‘ಸಿವಿಲ್ ಎಂಜಿನಿಯರಿಂಗ್ ನಲ್ಲಿ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳ ಕುರಿತು ಜ್ಞಾನ ಹಂಚಿಕೆ ಅಧಿವೇಶನ’ ಕಾರ್ಯಾಗಾರ

KannadaprabhaNewsNetwork |  
Published : Sep 27, 2025, 12:02 AM IST
ಸಿವಿಲ್ ಎಂಜಿನಿಯರಿಂಗ್ ನಲ್ಲಿ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳ ಕುರಿತು ಜ್ಞಾನ ಹಂಚಿಕೆ ಅಧಿವೇಶನ: ವಾಸ್ತು ಶಾಸ್ತ್ರದ ಒಳನೋಟ | Kannada Prabha

ಸಾರಾಂಶ

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಇಂಡಿಯನ್ ನಾಲೆಡ್ಜ್ ಸಿಸ್ಟಮ್ಸ್ (ಐಕೆಎಸ್) ಸಹಯೋಗದೊಂದಿಗೆ ‘ಸಿವಿಲ್ ಎಂಜಿನಿಯರಿಂಗ್ ನಲ್ಲಿ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳು: ವಾಸ್ತು ಶಾಸ್ತ್ರದ ಒಳನೋಟಗಳು’ ಎಂಬ ವಿಷಯದ ಕುರಿತು ಕಾರ್ಯಾಗಾರ ಗುರುವಾರ ಆಯೋಜಿಸಿತು.

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗವು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಇಂಡಿಯನ್ ನಾಲೆಡ್ಜ್ ಸಿಸ್ಟಮ್ಸ್ (ಐಕೆಎಸ್) ಸಹಯೋಗದೊಂದಿಗೆ ‘ಸಿವಿಲ್ ಎಂಜಿನಿಯರಿಂಗ್ ನಲ್ಲಿ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳು: ವಾಸ್ತು ಶಾಸ್ತ್ರದ ಒಳನೋಟಗಳು’ ಎಂಬ ವಿಷಯದ ಕುರಿತು ಕಾರ್ಯಾಗಾರ ಗುರುವಾರ ಆಯೋಜಿಸಿತು.ಕಾರ್ಯಕ್ರಮ ಉದ್ಘಾಟಿಸಿದ ಸಿವಿಲ್ ಎಂಜಿನಿಯರ್ ಎ.ಆರ್. ಸತೀಶ್ ರಾವ್ ಇಡ್ಯ ಕಾರ್ಯಕ್ರಮಕ್ಕೆ ಶುಭಕೋರಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಲುಂಕರ್ ಮಾತನಾಡಿ, ಸುಸ್ಥಿರ ಅಭಿವೃದ್ಧಿಗಾಗಿ ಪ್ರಾಚೀನ ವಾಸ್ತುಶಿಲ್ಪದ ಜ್ಞಾನವನ್ನು ಆಧುನಿಕ ಸಿವಿಲ್ ಎಂಜಿನಿಯರಿಂಗ್ ಅಭ್ಯಾಸಗಳೊಂದಿಗೆ ಬೆರೆಸುವ ಮಹತ್ವ ವಿವರಿಸಿದರು.ತಾಂತ್ರಿಕ ಅಧಿವೇಶನಗಳಲ್ಲಿ ಸಿವಿಲ್ ಎಂಜಿನಿಯರ್ ಎ.ಆರ್. ಸತೀಶ್ ರಾವ್ ಇಡ್ಯ ಅವರು ‘ಪರಿಹಾರ ವಾಸ್ತು: ಪ್ರಾಯೋಗಿಕ ದೃಷ್ಟಿಕೋನ’ ಕುರಿತು ಗೋಷ್ಠಿ ನಡೆಸಿಕೊಟ್ಟರು.

ಇದು ಸಾಮಾನ್ಯ ನಿರ್ಮಾಣ ಸವಾಲುಗಳಿಗೆ ಪರಿಹಾರಗಳನ್ನು ತೋರಿಸಿತು. ಉಡುಪಿಯ ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ.ಗೋಪಾಲಾಚಾರ್ ಅವರು ವಾಸ್ತು ಶಾಸ್ತ್ರ ತತ್ವಗಳ ಅನಿವಾರ್ಯತೆಯ ಬಗ್ಗೆ ವಿದ್ವತ್ಪೂರ್ಣ ಒಳನೋಟಗಳನ್ನು ಒದಗಿಸುವ ಮೂಲಕ ವಾಸ್ತುವಿನ ಅನಿವಾರ್ಯತೆ ಕುರಿತು ಮಾತನಾಡಿದರು.ಮಧ್ಯಾಹ್ನದ ಅಧಿವೇಶನಗಳಲ್ಲಿ, ಮಣಿಪಾಲದ ಮುನಿಯಾಲ್ ಆಯುರ್ವೇದಿಕ್ ಕಾಲೇಜಿನ ಪ್ರೊ.ಹರಿ ಪ್ರಸಾದ್ ಭಟ್, ಹೆರ್ಗಾ, ಮನೆ ನಿರ್ಮಾಣದ ಪ್ರಾಯೋಗಿಕ ಸಲಹೆಗಳೊಂದಿಗೆ ವಸತಿ ಕಟ್ಟಡ ವಾಸ್ತು ಮಾರ್ಗದರ್ಶನ ಹಂಚಿಕೊಂಡರು.

ವಾಸ್ತು ಸಲಹೆಗಾರ ಮತ್ತು ಸಿವಿಲ್ ಎಂಜಿನಿಯರ್ ಎ.ಮುರಳೀಧರ್ ಹೆಗಡೆ ಅವರ ಸಮಾರೋಪ ತಾಂತ್ರಿಕ ಉಪನ್ಯಾಸವು ‘ವಾಸ್ತು ಕುರಿತ ಆಧುನಿಕ ದೃಷ್ಟಿಕೋನಗಳು’ ಸಾಂಪ್ರದಾಯಿಕ ಜ್ಞಾನವನ್ನು ಸಮಕಾಲೀನ ಎಂಜಿನಿಯರಿಂಗ್ ಪರಿಹಾರಗಳೊಂದಿಗೆ ಬೆಸೆಯಿತು.ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಅರುಣ್ ಕುಮಾರ್ ಭಟ್ ಹಾಜರಿದ್ದರು.ಐಕೆಎಸ್ ನಿರ್ದೇಶಕ ಡಾ.ಸುಧೀರ್ ರಾಜ್ ಕೆ ಅವರು ಸಿವಿಲ್ ಎಂಜಿನಿಯರಿಂಗ್ ನ ಭವಿಷ್ಯವನ್ನು ಹೆಚ್ಚಿಸುವಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಗಳ ಪ್ರಸ್ತುತತೆಯನ್ನು ತಿಳಿಸಿದರು. ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರದೀಪ್ ಕಾರಂತ್ ಹಾಗೂ ತುಷಾರ್ ಎಸ್ ಶೆಟ್ಟಿ ಕಾರ್ಯಾಗಾರ ಸಂಯೋಜಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ