ಕೆಆರ್‌ಎಸ್‌ನಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ, ಭಾವಚಿತ್ರಕ್ಕೆ ಪೂಜೆ ಸಲ್ಲಿಕೆ

KannadaprabhaNewsNetwork |  
Published : Sep 16, 2025, 12:03 AM IST
15ಕೆಎಂಎನ್ ಡಿ24 | Kannada Prabha

ಸಾರಾಂಶ

ಕೆಆರ್‌ಎಸ್‌ನಲ್ಲಿ ಅಣೆಕಟ್ಟೆಗೆ ನಿರ್ಮಿಸಿರುವ ಅವರ ಅಟೋಮ್ಯಾಟಿಕ್ ಗೇಟುಗಳ ತಂತ್ರಜ್ಞಾನ ಇಂದಿಗೂ ಹೆಸರುವಾಸಿ. ದೇಶದಲ್ಲಿನ ವಿವಿಧ ಅಣೆಕಟ್ಟೆಗಳಲ್ಲಿ ಪ್ರವಾಹದ ಸಂದರ್ಭಲ್ಲಿ ಅಟೋಮ್ಯಾಟಿಕ್ ತಂತ್ರಜ್ಞಾನ ಬಳಸಿ ಗೇಟುಗಳ ನಿರ್ವಹಣೆ ಮಾಡುವುದನ್ನು ವಿನ್ಯಾಸ ಮಾಡಿದ್ದರು. ಅವರು ಬಳಸಿದ ತಂತ್ರಜ್ಞಾನಗಳು ನಮ್ಮೆಲ್ಲ ಎಂಜಿನಿಯರ್‌ಗಳ ಮಾದರಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಎಂಜಿನಿಯರ್ಸ್ ಡೇ ಅಂಗವಾಗಿ ಕೆಆರ್‌ಎಸ್ ಬೃಂದಾವನದ ಮುಖ್ಯ ದ್ವಾರದ ಸರ್ ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆ ಹಾಗೂ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಕಾವೇರಿ ನೀರಾವರಿ ನಿಗಮದಿಂದ ಕೆಆರ್‌ಎಸ್‌ನ ಕಾರ್ಯಪಾಲಕ ಎಂಜಿನಿಯರ್ ಜಯಂತ್ ನೇತೃತ್ವದಲ್ಲಿ ಸಿಬ್ಬಂದಿ ವರ್ಗ ಸೇರಿ ಪುಷ್ಪಾರ್ಚನೆ ಮಾಡಿದರು. ಈ ವೇಳೆ ಜಯಂತ್ ಮಾತನಾಡಿ, ಸರ್.ಎಂ.ವಿ ದೂರ ದೃಷ್ಟಿಯುಳ್ಳ ನಾಯಕರು. ಅವರಲ್ಲಿದ್ದ ಜ್ಞಾನದಿಂದ ದೇಶದ ವಿವಿಧೆಡೆ ಅನೇಕ ಅಣೆಕಟ್ಟೆ ನಿರ್ಮಾಣವಾಗಿವೆ. ಇವರ ತಂತ್ರಜ್ಞಾನ ಮೆಚ್ಚಿ ವಿದೇಶದಲ್ಲಿ ಕೂಡ ಅಣೆಕಟ್ಟೆ ವಿನ್ಯಾಸ ಮಾಡಲು ಕರೆದು ಅಲ್ಲಿಯೂ ಕೂಡ ಸರ್‌ಎಂವಿ ಪ್ರಸಿದ್ದರಾದರು ಎಂದರು.

ಕೆಆರ್‌ಎಸ್‌ನಲ್ಲಿ ಅಣೆಕಟ್ಟೆಗೆ ನಿರ್ಮಿಸಿರುವ ಅವರ ಅಟೋಮ್ಯಾಟಿಕ್ ಗೇಟುಗಳ ತಂತ್ರಜ್ಞಾನ ಇಂದಿಗೂ ಹೆಸರುವಾಸಿ. ದೇಶದಲ್ಲಿನ ವಿವಿಧ ಅಣೆಕಟ್ಟೆಗಳಲ್ಲಿ ಪ್ರವಾಹದ ಸಂದರ್ಭಲ್ಲಿ ಅಟೋಮ್ಯಾಟಿಕ್ ತಂತ್ರಜ್ಞಾನ ಬಳಸಿ ಗೇಟುಗಳ ನಿರ್ವಹಣೆ ಮಾಡುವುದನ್ನು ವಿನ್ಯಾಸ ಮಾಡಿದ್ದರು. ಅವರು ಬಳಸಿದ ತಂತ್ರಜ್ಞಾನಗಳು ನಮ್ಮೆಲ್ಲ ಎಂಜಿನಿಯರ್‌ಗಳ ಮಾದರಿಯಾಗಿದ್ದಾರೆ ಎಂದರು.

ಕೆಆರ್‌ಎಸ್ ಅಣೆಕಟ್ಟೆ ನಿರ್ವಹಣೆ ವಿಭಾಗದ ಸಹಾಯಕ ಕಾರ್ಯಪಾಲಕ ಫಾರೂಕ್ ಅಬು, ಗೇಜಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಕಿಶೋರ್ ಕುಮಾರ್, ತಾಂತ್ರಿಕ ಸಹಾಯಕರಾದ ರಶ್ಮಿ ಸರ್.ಎಂ.ವಿಶ್ವೇಶ್ವರಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಇದೇ ವೇಳೆ ಸಹಾಯಕ ಎಂಜಿನಿಯರ್ ಹಾಗೂ ಕಿರಿಯ ಎಂಜಿನಿಯರ್‌ಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಈ ಬಾರಿಯಿಂದ ನಿಗಮದ ಕೆಆರ್‌ಎಸ್ ಅಣೆಕಟ್ಟೆ ವಿಭಾಗದಲ್ಲಿ ಈ ಸಾಲಿನಿಂದ ಸ್ಥಾಪಿಸಿರುವ ಉತ್ತಮ ಎಂಜಿನಿಯರ್ ಪ್ರಶಸ್ತಿಯನ್ನು ಕೆಆರ್‌ಎಸ್ ಅಣೆಕಟ್ಟೆ ನಿರ್ವಹಣೆ ವಿಭಾಗದ ಅಭಿಯಂತರ ಅಭಿಲಾಷ್‌ಗೆ ನೀಡಿ ಗೌರವಿಸಲಾಯಿತು.

ಈ ವೇಳೆ ಕೆಆರ್‌ಎಸ್ ಕಾ.ನೀ.ನಿಗಮದ ಸಹಾಯಕ ಎಂಜಿನಿಯರ್‌ಗಳಾದ ಲೋಹಿತ್, ಸುರೇಶ್ ಬಾಬು, ವೇಣುಗೊಪಾಲ, ಕುಮಾರಸ್ವಾಮಿ, ಅಭಿಲಾಷ್, ಪುನೀತ್ ಶಿವಕುಮಾರ್, ಸಹನಾ ವ್ಯವಸ್ಥಾಪಕ ಶ್ರೀನಿವಾಸ್ ಕೆಆರ್‌ಎಸ್ ಸರ್ಕಾರಿ ನೌಕರರ ಸಂಘದ ನಿರ್ದೇಶಕರುಗಳಾದ ನಾಗೇಶ್, ಜಯಪ್ರಕಾಶ್ ಕಾವೇರಿ ನೀರಾವರಿ ನಿಗಮದ ಎಂಜಿನಿಯರ್ ಸಿಬ್ಬಂದಿ ಸೇರಿದಂತೆ ಇತರರು ಇದ್ದರು.

ಸೆ.20 ರಂದು ವಿಶ್ವಗುರು ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ: ಎಂ.ಜೆ.ರಂಗಸ್ವಾಮಿ

ಮಳವಳ್ಳಿ:

ವಿಶ್ವಗುರು ಕೋ ಅಪರೇಟಿವ್ ಸೊಸೈಟಿಯಿಂದ ಸೆ.20 ರಂದು ಪಟ್ಟಣದ ಸಾರಂಗಪಾಣಿ ದೇವಸ್ಥಾನದ ರಸ್ತೆಯ ಗಾಯಿತ್ರಿ ಮಂದಿರದಲ್ಲಿ ಶ್ರೀವಿಶ್ವಗುರು ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಾಧಕರಿಗೆ ಸನ್ಮಾನ ಆಯೋಜಿಸಲಾಗಿದೆ ಎಂದು ಸೊಸೈಟಿ ಅಧ್ಯಕ್ಷ ಎಂ.ಜೆ.ರಂಗಸ್ವಾಮಿ ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿಚುಂಚನಗಿರಿ ಶಾಖಾ ಮಠದ ಸೌಮ್ಯನಾಥಸ್ವಾಮಿಜಿ ದಿವ್ಯ ಸಾನಿಧ್ಯದಲ್ಲಿ ಅಪರ ಪೊಲೀಸ್ ಮಹಾನಿರ್ದೇಶಕ ಎಂ.ನಂಜುಂಡಸ್ವಾಮಿ ಕಾರ್ಯಕ್ರಮ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ರಂಗಸ್ವಾಮಿ ವಹಿಸಲಿದ್ದಾರೆಂದು ಹೇಳಿದರು.

2024-25ನೇ ಸಾಲಿನ ಶ್ರೀವಿಶ್ವಗುರು ಪ್ರಶಸ್ತಿಯನ್ನು ಹಿರಿಯ ಪತ್ರಕರ್ತರಾದ ಶೋಭಾ ಮಳವಳ್ಳಿ ಹಾಗೂ ಅನಿಕೇತನಾ ಸೇವಾ ಟ್ರಸ್ಟ್ ಸಧ್ಯಕ್ಷ ಕೆ.ವಿ. ಮಲ್ಲೇಶ್ ಅವರಿಗೆ ನೀಡಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಹಲಗೂರು ವೃತ್ತ ನೀರಿಕ್ಷಕ ಬಿ.ಎಸ್.ಶ್ರೀಧರ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ಹಾಗೂ ಹುಣಸೂರು ಪದವಿಪೂರ್ವ ಕಾಲೇಜು ಉಪನ್ಯಾಸಕ ಎಚ್.ಎನ್ ಗಿರೀಶ್ ಹಾಗೂ ಹಿರಿಯ ಪತ್ರಕರ್ತ ಮಾದರಹಳ್ಳಿ ರಾಜುಗೆ ಸಾಧಕ ಸನ್ಮಾನ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ಡಿವೈಎಸ್‌ಪಿ ವಿ.ಕೃಷ್ಣಪ್ಪ, ಮನ್ಮುಲ್ ಉಪಾಧ್ಯಕ್ಷ ಕೃಷ್ಣೇಗೌಡ, ಸೊಸೈಟಿ ಉಪಾಧ್ಯಕ್ಷ ಸಿದ್ದಲಿಂಗಸ್ವಾಮಿ ಸೇರಿದಂತೆ ಇತರರು ಭಾಗವಹಿಸುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಸೊಸೈಟಿ ಮಾಜಿ ಅಧ್ಯಕ್ಷ ಕೃಷ್ಣಶೆಟ್ಟಿ, ಉಪಾಧ್ಯಕ್ಷ ಸಿದ್ದಲಿಂಗಸ್ವಾಮಿ, ನಿರ್ದೇಶಕರಾದ ಕೆ.ಎಸ್ ಗುರುಪ್ರಸಾದ್, ಕೆವಿಟಿ ಕುಮಾರ್, ಸೇರಿದಂತೆ ಇತರರು ಇದ್ದರು.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ