ಗುರುವಂದನೆ ಸಲ್ಲಿಸುವುದು ದೇಶದ ಗುರು ಪರಂಪರೆ

KannadaprabhaNewsNetwork |  
Published : Nov 21, 2024, 01:00 AM IST
ಗುರು ವಂದನೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಆಲಮೇಲ: ಆಚಾರ ವಿಚಾರಗಳನ್ನು ಕಲಿಸಿದ ಗುರುಗಳ ಸ್ಮರಣೆ ಮಾಡಿ ಗುರು ವಂದನೆ ಸಲ್ಲಿಸುವುದು ಭಾರತೀಯ ಗುರು ಪರಂಪರೆಯನ್ನು ಎತ್ತಿ ತೋರಿಸುತ್ತದೆ ಎಂದು ವಿರಕ್ತಮಠದ ಶ್ರೀಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಆಲಮೇಲ:

ಆಚಾರ ವಿಚಾರಗಳನ್ನು ಕಲಿಸಿದ ಗುರುಗಳ ಸ್ಮರಣೆ ಮಾಡಿ ಗುರು ವಂದನೆ ಸಲ್ಲಿಸುವುದು ಭಾರತೀಯ ಗುರು ಪರಂಪರೆಯನ್ನು ಎತ್ತಿ ತೋರಿಸುತ್ತದೆ ಎಂದು ವಿರಕ್ತಮಠದ ಶ್ರೀಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.ಪಟ್ಟಣದ ಶ್ರೀ ವಿಶ್ವೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶ್ರೀ ವಿಶ್ವೇಶ್ವರ ಬಾಲಭಾರತಿ ಪ್ರಾಥಮಿಕ ಶಾಲೆಯ-2011-12 ನೇ ಸಾಲಿನ ಹಳೆಯ ವಿದ್ಯಾರ್ಥಿಗಳ ಗುರು ವಂದನ ಹಾಗೂ ಸ್ನೇಹ ಸಮ್ಮಿಲನ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಿಕ್ಷಕಿ ಶ್ಯಾಮಲಾ ಶೇಠ್‌ ಮಾತನಾಡಿ, 34 ವರ್ಷಗಳ ನಿಸ್ವಾರ್ಥದಿಂದ ಸಾವಿರಾರು ಮಕ್ಕಳಿಗೆ ಪಾಠ ಹೇಳಿಕೊಟ್ಟಿದ್ದು ಈಗ ಸಾರ್ಥಕವಾಯಿತು. ಕಾರಣ 90ರ ದಶಕದಲ್ಲಿ ಗಿಡಗಳ ಕೆಳಗೆ ಪುಟ್ಟ ಕಂದಮ್ಮಗಳಿಗೆ ಅ.ಆ.ಇ.ಈ ಕಲಿಸಿಕೊಟ್ಟಿದ್ದೇವು. ಆ ವಿದ್ಯಾರ್ಥಿಗಳು ಈ ರೀತಿ ಗೌರವ ಸಮರ್ಪಣೆ ಮಾಡುತ್ತಾರೆ ಎಂದು ಊಹಿಸಿರಲಿಲ್ಲ, ನಾವೇ ಧನ್ಯರು ಎಂದರು.

ಈ ವೇಳೆ ರೇಖಾ ನಿರೋಣಿ, ನಿವೃತ್ತ ಶಿಕ್ಷಕ ಈರಣ್ಣ ಕಲಶೆಟ್ಟಿ, ಮುಖ್ಯ ಶಿಕ್ಷಕ ಲಕ್ಷ್ಮೀಪುತ್ರ ಕಿರನಳ್ಳಿ, ಶಿಕ್ಷಕಿಯರಾದ ಲಕ್ಷ್ಮೀಬಾಯಿ ಹಳೇಮನಿ, ಸುನಿತಾ ಗುಂಡದಮಠ, ಸರುಬಾಯಿ ಬಂಡಗರ, ಸುವರ್ಣ ಸಾರಂಗಮಠ, ಚಂದ್ರಕಾಂತ ದೇವರಮನಿ, ಸೀತಾ ಆರೇಶಂಕರ, ವೀಣಾ ಗುಡಿಮಠ, ಸಾವಿತ್ರಿ ಗುಂದಗಿ, ಚಂದ್ರಕಲಾ ಹೊಸಮನಿ, ಸಾವಿತ್ರಿ ನಿಂಬಾಳ, ಸರಸ್ವತಿ ಕುಂಬಾರ, ಗಂಗಮ್ಮ ಕಲ್ಲೂರಮಠ, ಸುಮಿತ್ರಾ ಕುಂಬಾರ ಅವರನ್ನು ಸನ್ಮಾನಿಸಲಾಯಿತು.ಈ ವೇಳೆ ಹಳೆಯ ವಿದ್ಯಾರ್ಥಿಗಳಾದ ಯಲ್ಲಪ್ಪ ಬಿರಾದಾರ, ಶಿವಪ್ಪ ಪೂಜಾರಿ, ಸಾಗರ ಗುಂಡದಮಠ, ರುದ್ರೇಶ ಕಲ್ಲೂರಮಠ, ವೀರಭದ್ರ ಭಾವಿಮನಿ, ಆದರ್ಶ ಅಕ್ಕಲಕೋಟ, ಶರಣು ಬೆಳ್ಳಿ, ಅಂಬರೀಶ್ ಪ್ಯಾಟಿ, ಚಿನ್ನಪ್ಪ ಪೂಜಾರಿ, ಮಲ್ಲಿನಾಥ ಪರೀಟ, ಸಚಿನ ರಾಯಚೂರ, ಮಂಜುನಾಥ ವಾಲಿಕಾರ, ಸುನಿಲ ನಾಯಕ, ಸಂತೋಷ ಕುಂಬಾರ, ಭೀಮು ಇಟಗಿ, ಸಿದ್ದು ಅಮರಗೊಂಡ, ಅಭಿಷೇಕ ನಾಟೀಕಾರ, ಶರಣು ಅಳ್ಳೊಳ್ಳಿಮಠ, ನಾಗರಾಜ ರಾಂಪೂರಮಠ, ಮಹಾದೇವ ರೋಡಗಿ, ಆಕಾಶ ನಾವಿ, ಶಿವು ನಾಯ್ಕೋಡಿ, ಶರಣು ಕುಂಬಾರ, ಪೂಜಾ ಹೊಟ್ಕರ, ಸವಿತಾ ಕಟಕದೊಂಡ, ದಾನಮ್ಮ ಭಂಟನೂರ, ಭಾಗ್ಯಶ್ರೀ ಪಾಟೀಲ, ಸಾವಿತ್ರಿ ಕೊಟ್ಟಲಗಿ, ಮೇನಕಾ ನಾರಾಯಣಕರ್, ರೇಖಾ ರಾಂಪೂರಮಠ, ಭಾಗ್ಯಶ್ರೀ ರಾಂಪೂರಮಠ, ಅನು ಮಠಪತಿ, ಐಶ್ವರ್ಯ ಕೋಳಾರಿ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ