ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣ ಪುರಸಭೆ ವ್ಯಾಪ್ತಿ ಗಂಜಾಂ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಸಂಘದ ಪದಾಧಿಕಾರಿಗಳ ಜೊತೆ ಸಂಘದ ಯೋಜನಾಧಿಜಾರಿ ಗಣಪತಿ ಭಟ್ ನೇತೃತ್ವದಲ್ಲಿ ಪದಾಧಿಕಾರಿಗಳು ಗಿಡ ಮರಗಳಿಗೆ ನಿರುಪಯುಕ್ತ ಪ್ಲಾಸ್ಟಿಕ್ ಬಾಟೆಲ್‌ಗಳನ್ನು ಕತ್ತಿರಿಸಿ ಅವುಗಳಿಗೆ ಆಹಾರ ಮತ್ತು ನೀರು ಹಾಕಿ ಮರಗಳಿಗೆ ನೇತು ಹಾಕುವ ಮೂಲಕ ವಿನೂತನ ವಿಶ್ವ ಗುಬ್ಬಿ ದಿನಾಚರಣೆ ಆಚರಿಸಿದರು.
ಹಲವು ಕಡೆಗಳಲ್ಲಿ ಈ ಕಾರ್ಯಕ್ರಮ ನಡೆಸಿದ ಅವರು, ಗ್ರಾಮದ ಜನರಿಗೆ ಪಕ್ಷಿ ಸಂಕುಲಗಳ ಸಂರಕ್ಷಣೆ ಕುರಿತು ಜಾಗೃತಿಗಳ ನಡೆಸಿದರು. ಸಂಘದ ಈ ಸೇವಾ ಕಾರ್ಯಕ್ಕೆ ಗ್ರಾಮಸ್ಥರು ಕೂಡ ಕೈ ಜೋಡಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ಇದೇ ವೇಳೆ ಗುಬ್ಬಚ್ಚಿಗಳಿಗೆ ಪೈಪ್‌ಗಳ ಮೂಲಕ ಗೂಡುಗಳ ನಿರ್ಮಿಸಿ ಗುಬ್ಬಚ್ಚಿಗಳ ವಾಸಿಸಲು ಸ್ಥಳವಕಾಶ ನೀಡಿರುವ ಗಂಜಾಂನ ಜಯರಾಂ ಮನೆಗೂ ಭೇಟಿ ನೀಡಿ ಪ್ರಶಂಸಿಸಿದರು.
ಇಂದು ಪ್ರೇಮಕವಿ ಕೆಎಸ್‌ನ ಸಾಹಿತ್ಯ, ಕಾವ್ಯಗಾಯನ ಪ್ರಶಸ್ತಿ ಸಮಾರಂಭ
ಒನಗರದ ನಾಲ್ವಡಿಕೃಷ್ಣರಾಜಒಡೆಯರ್ ಕಲಾ ಮಂದಿರದಲ್ಲಿ ಮಾ.23 ರಂದು ಬೆಳಗ್ಗೆ ಕೆ.ಎಸ್.ನ ಸಾಹಿತ್ಯ ಪ್ರಶಸ್ತಿ ಹಾಗೂ ಕಾವ್ಯಗಾಯನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಪ್ರೊ.ಜಯಪ್ರಕಾಶ್‌ಗೌಡ ಹಾಗೂ ಡಾ.ನಾ.ದಾಮೋದರ ಶೆಟ್ಟಿ ಅವರಿಗೆ ಕೆಎಸ್ ನ ಸಾಹಿತ್ಯ ಪ್ರಶಸ್ತಿ ಹಾಗೂ ಗಾಯಕಿ ಸಂಗೀತಾಕಟ್ಟಿ ಹಾಗೂ ರಮೇಶ್‌ಚಂದ್ರ ಅವರಿಗೆ ಕೆ.ಎಸ್.ನ. ಕಾವ್ಯಗಾಯನ ಪ್ರಶಸ್ತಿ ಪ್ರದಾನ ನಡೆಯಲಿದೆ.