಖಾಸಿ ಎಂಬಾತ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.ಆರೋಪಿತರು ಬಿಟ್‌ ಕಾಯಿನ್ ಟ್ರೇಡಿಂಗ್ ಮಾಡುತ್ತಿದ್ದು, ಅದರಿಂದ ಬರುವ ಲಾಭಾಂಶದ ಹಣವನ್ನು ಒಂದೇ ಖಾತೆಗೆ ಹಾಕಿ ತೆಗೆಯಲು ಬಾರದೇ ಇರುವುದರಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಂಡು ವ್ಯವಹಾರ ಮಾಡುವುದಾಗಿ ನಂಬಿಸಿ ಆರೀಫಖಾನ್ ಹಾಗೂ ಇತರೆ ಐದು ಜನರಿಂದ ಒಟ್ಟು 12 ಬ್ಯಾಂಕ್‌ಗಳ ಪಾಸ್‌ಬುಕ್, ಲಿಂಕ್ ಇರುವ ಮೊಬೈಲ್‌ ನಂಬರ್ ಸಿಮ್‌ ಕಾರ್ಡ್, ಎಟಿಎಂ ಕಾರ್ಡ್, ಪಿನ್ ನಂಬರ ಹಾಗೂ ಇಂಟರ್‌ನೆಟ್ ಬ್ಯಾಂಕಿಂಗ್‌ನ ಯುಸರ್ ನೇಮ್, ಪಾಸ್‌ವರ್ಡ್‌ಗಳನ್ನು ತೆಗೆದುಕೊಂಡು 2025ರ ಫೆ. 11ರಿಂದ 2025 ಜೂ. 6ವ ರೆಗಿನ ನಡುವಿನ ಅವಧಿಯಲ್ಲಿ ಕಾನೂನುಬಾಹಿರವಾಗಿ ಆನ್‌ಲೈನ್ ವ್ಯವಹಾರಗಳನ್ನು ಮಾಡಿ 10 ಖಾತೆಗಳಿಗೆ ಅಕ್ರಮವಾಗಿ ಹಣ ಜಮೆ ಮಾಡಿಸಿಕೊಂಡು ತಾವೇ ವಿತ್‌ಡ್ರಾ ಮಾಡಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಹಾವೇರಿ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV