ಕಾರ್ಮಿಕರೇ ಆರ್ಥಿಕ ಶಕ್ತಿಯ ಬೆನ್ನೆಲುಬು

KannadaprabhaNewsNetwork | Published : May 2, 2025 12:13 AM

ಸಾರಾಂಶ

ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ಕಾರ್ಮಿಕರೇ ಆರ್ಥಿಕ ಶಕ್ತಿಯ ಬೆನ್ನೆಲುಬು ಎಂದು ನಗರಸಭೆ ಸದಸ್ಯೆ ಉಮಾ ವಿಜಯರಾಜ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ಕಾರ್ಮಿಕರೇ ಆರ್ಥಿಕ ಶಕ್ತಿಯ ಬೆನ್ನೆಲುಬು ಎಂದು ನಗರಸಭೆ ಸದಸ್ಯೆ ಉಮಾ ವಿಜಯರಾಜ್ ಹೇಳಿದರು. ಅವರು ನಗರದಲ್ಲಿ ಶಿರಾ ತಾಲೂಕು ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಕಾರ್ಮಿಕರಿಗಾಗಿ ಯಾವುದೇ ಸೌಲಭ್ಯಗಳು ಇರಲಿಲ್ಲ, ಅವರು ದಿನದಲ್ಲಿ ೧೮ ಗಂಟೆಗಳ ಕಾಲ ಕೆಲಸ ಮಾಡಬೇಕಿತ್ತು. ಆದರೆ, ಸ್ವಾತಂತ್ರ್ಯಾನಂತರ ಅಂಬೇಡ್ಕರ್ ಅವರು ಕಾರ್ಮಿಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ದಿನದಲ್ಲಿ ೮ ಗಂಟೆಗಳ ಕಾಲ ಕೆಲಸ ಮಾಡುವ ಕಾಯ್ದೆ ಜಾರಿ ಮಾಡಿದರು. ಕಾರ್ಮಿಕರಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸಿ ಅವರ ಜೀವನಸ್ಥಿತಿ ಸುಧಾರಿಸಲು ಕಾರಣರಾದರು ಎಂದು ಹೇಳಿದ ಅವರು ಶಿರಾ ತಾಲೂಕು ಕಟ್ಟಡ ಕಾರ್ಮಿಕರಿಗೆ ಸಂಘದ ಕಚೇರಿಗೆ ನಿವೇಶನ ನೀಡುವಂತೆ ಮನವಿ ಮಾಡಿದ್ದಾರೆ. ನಮ್ಮ ವಾರ್ಡಿನಲ್ಲಿ ಈಗಾಗಲೇ ನಿವೇಶನ ಗುರುತಿಸಿದ್ದು, ಶೀಘ್ರವಾಗಿ ಅದನ್ನು ನಗರಸಭೆ ವತಿಯಿಂದ ಹಸ್ತಾಂತರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದರು. ಶಿರಾ ತಾಲೂಕು ಕಾರ್ಮಿಕ ನಿರೀಕ್ಷಕರಾದ ಅಬ್ದುಲ್ ರವೂಫ್ ಅವರು ಮಾತನಾಡಿ ಕಾರ್ಮಿಕರು ದೇಶಕ್ಕಾಗಿ ಹಗಲಿರುಳೆನ್ನದೆ ದುಡಿಯುತ್ತಾರೆ. ಕಾರ್ಮಿಕರಿಲ್ಲದಿದ್ದರೆ ಕೃಷಿ, ಕೈಗಾರಿಕೆ ಸೇರಿದಂತೆ ಯಾವುದೇ ಕ್ಷೇತ್ರಗಳಲ್ಲೂ ಕೆಲಸ ಕಾರ್ಯ ನಡೆಯುವುದಿಲ್ಲ. ಅಂತಹ ಕಾರ್ಮಿಕರ ಅಭಿವೃದ್ಧಿಗೆ ಸರಕಾರ ಹಲವಾರು ಯೋಜನೆಗಳನ್ನು ನೀಡಿದೆ. ಕಟ್ಟಡ ಕಾರ್ಮಿಕರಿಗೆ ಕಾರ್ಮಿಕರ ಮಕ್ಕಳು ವಿವಾಹಕ್ಕೆ ಸಹಾಯಧನ, ಆರೋಗ್ಯದ ಚಿಕಿತ್ಸೆ ವೆಚ್ಚ, ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಸೌಲಭ್ಯಗಳಿದ್ದು ಇದನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ. ನಿಮ್ಮ ಮಕ್ಕಳನ್ನು ಐ.ಎ.ಎಸ್, ಐ.ಪಿ.ಎಸ್ ಸೇರಿದಂತ ಉನ್ನತ ಹುದ್ದೆ ಪಡೆಯುವಂತೆ ಮಾಡಿ ಎಂದರು. ಶಿರಾ ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಮುಬಾರಕ್ ಪಾಷ ಮಾತನಾಡಿ ಶಿರಾ ತಾಲೂಕಿನಲ್ಲಿ ಕಟ್ಟಡ ಕಾರ್ಮಿಕರ ಸಂಘವು ಸುಮಾರು ೨೫ ವರ್ಷಗಳಿಂದ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಸಂಘದ ಕಚೇರಿಗೆ ನಿವೇಶನ ನೀಡುವಂತೆ ಶಿರಾ ನಗರಸಭಾ ಸದಸ್ಯರಾದ ಉಮಾ ವಿಜಯರಾಜ್ ಅವರು ನಗರಸಭೆಗೆ ಶಿಫಾರಸ್ಸು ಮಾಡಿದ್ದು ಅವರಿಗೆ ಧನ್ಯವಾದ ತಿಳಿಸುತ್ತೇವೆ ಎಂದರು. ಕಾರ್ಯಕ್ರಮದಲ್ಲಿ ಶಿರಾ ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷ ನರಸಿಂಹಯ್ಯ, ಕಾರ್ಯದರ್ಶಿ ಕಂಬಣ್ಣ, ಸಂಘಟನಾ ಕಾರ್ಯದರ್ಶಿ ಸಿದ್ದಪ್ಪ, ಸದಸ್ಯರಾದ ಮುದ್ದಣ್ಣ, ಕೋಟೆ ರಾಜಣ್ಣ, ಜಬೀವುಲ್ಲಾ, ತಿಮ್ಮರಾಯಪ್ಪ, ಮೂರ್ತಪ್ಪ, ರಾಮಣ್ಣ, ಬಾಬಾಜಾನ್, ನರಸಿಂಹಯ್ಯ, ಬಸವರಾಜು, ಅಪ್ಸರ್ ಬೇಗ್, ಆರೀಫ್, ಬಡಗಿ ರಂಗಣ್ಣ, ಕರೇಕಲ್ಲಹಟ್ಟಿ ಮೂರ್ತಿ, ಕೊಟ್ಟ ರಾಜಣ್ಣ ಸೇರಿದಂತೆ ಹಲವರು ಹಾಜರಿದ್ದರು.

Share this article