ಅಹಿಂಸೆ, ದಯೆಯಿಂದ ಮಾತ್ರ ವಿಶ್ವಶಾಂತಿ: ಅಶೋಕ ಜೈನ್

KannadaprabhaNewsNetwork | Published : Apr 11, 2025 12:33 AM

ಸಾರಾಂಶ

ಹಿಂಸಾ ಕೃತ್ಯಗಳಿಂದ ಪ್ರಸ್ತುತ ವಾತಾವರಣ ನಲುಗಿದೆ. ಭಗವಾನ್ ಮಹಾವೀರರ ವಿಶ್ವಶಾಂತಿಗಾಗಿ ಸಾರಿದ ಅಹಿಂಸಾ ಪರಮೋದ್ಧರ್ಮ ಎನ್ನುವ ಸಾರ್ವತ್ರಿಕ ಸತ್ಯವನ್ನು ಇನ್ನಾದರೂ ಜಗತ್ತು ಒಪ್ಪಿಕೊಳ್ಳಬೇಕು.

ಬ್ಯಾಡಗಿ: ಅಹಿಂಸೆ ಮತ್ತು ದಯೆಯಿಂದ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಸಾಧ್ಯವಾಗಲಿದೆ. ಮಹಾವೀರ ಸದಾಚಾರದ ಮಾರ್ಗದಿಂದ ಪ್ರತಿಯೊಬ್ಬರೂ ಬದುಕಬೇಕಾಗಿದೆ ಎಂದು ಮುಖಂಡ ಅಶೋಕ ಜೈನ್ ತಿಳಿಸಿದರು.

ಪಟ್ಟಣದ ಪಾರ್ಶ್ವನಾಥ ಶ್ವೇತಾಂಬರ ಜೈನ್ ಸಂಘದ ಆಶ್ರಯದಲ್ಲಿ ಜರುಗಿದ ತೀರ್ಥಂಕರ ಭಗವಾನ್ ಮಹಾವೀರ ಜಯಂತಿ ಮೆರವಣಿಗೆ ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಿಂಸಾ ಕೃತ್ಯಗಳಿಂದ ಪ್ರಸ್ತುತ ವಾತಾವರಣ ನಲುಗಿದೆ. ಭಗವಾನ್ ಮಹಾವೀರರ ವಿಶ್ವಶಾಂತಿಗಾಗಿ ಸಾರಿದ ಅಹಿಂಸಾ ಪರಮೋದ್ಧರ್ಮ ಎನ್ನುವ ಸಾರ್ವತ್ರಿಕ ಸತ್ಯವನ್ನು ಇನ್ನಾದರೂ ಜಗತ್ತು ಒಪ್ಪಿಕೊಳ್ಳಬೇಕು ಎಂದರು.

ಭಗವಾನ್ ಮಹಾವೀರರು ಪ್ರತಿ ಜೀವಿಗಳಿಗೂ ದಯೆ ತೋರಿಸೋಣ, ಅಹಿಂಸೆ ಮತ್ತು ದಯೆಯಿಂದ ವಿಶ್ವದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಸಾಧ್ಯ. ಸದಾಚಾರದ ಮಾರ್ಗದಿಂದ ಪ್ರತಿಯೊಬ್ಬರೂ ಬದುಕಬೇಕಾಗಿದೆ ಎಂದರು. ಆದರೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿರುವ ಬಹುತೇಕ ರಾಷ್ಟ್ರಗಳು ಸಾರ್ವಭೌಮತ್ವ ಸಾಧಿಸಲು ಹಿಂಸೆಯ ಮಾರ್ಗ ಹಿಡಿದಿರುವುದು ದುರದೃಷ್ಟಕರ ಎಂದರು.ಮುಖಂಡ ಅಂಬಾಲಾಲ್ ಜೈನ್ ಮಾತನಾಡಿ, ಭಗವಾನ್ ಮಹಾವೀರರ ನೈತಿಕ ಬೋಧನೆಗಳು ವ್ಯಕ್ತಿಯ ಜೀವನದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ. ಭಗವಾನ್ ಮಹಾವೀರರು ತಮ್ಮ ಮೂವತ್ತನೇ ವಯಸ್ಸಿನಲ್ಲಿ ಲೌಕಿಕ ಬದುಕನ್ನು ತ್ಯಜಿಸಿ ಆಧ್ಯಾತ್ಮಿಕ ಜಾಗೃತಿ ಮೂಡಿಸಲು ಮನೆಯನ್ನು ತೊರೆದು ಅನ್ವೇಷಣೆ ಆರಂಭಿಸಿ ಸತತ ಮೂರು ದಶಕಗಳ ಕಾಲಧರ್ಮ ಬೋಧನೆಯಲ್ಲಿ ತೊಡಗಿ ಬಳಿಕ ಮೋಕ್ಷವನ್ನು ಪಡೆದಿದ್ಧಾಗಿ ತಿಳಿಸಿದರು.ಭಗವಾನ್ ಮಹಾವೀರರ ವಿಗ್ರಹವನ್ನು ರಥಯಾತ್ರೆ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಇದಕ್ಕೂ ಮುನ್ನ ಮಹಾವೀರರ ಪ್ರತಿಮೆಗಳಿಗೆ ವಿಧ್ಯುಕ್ತವಾದ ಅಭಿಷೇಕ ಕಾರ್ಯಕ್ರಮ ಜರುಗಿತು. ಇದೇ ಸಂದರ್ಭದಲ್ಲಿ ಜೈನ ಸಮುದಾಯದ ಸದಸ್ಯರು, ದಾನಧರ್ಮ ಕಾರ್ಯಗಳು, ಪ್ರಾರ್ಥನೆ, ಪೂಜೆ ಮತ್ತು ವ್ರತಗಳಲ್ಲಿ ತೊಡಗಿದ್ದರು.

ಈ ಸಂದರ್ಭದಲ್ಲಿ ಆನಂದ ಜೈನ್, ಉಮೇಶ್ ಜೈನ್, ಸಂಜಯ ಜೈನ್, ತೀರತ್ ಜೈನ್, ಭರತ ಜೈನ್, ಅಜಯ್ ಜೈನ್, ಪ್ರವೀಣ ಜೈನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ಅಹಿಂಸಾ ಪರಮೋದ್ಧರ್ಮ ಪಾಲಿಸದಿದ್ದರೆ ವಿನಾಶ

ಬ್ಯಾಡಗಿ: ಒಬ್ಬರನ್ನೊಬ್ಬರು ಕೊಲ್ಲುವ ಸಂಸ್ಕೃತಿಗೆ ಕಡಿವಾಣ ಹಾಕಿಕೊಳ್ಳದಿದ್ದಲ್ಲಿ ವಿಶ್ವದೆಲ್ಲೆಡೆ ಜೀವಸಂಕುಲ ನಿಶ್ಚಿತವಾಗಿ ನಾಶವಾಗಲಿದೆ. ಭಗವಾನ್ ಮಹಾವೀರರ ವಿಶ್ವಶಾಂತಿಗಾಗಿ ಸಾರಿದ ಅಹಿಂಸಾ ಪರಮೋದ್ಧರ್ಮ ಅಳವಡಿಸಿಕೊಳ್ಳದಿದ್ದರೆ ಮನುಷ್ಯ ತನ್ನ ವಿನಾಶಕ್ಕೆ ತಾನೇ ಕಾರಣನಾಗಲಿದ್ದಾನೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯಪಟ್ಟರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಮಹಾವೀರ ಜಯಂತಿ ಕಾರ‍್ಯಕ್ರಮದಲ್ಲಿ ಮಾತನಾಡಿ, ಯುದ್ಧದಿಂದ ಜಗತ್ತು ಜರ್ಜರಿತವಾಗಿದೆ. ಮನುಷ್ಯನ ಮೇಲೆ ಮನುಷ್ಯನಿಗೆ ಕರುಣೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಾವೀರರ ನೈತಿಕ ಬೋಧನೆಗಳು ವ್ಯಕ್ತಿಯ ಜೀವನದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ. ಮಹಾವೀರರು ತಮ್ಮ 30ನೇ ವಯಸ್ಸಿನಲ್ಲಿ ಲೌಕಿಕ ಬದುಕನ್ನು ತ್ಯಜಿಸಿ ಆಧ್ಯಾತ್ಮಿಕ ಜಾಗೃತಿ ಮೂಡಿಸಲು ಮನೆಯನ್ನು ತೊರೆದು ಅನ್ವೇಷಣೆ ಆರಂಭಿಸಿ ಸತತ ಮೂರು ದಶಕಗಳ ಕಾಲಧರ್ಮ ಬೋಧನೆಯಲ್ಲಿ ತೊಡಗಿ ಬಳಿಕ ಮೋಕ್ಷವನ್ನು ಪಡೆದಿದ್ಧಾಗಿ ತಿಳಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಎಫ್.ಎ. ಸೋಮನಕಟ್ಟಿ, ಮುಖಂಡರಾದ ನಾಗರಾಜ ಆನ್ವೇರಿ, ದುರ್ಗೇಶ ಗೋಣೆಮ್ಮನವರ ಸೇರಿದಂತೆ ಜೈನ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.

Share this article