ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

KannadaprabhaNewsNetwork |  
Published : Jun 07, 2024, 12:15 AM IST
ಸಪೋಟ,ನಿಂಬೆ ಕರಿಬೇವು,ಸೇರಿದಂತೆ ಬಗೆ ಬಗೆಯ ಸಸಿಗಳನ್ನು ಗ್ರಾಮಸ್ಥರಿಗೆ ವಿತರಿಸುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು. | Kannada Prabha

ಸಾರಾಂಶ

ಸಪೋಟ, ನಿಂಬೆ ಕರಿಬೇವು, ಸೇರಿದಂತೆ ಬಗೆ ಬಗೆಯ ಸಸಿಗಳನ್ನು ಗ್ರಾಮಸ್ಥರಿಗೆ ವಿತರಿಸುವ ಮೂಲಕ ನಗರದ ಆದಿಚುಂಚನಗಿರಿ ಆಂಗ್ಲ ಪ್ರಾಥಮಿಕ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವಿಶೇಷವಾಗಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಸಪೋಟ, ನಿಂಬೆ ಕರಿಬೇವು, ಸೇರಿದಂತೆ ಬಗೆ ಬಗೆಯ ಸಸಿಗಳನ್ನು ಗ್ರಾಮಸ್ಥರಿಗೆ ವಿತರಿಸುವ ಮೂಲಕ ನಗರದ ಆದಿಚುಂಚನಗಿರಿ ಆಂಗ್ಲ ಪ್ರಾಥಮಿಕ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವಿಶೇಷವಾಗಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು.

ಶಾಲೆಯ ಮುಖ್ಯ ಶಿಕ್ಷಕಿ ಜ್ಞಾನೇಶ್ವರಿ ಅವರ ನೇತೃತ್ವದಲ್ಲಿ ತಾಲೂಕಿನ ಚಿಕ್ಕೂರು ಗ್ರಾಮಕ್ಕೆ ಭೇಟಿ ನೀಡಿದ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿಗಳು ತಾವು ತಂದಿದ್ದ ನೂರಾರು ಸಸಿಗಳನ್ನು ಗ್ರಾಮಸ್ಥರಿಗೆ ವಿತರಿಸಿದರು ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಜ್ಞಾನೇಶ್ವರಿ ಮಾತನಾಡಿ, ತಮ್ಮ ಕೃಷಿ ಚಟುವಟಿಕೆ ಜತೆಗೆ ತಮ್ಮ ಜಮೀನುಗಳ ಬದಿಯಲ್ಲಿ ಹಣ್ಣು ಹಂಪಲು ನೀಡುವ ಮರ ಗಿಡಗಳನ್ನು ಬೆಳೆಸುವ ಮೂಲಕ ಆರ್ಥಿಕವಾಗಿ ಲಾಭಗಳಿಸುವ ಅವಕಾಶವಿದೆ ಎಂದು ಗ್ರಾಮಸ್ಥರಿಗೆ ಕಿವಿಮಾತು ಹೇಳಿದರು.

ಪೂಜ್ಯ ಬೈರವಿಕೆ ಡಾ. ಬಾಲ ಗಂಗಾಧರನಾಥ ಮಹಾಸ್ವಾಮಿಗಳು ಆದಿಚುಂಚನಗಿರಿ ಮಠವನ್ನು ಧಾರ್ಮಿಕವಾಗಿ ಮಾತ್ರ ಬೆಳೆಸಲಿಲ್ಲ ಸಾಮಾಜಿಕ ಶೈಕ್ಷಣಿಕ ಆರೋಗ್ಯ ಪರಿಸರ ಹೀಗೆ ಸಮಾಜಮುಖಿಯಾಗಿ ನಾನಾ ಸೇವ ಕಾರ್ಯಗಳನ್ನು ಮಾಡುವ ಕೇಂದ್ರವನ್ನಾಗಿಯೂ ಬೆಳೆಸುವ ಮೂಲಕ ಮನುಕುಲಕ್ಕೆ ದಾರಿ ತೋರಿಸಿದ್ದು ಪ್ರಸ್ತುತ ಜಗದ್ಗುರುಗಳಾದ ಡಾ. ನಿರ್ಮಲ ನಂದನಾಥ ಶ್ರೀಗಳು ಹಾಗೂ ಹಾಸನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶಂಭುನಾಥ ಸ್ವಾಮೀಜಿಗಳು ಸಹ ಈ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿದ್ದು ಅವರ ಮಾರ್ಗದರ್ಶನದಂತೆ ಇಂದು ನಾವೆಲ್ಲಾ ಚಿಕ್ಕೂರು ಗ್ರಾಮಕ್ಕೆ ಆಗಮಿಸಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡು.

ಈ ವೇಳೆ ಶಾಲೆಯ ದೈಹಿಕ ಶಿಕ್ಷಕ ರವಿ ಶಿಕ್ಷಕಿಯರಾದ ಜಯಲಕ್ಷ್ಮ, ಜ್ಯೋತಿ ಲಕ್ಷ್ಮಿ, ದಿವ್ಯ, ಸ್ವಾತಿ,ಹಾಗೂ ಶಕುಂತಲಾ ಮತ್ತಿತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!