ಪ್ರಸ್ತುತ ವರ್ಷ ಹೆಚ್ಚು ಬಿಸಿಲಿನ ವಾತಾವರಣ ಇರುವ ಸಾಧ್ಯವಿದ್ದು ಕೂಲಿಕಾರರಿಗೆ ತಲೆಸುತ್ತು, ರಕ್ತದ ಒತ್ತಡ ಮತ್ತಿತರ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಂಭವವಿರುತ್ತದೆ
ಕೊಟ್ಟೂರು: ವಿಬಿಜಿ ರಾಮ್ ಜಿ ಕೂಲಿಕಾರರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ತಾಪಂ ಆಡಳಿತ ಹಮ್ಮಿಕೊಳ್ಳುವ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಾಪಂ ಸಹಾಯಕ ನಿರ್ದೇಶಕ (ಗ್ರಾ.ಉ.) ಎಚ್.ವಿಜಯ್ ಕುಮಾರ ಕರೆ ನೀಡಿದರು.
ತಾಲೂಕಿನ ರಾಂಪುರ ಗ್ರಾಮದಲ್ಲಿ ತಾಪಂ ಆರೋಗ್ಯ ಇಲಾಖೆ ಸಹಾಯೋಗದೊಂದಿಗೆ ಹಮ್ಮಿಕೊಂಡಿದ್ದ ಕೂಲಿಕಾರರ ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ತಾಲೂಕಿನ ಬೋರನಹಳ್ಳಿ ಗ್ರಾಮದ ಹೊರವಲಯದಲ್ಲಿ ವಿಬಿಜಿ ರಾಮ್ ಜಿ ಯೋಜನೆಯಡಿ ಕೈಗೊಂಡಿರುವ ಮಯಮ್ಮನಕಟ್ಟೆ ಗೋಕಟ್ಟೆ ಪುನರ್ ಚೇತನ ಕಾಮಗಾರಿಯಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರ ಆರೋಗ್ಯ ಪರೀಕ್ಷಿಸಲಾಯಿತು. ತಾಪಂ ಇಓ ಮುಖ್ಯಾಧಿಕಾರಿಗಳ ಮಾರ್ಗದರ್ಶನದಂತೆ ಕೂಲಿಕಾರರ ಆರೋಗ್ಯ ತಪಾಸಣೆ ಕಾರ್ಯ ನಡೆಯುತ್ತಿದ್ದು ಪ್ರಸ್ತುತ ವರ್ಷ ಹೆಚ್ಚು ಬಿಸಿಲಿನ ವಾತಾವರಣ ಇರುವ ಸಾಧ್ಯವಿದ್ದು ಕೂಲಿಕಾರರಿಗೆ ತಲೆಸುತ್ತು, ರಕ್ತದ ಒತ್ತಡ ಮತ್ತಿತರ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಂಭವವಿರುತ್ತದೆ. ಅದಲ್ಲದೇ ದಿನವೀಡಿ ಕೆಲಸದಲ್ಲಿ ಕೂಲಿಕಾರರು ದಿನವೀಡಿ ತೊಡಗಿಸಿಕೊಂಡಿರುವುದರಿಂದ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಲು ಸಮಯದ ಕೊರತೆ ಕಂಡುಬರುತ್ತದೆ. ಶಿಬಿರದಲ್ಲಿ ರಕ್ತದೊತ್ತಡ, ಸಕ್ಕರೆ ಕಾಯಿಲೆ, ವಾಂತಿ ಭೇದಿ ಪ್ರಕರಣ ತಪಾಸಣೆ ಮಾಡಲಾಗುತ್ತದೆ ಎಂದರು.
ಆರೋಗ್ಯ ನೀರಿಕ್ಷಣಾಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ಶ್ರಮಿಕರು ಕೇವಲ ದೈನಂದಿನ ಕೂಲಿಗಷ್ಟೇ ಗಮನ ಕೊಡದೇ ತಮ್ಮ ದೇಹದ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಗಮನ ಹರಿಸಿಕೊಳ್ಳಬೇಕು. ಸಣ್ಣಪುಟ್ಟ ಕಾಯಿಲೆಗಳೆಂದು ನಿರ್ಲಕ್ಷ್ಯ ವಹಿಸಿದರೇ ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆಗಳಿರುತ್ತವೆ ಎಂದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ತಾಪಂ ಐಇಸಿ ಸಂಯೋಜಕ ಪ್ರಭುಕುಮಾರ, ತಾಂತ್ರಿಕ ಸಹಾಯಕ ರವಿನಾಯ್ಕ, ಪಿ.ಎಚ್.ಸಿ ಅಧಿಕಾರಿ ಶಭೀನಾ, ಓಬಳೇಶ, ಬಿ.ಇ.ಓ.ಜಗದೀಶ, ಆರೋಗ್ಯ ಇಲಾಖೆ ಮತ್ತು ಆಶಾ ಕಾರ್ಯಕರ್ತರ ಸಿಬ್ಬಂದಿಗಳು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.