ಸ್ವಚ್ಛ ಕಂಪ್ಲಿ ಪಟ್ಟಣ ನಿರ್ಮಾಣಕ್ಕಾಗಿ ಹಗಲಿರುಳು ಶ್ರಮ: ಭಟ್ಟ ಪ್ರಸಾದ್

KannadaprabhaNewsNetwork |  
Published : Aug 15, 2025, 01:00 AM IST
ಕಂಪ್ಲಿಯ ಪುರಸಭೆ ಮುಂಭಾಗದಲ್ಲಿ, ಸಾಮಾಜಿಕ ಜಾಲತಾಣಗಳ ಅನಾವರಣ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಸ ಕಂಡರೆ ಪೋಟೋ ಕಳುಹಿಸಿ ವಿಶೇಷ ಅಭಿಯಾನಕ್ಕೆ ಪುರಸಭಾಧ್ಯಕ್ಷ ಭಟ್ಟ ಪ್ರಸಾದ್ ಚಾಲನೆ ನೀಡಿದರು  | Kannada Prabha

ಸಾರಾಂಶ

ಪಟ್ಟಣದ ಪುರಸಭೆ ಮುಂಭಾಗದಲ್ಲಿ ಸಾಮಾಜಿಕ ಜಾಲತಾಣಗಳ ಅನಾವರಣ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಸ ಕಂಡರೆ ಪೋಟೋ ಕಳುಹಿಸಿ ವಿಶೇಷ ಅಭಿಯಾನ ಜರುಗಿತು.

ಕಸ ಕಂಡರೆ ಪೋಟೋ ಕಳುಹಿಸಿ ವಿಶೇಷ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪುರಸಭಾಧ್ಯಕ್ಷ

ಕನ್ನಡಪ್ರಭ ವಾರ್ತೆ ಕಂಪ್ಲಿ

ಪಟ್ಟಣದ ಪುರಸಭೆ ಮುಂಭಾಗದಲ್ಲಿ ಸಾಮಾಜಿಕ ಜಾಲತಾಣಗಳ ಅನಾವರಣ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಸ ಕಂಡರೆ ಪೋಟೋ ಕಳುಹಿಸಿ ವಿಶೇಷ ಅಭಿಯಾನ ಜರುಗಿತು.

ಪುರಸಭಾಧ್ಯಕ್ಷ ಭಟ್ಟ ಪ್ರಸಾದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕಂಪ್ಲಿ ಪಟ್ಟಣವನ್ನು ಸ್ವಚ್ಛ ಪಟ್ಟಣವನ್ನಾಗಿಸಲು ಪುರಸಭೆ ಆಡಳಿತ ಮಂಡಳಿಯವರೊಂದಿಗೆ ಹಗಲಿರುಳು ಶ್ರಮವಹಿಸಲಾಗುತ್ತಿದೆ. ಜನರು ಕಸ ಬಿಸಾಡುವ ಸ್ಥಳಗಳನ್ನು ಸ್ವಚ್ಛಗೊಳಿಸಿ ಸಗಣಿ ಸಾರಿಸಿ, ರಂಗೋಲಿ ಹಾಕುವ ಮೂಲಕ ಅಲ್ಲಿ ಕಸ ಬಿಸಾಡದಂತೆ ಜಾಗೃತಿ ಮೂಡಿಸಲಾಗಿದೆ. ಅಲ್ಲದೇ ಪ್ರತಿ ಮನೆಗಳ ಹಾಗೂ ಅಂಗಡಿ ಮುಗ್ಗಟ್ಟುಗಳ ಮುಂದೆ ತೆರಳಿ ಕಸವನ್ನು ತೆಗೆದುಕೊಂಡು ಹೋಗುವ ಕೆಲಸ ಮಾಡಲಾಗುತ್ತಿದೆ. ಈ ಕುರಿತು ಸಾರ್ವಜನಿಕರು ನಮ್ಮೊಂದಿಗೆ ಕೈ ಜೋಡಿಸಿ ತಿಪ್ಪೆಗಳಲ್ಲಿ ಕಸ ಹಾಕುವುದನ್ನು ನಿಲ್ಲಿಸಬೇಕು. ರಸ್ತೆ, ತಿಪ್ಪೆ ಸೇರಿ ಕಂಡಕಂಡಲ್ಲಿ ಕಸ ಹಾಕುವುದನ್ನು ಬಿಟ್ಟು ಮನೆಮನೆಗೆ ಬರುವ ಕಸದ ವಾಹನದಲ್ಲೇ ನಿತ್ಯವೂ ಕಸ ಹಾಕುವ ಮೂಲಕ ನಮ್ಮ ಅಭಿಯಾನದ ಯಶಸ್ವಿಗೆ ಸಹಕರಿಸಬೇಕು ಎಂದರು.

ಸ್ವ ಸಹಾಯ ಗುಂಪಿನ ಸಮುದಾಯ ತರಬೇತಿಗಾರ್ತಿ ಜಾನಕಿ ಮಾತನಾಡಿ, ಕಸ ಕಂಡರೆ 96112 26509ಕ್ಕೆ ಪೋಟೊ ಕಳುಹಿಸಿ. ಸಾರ್ವಜನಿಕರು ಕಸವಿರುವ ಜಾಗದ ಪೋಟೊ ತೆಗೆದು ಸಹಾಯವಾಣಿ ಸಂಖ್ಯೆಗೆ ಕಳುಹಿಸಿದಲ್ಲಿ 48 ಗಂಟೆಗಳಲ್ಲಿ ಕಸ ವಿಲೇವಾರಿ ಮಾಡಲಾಗುವುದು. ಎಲ್ಲೆಂದರಲ್ಲೆ ಕಸ ಹಾಕುವುದನ್ನು ನಿಷೇಧಿಸಲಾಗಿದ್ದು ನಿಯಮ ಉಲ್ಲಂಘಸಿ ಕಸ ಬಿಸಾಡುವವರಿಗೆ ದಂಡ ವಿಧಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಪುರಸಭೆ ಸದಸ್ಯ ಲಡ್ಡುಹೊನ್ನೂರವಲಿ, ಪ್ರಮುಖರಾದ ಜಿ.ಸುಧಾಕರ, ಪರಿಸರ ಅಭಿಯಂತರ ಶರಣಪ್ಪ, ಆರ್‌ಐ ಭರಮಪ್ಪ, ಆರೋಗ್ಯ ನಿರೀಕ್ಷಕರಾದ ಪ್ರಕಾಶಬಾಬು, ಜೀವನ್‌ಸ್ವಾತಿ, ಜ್ಯೋತಿ, ಸಮುದಾಯ ತರಬೇತುದಾರರಾದ ಜಾನಕಿ, ನಾಗರತ್ನಾ, ಭೂಮಿಕಾ, ತಿಪ್ಪಮ್ಮ ಸೇರಿ ಪುರಸಭೆ ಸಿಬ್ಬಂದಿ ಇದ್ದರು.

PREV

Recommended Stories

ಲೋಕಾ ಎಸ್ಪಿ ಬದ್ರಿನಾಥ್‌ ಸೇರಿ 19 ಪೊಲೀಸರಿಗೆ ರಾಷ್ಟ್ರ ಪದಕ
ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ