ಕನ್ನಡಪ್ರಭ ವಾರ್ತೆ ಉಡುಪಿ
ಈ ಸಂದರ್ಭ ಶ್ರೀ ಪುತ್ತಿಗೆ ಮಠದ ದಿವಾನರಾದ ಪ್ರಸನ್ನ ಆಚಾರ್ಯ ಹಾಗೂ ನಾಗರಾಜ ಆಚಾರ್ಯ ಅವರು ಕಾರ್ಯಕ್ರಮಕ್ಕೆ ಚಾಲನೆನೀಡಿದರು. ಪುತ್ತಿಗೆ ಮಠದ ಸುಗುಣ ಮಾಲಾ ಶಾಲೆಯ ಸಂಚಾಲಕ ಪ್ರಮೋದ ಸಾಗರ, ಶಾಲಾ ವಿದ್ಯಾರ್ಥಿ ವೃಂದ, ಅನಂತ ವಿಪ್ರ ಬಳಗದ ಸದಸ್ಯರು, ದೇವಾಲಯದ ಜೀರ್ಣೋದ್ಧಾರ ಸಮಿತಿ ಸದಸ್ಯರು ಹಾಜರಿದ್ದರು.ದೇವಾಲಯದ ಹೊರಾಂಗಣದಲ್ಲಿ ಮಾವು, ಹಲಸು, ನೇರಳೆ, ಗೇರು, ಪುನರ್ಪುಳಿ, ಬಿಲ್ವ ಪತ್ರೆ, ತುಳಸಿ, ಮಲ್ಲಿಗೆ ಹಾಗೂ ವಿವಿಧ ಬಗೆಯ ಹೂವಿನ ಗಿಡಗಳನ್ನು ನೆಡಲಾಯಿತು. ಪುತ್ತಿಗೆ ಮಠದ ಪ್ರಸನ್ನಾಚಾರ್ಯ, ಪರಿಸರ ದಿನಾಚರಣೆಯ ಮಹತ್ವ ತಿಳಿಸಿದರು. ಅನಂತ ವಿಪ್ರ ಬಳಗದ ಕೆ. ರಾಘವೇಂದ್ರ ಭಟ್ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಿಸಿದರು.