ಸಂಕ್ರಾಂತಿ ಪ್ರಯುಕ್ತ ಕೊಣ್ಣೂರಿನಲ್ಲಿ ಗಂಗಾಮಾತೆಗೆ ಪೂಜೆ

KannadaprabhaNewsNetwork |  
Published : Jan 15, 2026, 02:30 AM IST
ಕೊಣ್ಣೂರು ಗ್ರಾಮದ ಮಲಪ್ರಭಾ ನದಿಯಲ್ಲಿ ಗಂಗಾಮಾತೆ ಪೂಜೆ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಸಂಕ್ರಾಂತಿ ದೇಹದ ಆರೋಗ್ಯವನ್ನು ಸದಾ ಕಾಪಾಡಿಕೊಳ್ಳುವ ಹಬ್ಬ. ವೈಜ್ಞಾನಿಕ ಹಬ್ಬ. ಕತ್ತಲನ್ನು ಮರೆಮಾಚುವ ಬೆಳಕಿನ ಹಬ್ಬ. ಸೂರ್ಯನ ಚಲನೆಯ ಹಬ್ಬ.

ನರಗುಂದ: ದಿನಕರ ತನ್ನ ಪಥವನ್ನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಬದಲಿಸುವ ಸುಸಂದರ್ಭವೇ ಸಂಕ್ರಾಂತಿ. ಇದು ಪ್ರಪಂಚದ ಹಬ್ಬ. ಸಾಂಸ್ಕೃತಿಕ ಹಬ್ಬ. ಮಕರ ಜ್ಯೋತಿಯ ದರ್ಶನದ ಹಬ್ಬವಾಗಿದೆ ಎಂದು ಕೊಣ್ಣೂರು ಗ್ರಾಮದ ವಿರಕ್ತಮಠದ ಡಾ. ಚನ್ನವೀರ ಶಿವಾಚಾರ್ಯ ಶ್ರೀಗಳು ತಿಳಿಸಿದರು.ಬುಧವಾರ ತಾಲೂಕಿನ ಕೊಣ್ಣೂರ ಗ್ರಾಮದ ಮಲಪ್ರಭಾ ನದಿಯಲ್ಲಿ ಸಂಕ್ರಮಣ ಹಬ್ಬದ ನಿಮಿತ್ತ ಗ್ರಾಮದ ಗಂಗಾಮತಸ್ಥರ ಗಂಗಾಮಾತೆಗೆ ಪೂಜೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಹದ ಆರೋಗ್ಯವನ್ನು ಸದಾ ಕಾಪಾಡಿಕೊಳ್ಳುವ ಹಬ್ಬ. ವೈಜ್ಞಾನಿಕ ಹಬ್ಬ. ಕತ್ತಲನ್ನು ಮರೆಮಾಚುವ ಬೆಳಕಿನ ಹಬ್ಬ. ಸೂರ್ಯನ ಚಲನೆಯ ಹಬ್ಬ. ಹಗಲು- ರಾತ್ರಿಗಳ ಸಮಯದಲ್ಲಿ ಸಾಕಷ್ಟು ಬದಲಾವಣೆ ತರುವ ಹಬ್ಬ. ಎಳ್ಳು ಮತ್ತು ಬೆಲ್ಲ ದೇಹಕ್ಕೆ ಮನಸ್ಸಿಗೆ ಹಾಗೂ ಸಂಬಂಧಕ್ಕೆ ಸಂಬಂಧ ಕಲ್ಪಿಸುವ ಮಧುರ ಹಬ್ಬ ಎಂದರು.

ಸಿಹಿ- ಕಹಿ ಬಾಳಿನಲ್ಲಿ ಬರುವ ಎರಡು ಸವಿಗನಸುಗಳು. ಬಯಸಿದಾಗ ಕಾಣುವ ಎರಡು ಮುಖಗಳು, ಅವೆರಡನ್ನು ಸಮ ಸಮನಾಗಿ ಸ್ವೀಕರಿಸಿದಾಗಲೇ ಈ ಬಾಳು ನಂದಗೋಕುಲ. ಈ ಮಹತ್ತರ ದಿನಕ್ಕಾಗಿ ತ್ಯಾಗ ಮತ್ತು ಪ್ರತಿಜ್ಞೆಗೆ ಹೆಸರಾದ ಮಹಾಭಾರತದ ಭೀಷ್ಮನು ಸಹ ತನ್ನ ಸಾವನ್ನು 58 ರಾತ್ರಿಗಳವರೆಗೆ ಅರ್ಜುನನ ಬಿಟ್ಟ ಬಾಣಗಳ ಶರಶೈಯದ ನೋವಿನಲ್ಲಿ ನರಳಿ ನರಳಿ ಸಂಕ್ರಾಂತಿಯ ದಿನದಂದು ಪ್ರಾಣ ಬಿಟ್ಟನು ಎಂಬ ಪ್ರತೀತಿಯಿದೆ ಎಂದರು.

ತಾಲೂಕು ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಉಮೇಶ ಮರ್ಚಪ್ಪನವರ ಮಾತನಾಡಿ, ಎಳ್ಳು ಬೆಲ್ಲ ಸವಿಯುವ ನಂಟು, ಜೀವನದ ಸಿಹಿ ಕಹಿಗಳ ಗಂಟು. ಅವುಗಳಲ್ಲಿ ಸ್ನೇಹ, ಪ್ರೀತಿ, ಪ್ರೇಮ, ಬಾಂಧವ್ಯಗಳ ಸಂಬಂಧ ಉಂಟು. ಎಲ್ಲ ಋತುಗಳಿಗೆ ಸಮಯ ಸಂದರ್ಭಗಳಿಗೆ ನಮ್ಮ ದೇಹ ಅಥವಾ ಶರೀರ ಹೊಂದಿಕೊಳ್ಳುತ್ತದೆ. ಆದರೆ ನಮ್ಮ ಮನಸ್ಸನ್ನು ಹೊಂದಿಸಿಕೊಳ್ಳಬೇಕಾಗಿದೆ. ಅದಕ್ಕೆ ತಾಳ್ಮೆ , ಸಹನೆ, ಅರ್ಪಣೆ ಮನೋಭಾವನೆ ಹಾಗೂ ಹೊಂದಿಕೊಳ್ಳುವಿಕೆಯ ಗುಣ ಬೇಕು ಎಂದರು.

ಬಸಯ್ಯ ಹಿರೇಮಠ, ಚನ್ನಪ್ಪ ಶಿರಹಟ್ಟಿ, ಈರಣ್ಣ ಶಿರಸಂಗಿ, ಆನಂದ ನರಗುಂದ, ಬಸಯ್ಯ ಚಿಕ್ಕಮಠ, ಮಲ್ಲಯ್ಯ ಪುರತರಮಠ, ರೇಹಮಸಾಬ ಅಲ್ಲಿಬಾಯಿ, ಗಂಗವ್ವ ಶಿರಹಟ್ಟಿ, ಮಲ್ಲವ್ವ ಮರ್ಚಪ್ಪನವರ, ಮಂಜವ್ವ ಅಂಬಗೇರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ-ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯ