ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಹಿರೇಮಠದಲ್ಲಿ ಪಂಚಮಸಾಲಿ ಸಮಾಜದ ಪ್ರಥಮ ಜಗದ್ಗುರು ೨೦೦೮ ಲಿಂ.ಡಾ.ಮಹಾಂತ ಶಿವಾಚಾರ್ಯ ಸ್ವಾಮೀಜಿಗಳ ೧೨ನೇ ಪುಣ್ಯಾರಾಧನೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ತಾಲೂಕಿನ ಮನಗೂಳಿ ಹಿರೇಮಠದಲ್ಲಿ ಪಂಚಮಸಾಲಿ ಸಮಾಜದ ಪ್ರಥಮ ಜಗದ್ಗುರು ೨೦೦೮ ಲಿಂ.ಡಾ.ಮಹಾಂತ ಶಿವಾಚಾರ್ಯ ಸ್ವಾಮೀಜಿಗಳ ೧೨ನೇ ಪುಣ್ಯಾರಾಧನೆಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.ಈ ವೇಳೆ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು ಮಾತನಾಡಿ, ಬಸವನಾಡಿನಲ್ಲಿ ಜನಿಸಿ ಜೀವನ ಮಾಡುತ್ತಿರುವ ನಾವು ಪುಣ್ಯವಂತರು. ಈ ನಿಟ್ಟಿನಲ್ಲಿ ಬಸವಣ್ಣನವರ ತತ್ವಗಳನ್ನು ಲಿಂ.ಡಾ.ಮಹಾಂತ ಶಿವಾಚಾರ್ಯ ಸ್ವಾಮೀಜಿಗಳು ಸದಾ ಭಕ್ತರಿಗೆ ಬೋಧಿಸಿ ಬಸವ ತತ್ವದಂತೆ ಜೀವನ ಮಾಡುವಂತೆ ಪ್ರೇರೆಪಿಸುತ್ತಿದ್ದರು. ಪ್ರತಿಯೊಬ್ಬರೂ ಲಿಂಗ ಧರಿಸಿ ಲಿಂಗಪೂಜೆ ಮಾಡಿಕೊಳ್ಳಬೇಕು. ಸದಾ ಹಣೆಯಲ್ಲಿ ವಿಭೂತಿ ಧರಿಸಬೇಕು ಎಂದು ಹೇಳುತ್ತಿದ್ದರು. ಮನೆಯಲ್ಲಿ ಸಂಸ್ಕಾರ ಬಹಳ ಮುಖ್ಯ ಎಂದರು.ಜಿಪಂ ಮಾಜಿ ಅಧ್ಯಕ್ಷ ಚಂದ್ರಶೇಖರಗೌಡ ಪಾಟೀಲ ಮಾತನಾಡಿ, ಲಿಂ.ಡಾ.ಮಹಾಂತ ಶಿವಾಚಾರ್ಯರು ಮಾಡಿರುವ ಕಾರ್ಯ ಶ್ಲಾಘನೀಯ. ಪ್ರಸ್ತುತ ಪೀಠಾಧಿಪತಿಗಳಾಗಿರುವ ಅಭಿನವ ಸಂಗನಬಸವ ಶಿವಾಚಾರ್ಯರು ಪೂಜ್ಯರ ಆಶೀರ್ವಾದದೊಂದಿಗೆ ಮಠದ ಜೀರ್ಣೋದ್ಧಾರ ಮಾಡಿದ್ದಾರೆ. ಶ್ರೀಮಠದೊಂದಿಗೆ ನಾವೆಲ್ಲರೂ ಸದಾ ಇರುತ್ತೇವೆ ಎಂದು ಭರವಸೆ ನೀಡಿದರು.ಗುರುಶಾಂತ ನಿಡೋಣಿ ಮಾತನಾಡಿ, ಲಿಂ.ಡಾ.ಮಹಾಂತ ಶಿವಾಚಾರ್ಯರು ಯಾರಿಗೆ ಕಷ್ಟ ಇದೆ ಎಂದು ಇಲ್ಲಿಗೆ ಬರುತ್ತಾರೋ ಅವರಿಗೆ ಮುಂದಿನ ದಿನಗಳಲ್ಲಿ ಸುಖ ಸಿಗುತ್ತದೆ ಎಂದು ಹೇಳಿದ್ದನ್ನು ಸ್ಮರಿಸಿದರು.ಕಾರ್ಯಕ್ರಮದಲ್ಲಿ ಚಂದ್ರಶೇಖರ ಪಾರಗೊಂಡ, ಶ್ರೀಕಾಂತ ಸಾರವಾಡ, ನಾರಾಯಣ ಘೋರ್ಪಡೆ, ಗೋಲ್ಲಾಳಪ್ಪಗೌಡ ಗುಜಗೊಂಡ, ಬಾಬುಗೌಡ ಯಾದವಾಡ, ಜ್ಯೋತಿಬಾ ನಾಮನಿ, ಸಂಭಾಜಿ ನಲವಡೆ, ಬಾಬು ಅರಳಪ್ಪನವರ, ಶಿವಾಜಿ ಬೋಂಸ್ಲೆ, ಬಸು ಸಣ್ಣಕಲ್ಲ, ದಾನಪ್ಪ ಮನಗೂಳಿ, ಮುದುಕು ಬನಹಟ್ಟಿ, ಶಿವಾಜಿ ಘೋರ್ಪಡೆ ಇತರರು ಇದ್ದರು. ರಾಜು ಪಾಟೀಲ ಸ್ವಾಗತಿಸಿ, ನಿರೂಪಿಸಿದರು. ಮಹಾಂತೇಶ ಮನಗೂಳಿ ವಂದಿಸಿದರು.ಈ ಸಂದರ್ಭದಲ್ಲಿ ಮನಗೂಳಿ ಪಿಕೆಪಿಎಸ್ ಬ್ಯಾಂಕ್ ಆಯ್ಕೆಯಾದ ನೂತನ ನಿರ್ದೇಶಕರನ್ನು ಮಠದಿಂದ ಸನ್ಮಾನಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.