ಗಂಗಾವತಿ: ದೇವಿ ಆರಾಧನೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ ಆಚರಣೆ ಮಾಡುತ್ತ ಬಂದರೆ ಮಳೆ ಬೆಳೆ ಸಮೃದ್ಧಿಯಾಗಿರುತ್ತದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಮಹಾಲಕ್ಷ್ಮೀದೇವಿ ಈ ಪ್ರದೇಶದ ಆರಾಧ್ಯ ದೇವತೆಯಾಗಿದ್ದು. ಇಲ್ಲಿಯ ಗೌಳಿ ಸಮಾಜದವರು ಕಳೆದ 20 ವರ್ಷಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಜಾತ್ರೆ, ಪುರಾಣ, ಭಜನೆ ಹಾಗೂ ದೇಗುಲದ ವಾರ್ಷಿಕೋತ್ಸವ ಆಚರಿಸುತ್ತಾ ಬಂದಿದ್ದು. ಮಹಾಲಕ್ಷ್ಮೀಯು ಎಲ್ಲರಿಗೂ ಆಶೀರ್ವಾದಸಲಿ ಎಂದು ಪ್ರಾರ್ಥಿಸಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಹೆಬ್ಬಾಳದ ನಾಗಭೂಷಣ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿ, ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿ, ಸಂಗಮೇಶ್ವರ ಸ್ವಾಮೀಜಿ, ಅಪ್ಪಾಜಿಸ್ವಾಮೀಜಿ, ವೆಂಕಟೇಶ್ ಅಮರ್ ಜ್ಯೋತಿ, ನವೀನ್ ಮಾಲೀಪಾಟೀಲ್, ರಮೇಶ್ ಗೌಳಿ, ಶೈಲಜಾ ಹಿರೇಮಠ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.