ಕನ್ನಡಪ್ರಭ ವಾರ್ತೆ ಲೋಕಾಪುರ
ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ದಾಸರ ಹಾಡುಗಳು ಹಾಡಿಗೆ ತಕ್ಕಂತೆ ಮಹಿಳೆಯರು ಹೆಜ್ಜೆ ಹಾಕಿದರು. ಜಯತೀರ್ಥ ಗುರುಭ್ಯೋನಮಃ ಘೋಷಣೆಗಳು ಮೊಳಗಿದವು. ಎದುರಾರೈತ ಗುರುವೇ ನಿಮಗೆ ಸಮನಾರೈ ಎಂಬ ದಾಸರ ಪದ ಹಾಡುತ್ತ ಯುವಕರು ಉತ್ಸಾಹದಿಂದ ರಥೋತ್ಸವದ ಮುಂದೆ ಕುಣಿದು ಕುಪ್ಪಳಿಸಿದರು.ಈ ವೇಳೆ ವಿಪ್ರ ಸಮಾಜದ ಮುಖಂಡರಾದ ಬಿ.ಎಲ್.ಬಬಲಾದಿ, ಎಸ್.ಎನ್.ಕುಲಕರ್ಣಿ, ಕಾರ್ಯದರ್ಶಿ ಲಕ್ಷ್ಮೀಕಾಂತ ದೇಶಪಾಂಡೆ, ಕೆ.ವ್ಹಿ.ಕುಲಕರ್ಣಿ, ಬಿ.ಡಿ.ಚಿನಗುಂಡಿ, ಗೋವಿಂದ ಕುಲಕರ್ಣಿ, ಭೀಮಾಚಾರ್ಯ ಜೋಶಿ, ರಮೇಶ ಕುಲಕರ್ಣಿ, ಪ್ರಸಾದ ಸೋಮಾಪುರ, ಸಂತೋಷ ದೇಶಪಾಂಡೆ, ಪ್ರವೀಣ ಸೋಮಾಪುರ, ಅಪ್ಪಾರಾವ ದೇಶಪಾಂಡೆ, ಸಂತೋಷ ಕುಲಕರ್ಣಿ, ರಾಹುಲ್ ಗೂಡುರ, ಅಣ್ಣಾರಾವ ದೇಶಪಾಂಡೆ, ನಾಗರಾಜ ಕುಲಕರ್ಣಿ, ಸುಶೀಲೇಂದ್ರ ದೇಶಪಾಂಡೆ, ಅರ್ಚಕ ಆನಂದಚಾರ್ಯ ಜಂಬಗಿ, ಕೆ.ಜಿ.ದೇಶಪಾಂಡೆ, ರಾಘವೇಂದ್ರ ಕುಲಕರ್ಣಿ, ಪ್ರಲ್ಹಾದ ಜೋಶಿ ವಿಪ್ರ ಸಮಾಜ, ಗುರುಸಾರ್ವಭೌಮ ಯುವಕ ಮಂಡಳ, ಗಾಯತ್ರಿ ಭಜನಾ ಮಂಡಳದ ಸರ್ವ ಸದಸ್ಯರು ಇದ್ದರು.