ರಸ್ತೆಗಳಲ್ಲಿನ ಗುಂಡಿಗಳಿಗೆ ಪೂಜೆ ಮಾಡಿ ಆಕ್ರೋಶ

KannadaprabhaNewsNetwork |  
Published : Nov 10, 2024, 01:42 AM IST
ಚಿಕ್ಕಮಗಳೂರು ನಗರದ ವಿಜಯಪುರ ಮುಖ್ಯ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಪಲಾವ್, ವಡೆ, ನಿಂಬೆಹಣ್ಣು, ಹೂವು, ಬ್ಯಾರಿಕೇಡ್ ಇಟ್ಟು ಪೂಜೆ ಸಲ್ಲಿಸಿರುವುದು. | Kannada Prabha

ಸಾರಾಂಶ

ಚಿಕ್ಕಮಗಳೂರು, ಮಳೆ ನಿಂತು ಎಷ್ಟೋ ದಿನಗಳು ಕಳೆದರೂ ಚಿಕ್ಕಮಗಳೂರು ನಗರದ ಗುಂಡಿಮಯ ರಸ್ತೆಗಳಿಗೆ ಇನ್ನೂ ಮುಚ್ಚುವ ಭಾಗ್ಯ ದೊರೆತಿಲ್ಲ. ನಿತ್ಯ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಿದ್ದರೂ ನಗರಸಭೆ ಮಾತ್ರ ಎಚ್ಚೆತ್ತುಕೊಂಡಿಲ್ಲ. ರೋಸಿ ಹೋದ ಸಾರ್ವಜನಿಕರು ರಸ್ತೆಯಲ್ಲಿನ ಗುಂಡಿಗೆ ಪೂಜೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಅಪಘಾತ ಸಂಭವಿಸುತ್ತಿದ್ದರೂ ನಗರಸಭೆ ಎಚ್ಚೆತ್ತುಕೊಂಡಿಲ್ಲ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮಳೆ ನಿಂತು ಎಷ್ಟೋ ದಿನಗಳು ಕಳೆದರೂ ಚಿಕ್ಕಮಗಳೂರು ನಗರದ ಗುಂಡಿಮಯ ರಸ್ತೆಗಳಿಗೆ ಇನ್ನೂ ಮುಚ್ಚುವ ಭಾಗ್ಯ ದೊರೆತಿಲ್ಲ. ನಿತ್ಯ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಿದ್ದರೂ ನಗರಸಭೆ ಮಾತ್ರ ಎಚ್ಚೆತ್ತುಕೊಂಡಿಲ್ಲ. ರೋಸಿ ಹೋದ ಸಾರ್ವಜನಿಕರು ರಸ್ತೆಯಲ್ಲಿನ ಗುಂಡಿಗೆ ಪೂಜೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ವಿಪರೀತ ಮಳೆಯಿಂದ ಚಿಕ್ಕಮಗಳೂರು ನಗರದ ಹಲವೆಡೆ ಗುಂಡಿ ಬಿದ್ದು ರಸ್ತೆಗಳು ಹಾಳಾಗಿದ್ದು, ಇದೀಗ ವಾಹನ ಸವಾರರ ತಾಳ್ಮೆ ಕಟ್ಟೆ ಹೊಡೆದಿದ್ದು 3 ದಿನದಲ್ಲಿ ಗುಂಡಿ ಮುಚ್ಚದಿದ್ರೆ ಹಾಲು ತುಪ್ಪ ಬಿಡುವ ಎಚ್ಚರಿಕೆಯನ್ನು ನಗರಸಭೆಗೆ ಕೊಟ್ಟಿದ್ದಾರೆ.

ಚಿಕ್ಕಮಗಳೂರು ನಗರದ ವಿಜಯಪುರ ಮುಖ್ಯ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಪಲಾವ್, ವಡೆ, ನಿಂಬೆಹಣ್ಣು, ಹೂವು, ಬ್ಯಾರಿಕೇಡ್ ಇಟ್ಟು ಪೂಜೆ ಸಲ್ಲಿಸಿ ಪ್ರತಿಭಟನಾರ್ಥಕವಾಗಿ ಸ್ಥಳದಲ್ಲಿ ಘೋಷಣೆ ಕೂಗಿದ್ದಾರೆ. ನಗರಸಭೆ ಯುಜಿಡಿ ಕೆಲಸ ಕ್ಕೆಂದು ಈ ಮೊದಲು ಕಾಮಗಾರಿಗೆ ಗುಂಡಿ ತೆಗೆಯಲಾಗಿತ್ತು. ನಂತರ ಆ ಗುಂಡಿ ಮುಚ್ಚಿದ್ದರೂ ಮತ್ತೆ ಗುಂಡಿಯಾಗಿದ್ದ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಹಲವಾರು ಬೈಕ್ ಗಳು ಅಪಘಾತವಾಗಿ ನೂರಾರು ಜನರಿಗೆ ಗಾಯಗಳಾಗಿವೆ.‌ ಪೂಜೆ ಸಲ್ಲಿಸುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. 9 ಕೆಸಿಕೆಎಂ 5ಚಿಕ್ಕಮಗಳೂರು ನಗರದ ವಿಜಯಪುರ ಮುಖ್ಯ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಪಲಾವ್, ವಡೆ, ನಿಂಬೆಹಣ್ಣು, ಹೂವು, ಬ್ಯಾರಿಕೇಡ್ ಇಟ್ಟು ಪೂಜೆ ಸಲ್ಲಿಸಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌