ಎಲ್ಲಾ ರಂಗದಲ್ಲೂ ಮಹಿಳೆಯರ ಪಾತ್ರ ಹಿರಿದು: ರೇಖಾ ದಾಸ್

KannadaprabhaNewsNetwork |  
Published : Mar 25, 2024, 12:50 AM IST
47 | Kannada Prabha

ಸಾರಾಂಶ

ರಾಜಕೀಯ, ಚಲನಚಿತ್ರ, ರಂಗಭೂಮಿ, ನೌಕಾಪಡೆ, ವಾಯುಪಡೆ, ವೈದ್ಯಕೀಯ, ವಿಜ್ಞಾನ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ಗಣನೀಯ ಪ್ರಮಾಣದಲ್ಲಿ ಸಾಧನೆ ಮಾಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ಈಗಾಗಲೇ ಚಲನಚಿತ್ರ, ರಂಗಭೂಮಿಯಲ್ಲಿ ಸ್ತ್ರೀ ಪಾತ್ರಗಳ ಅಭಿನಯದಿಂದ ಸಮಾಜದಲ್ಲಿ ಉತ್ತಮವಾದ, ಆರೋಗ್ಯಕರವಾದ ಬದಲಾವಣೆಯನ್ನು ಕಾಣುತ್ತಿದ್ದೇವೆ

ಕನ್ನಡಪ್ರಭ ವಾರ್ತೆ ಮೈಸೂರು

ಪ್ರಸ್ತುತ ದಿನಗಳಲ್ಲಿ ಎಲ್ಲಾ ರಂಗಗಳಲ್ಲಿಯೂ ಮಹಿಳೆಯರಿಗೆ ಸಮಾನ ಸ್ಥಾನವನ್ನು ಸರ್ಕಾರವು ಕಲ್ಪಿಸಿದೆ. ಇದು ಅತ್ಯಂತ ಹರ್ಷದಾಯಕ ಸಂಗತಿ. ಎಲ್ಲಾ ರಂಗದಲ್ಲೂ ಮಹಿಳೆಯರ ಪಾತ್ರ ಹಿರಿದು ಎಂದು ಚಲನಚಿತ್ರ ನಟಿ ರೇಖಾ ದಾಸ್ ತಿಳಿಸಿದರು.

ನಗರದ ಪುರಭವನದಲ್ಲಿ ಸ್ವರಲೋಕ ಸಾಂಸ್ಕೃತಿಕ ಕಲಾ ವೇದಿಕೆಯು ಭಾನುವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಕರೋಕೆ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯು ನಾಕೂ ಕೋಣೆಗಳ ಮಧ್ಯೆ ಜೀವನ ನಡೆಸುತ್ತಿದ್ದ ಕಾಲವೊಂದಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಎಲ್ಲಾ ರಂಗಗಳಲ್ಲಿಯೂ ಮಹಿಳೆಯರು ಹೆಚ್ಚಿನ ಸ್ಥಾನವನ್ನು ಪಡೆದಿದ್ದಾರೆ ಎಂದರು.

ರಾಜಕೀಯ, ಚಲನಚಿತ್ರ, ರಂಗಭೂಮಿ, ನೌಕಾಪಡೆ, ವಾಯುಪಡೆ, ವೈದ್ಯಕೀಯ, ವಿಜ್ಞಾನ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ಗಣನೀಯ ಪ್ರಮಾಣದಲ್ಲಿ ಸಾಧನೆ ಮಾಡಿರುವುದು ಇದಕ್ಕೆ ಸಾಕ್ಷಿಯಾಗಿದೆ. ಈಗಾಗಲೇ ಚಲನಚಿತ್ರ, ರಂಗಭೂಮಿಯಲ್ಲಿ ಸ್ತ್ರೀ ಪಾತ್ರಗಳ ಅಭಿನಯದಿಂದ ಸಮಾಜದಲ್ಲಿ ಉತ್ತಮವಾದ, ಆರೋಗ್ಯಕರವಾದ ಬದಲಾವಣೆಯನ್ನು ಕಾಣುತ್ತಿದ್ದೇವೆ ಎಂದು ಅವರು ಹೇಳಿದರು.

ಹಿಂದೆ ಚಲನಚಿತ್ರ ಮತ್ತು ರಂಗಭೂಮಿ ಕಲೆಗಳಿಗೆ ಹೆಣ್ಣು ಮಕ್ಕಳ ಅಭಿನಯಕ್ಕೆ ಸಂಖ್ಯೆಕ ಡಿಮೆ ಇರುತ್ತಿತ್ತು. ಆದರೆ, ಇಂದಿನ ಸ್ಪರ್ಧಾಯುಗದಲ್ಲಿ ಪೈಪೋಟಿ ಹೆಚ್ಚಿ, ಮಹಿಳೆಯರು ಭಾಗವಹಿಸುತ್ತಿರುವುದು ಸಂತೋಷವಾಗಿದೆ ಎಂದರು.

ಹಿನ್ನೆಲೆ ಗಾಯಕಿ ಜೋಗಿ ಸುನಿತಾ ಮಾತನಾಡಿ, ಚಲನಚಿತ್ರ ಮತ್ತು ಜಾನಪದ ಕ್ಷೇತ್ರಗಳಲ್ಲಿ ಮಹಿಳೆಯರು ಹೆಚ್ಚು ಗಾಯನ, ಸಂಗೀತ, ನೃತ್ಯ ಕ್ಷೇತ್ರಗಳಲ್ಲಿ ಭಾಗವಹಿಸಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಾದ ಡಾ. ರೇಖಾ ಅರುಣ್, ನಳಿನಿ ತಮ್ಮಯ್ಯ, ಇನ್ಸ್ ಪೆಕ್ಟರ್ ಮಮತಾ, ಧನಲಕ್ಷಿ, ಶುಶ್ರೂಷಕಿ ಕೆ.ಕೆ. ಯಶೋಧ, ರಂಗಭೂಮಿ ಕಲಾವಿದೆ ಮೇರಿ ವಸಂತ್, ಪ್ರಾಧ್ಯಾಪಕಿ ಪ್ರಿಯಾಂಕ ಅವರನ್ನು ಸನ್ಮಾನಿಸಲಾಯಿತು.

ಸ್ವರಲೋಕ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ಯಶಸ್ವಿನಿ ಲೋಕೇಶ್ವರ್, ಗೌರವ ಅಧ್ಯಕ್ಷ ಗೋಪಾಲ್ ರಾವ್, ಉಪಾಧ್ಯಕ್ಷ ಕೆ.ಎಸ್. ಲೋಕೇಶ್, ವಿಜಯಶ್ರೀ, ಪ್ರಧಾನ ಕಾರ್ಯದರ್ಶಿ ಎಸ್. ಪ್ರಿಯಾ, ಕಾರ್ಯದರ್ಶಿ ಕವಿತಾ, ಖಜಾಂಚಿ ಅಂಕಿತಾ, ಸಂಘಟನಾ ಕಾರ್ಯದರ್ಶಿ ಸಿ.ಎಸ್. ಶಿವರಾಜ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!