ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಚನ್ನಬಸಮ್ಮಾ ಚಂದಪ್ಪ ಪ್ರತಿಷ್ಠಾನ, ವಿಜಯಪುರ ಸಮಾನ ಮನಸ್ಕರ ವೇದಿಕೆಯಿಂದ ಕಂದಗಲ್ ಹಣಮಂತರಾಯ ರಂಗ ಮಂದಿರದಲ್ಲಿ ಆಯೋಜಿಸಿದ್ದ ಡಾ.ಸುಜಾತಾ ಚಲವಾದಿಯವರ ಲಚಮವ್ವ ಮತ್ತು ಇತರ ಕತೆಗಳು ಹಾಗೂ ಅಂಬೇಡ್ಕರ ಅರಿವಿನ ಜತೆಗಾರ ಗ್ರಂಥಗಳ ಜನಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಬಹುತ್ವದ ತತ್ವ ಮತ್ತು ಸಿದ್ಧಾಂತಗಳ ಅಡಿಯಲ್ಲಿ ಬೆಳೆದಿದೆ. ಡಾ.ಬಿ.ಆರ್.ಅಂಬೇಡ್ಕರ ಅವರು ಅನುಭವಿಸಿದ ನೋವು, ಹಸಿವು, ಬಡತನದ ಬೇಗೆಯಲ್ಲಿ ಬೆಂದು ವಿಶ್ವಜ್ಞಾನಿ ಎನಿಸಿಕೊಂಡರು. ಆದ್ದರಿಂದಲೇ ಅಮೆರಿಕದ ಕೋಲಂಬಿಯ ವಿಶ್ವವಿದ್ಯಾಲಯದಲ್ಲಿ ಅವರ ಆಳೆತ್ತರದ ತೈಲವರ್ಣದ ಪ್ರತಿಮೆ ನಿರ್ಮಿಸಲಾಗಿದೆ. ಬುದ್ಧ, ಬಸವ, ಡಾ.ಬಿ.ಆರ್.ಅಂಬೇಡ್ಕರ ಅವರ ತತ್ವ ಮತ್ತು ಸಿದ್ಧಾಂತಗಳನ್ನು ಹೆಚ್ಚು ಅರ್ಥ ಮಾಡಕೊಳ್ಳಬೇಕಿದೆ ಎಂದರು.ಹಿರಿಯ ಸಾಹಿತಿ ಮನು ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿ, ಚನ್ನಬಸಮ್ಮಾ ಚಂದಪ್ಪ ಪ್ರತಿಷ್ಠಾನ ಸಮಾನ ಮನಸ್ಕರ ವೇದಿಕೆ ಮೂಲಕ ಈ ನೆಲದ ಸಾಹಿತ್ಯ ಮತ್ತು ಸಂಸ್ಕೃತಿ ಸಾರವನ್ನು ಬಿಂಬಿಸುವಲ್ಲಿ ಡಾ.ಸುಜಾತಾ ಅವರು ಅತ್ಯುತ್ತಮ ಪುಸ್ತಕಗಳನ್ನು ಬರೆದಿದ್ದಾರೆ. ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು ಹತ್ತಾರು ಸಾಹಿತ್ಯ ಕೃತಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಮಾತನಾಡಿ, ವಿಶ್ವದಾದ್ಯಂತ ಡಾ.ಬಿ.ಆರ್.ಅಂಬೇಡ್ಕರ ಅವರ ಬರೆದಿರುವ ಪುಸ್ತಕ ಮತ್ತು ವಿಷಯಗಳ ಬಗ್ಗೆ ಹೆಚ್ಚು ಚರ್ಚೆಗಳು ನಡೆಯುತ್ತಿವೆ. ಅವರ ವೈಜ್ಞಾನಿಕ ನೆಲೆಯ ಚಿಂತನೆಗಳು ಕುರಿತು ಡಾ.ಸುಜಾತ ಚಲವಾದಿ ಅವರಿಂದ ಉತ್ತಮ ಕೃತಿಗಳು ಬರಲೆಂದು ಆಶಿಸಿದರು.ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ ಅವರು ಆಧುನಿಕ ಭಾರತದ ಭವಿಷ್ಯವನ್ನು ಬರೆದಿದ್ದಾರೆ. ಶ್ರೇಷ್ಠ ಸಂವಿಧಾನ ರಚಿಸಿ ನೊಂದ ಸಮುದಾಯಗಳಿಗೆ ಶಾಶ್ವತ ನೆಲೆ ಒದಗಿಸಿದ್ದಾರೆ ಎಂದು ಸ್ಮರಿಸಿದರು.
ಗುಲಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಮಾತನಾಡಿ, ಡಾ.ಸುಜಾತ ಅವರ ಕಥೆಗಳಲ್ಲಿ ನಿಜವಾದ ತಾಯ್ತನದವಿದೆ. ಮಾತೃ ಸ್ವರೂಪದ ಅಂತಃಕರಣದ ಕಥೆಗಳಿವೆ. ಬದುಕಿನ ಬದಲಾವಣೆಗೆ ಅಕ್ಷರ ಮತ್ತು ಬರವಣಿಗೆ ಬೇಕು. ಜನಪರ ಮತ್ತು ದಲಿತ ಪರ ಧ್ವನಿಗಳಿಗೆ ಬೆಂಬಲವಿಲ್ಲದೆ ಸಾಹಿತಿಗಳಿಗೆ ಭಯದ ವಾತಾವರಣ ನಿರ್ಮಾಣವಾಗಿದೆ ಇದು ಹೆಚ್ಚು ಆತಂಕಕಾರಿ ಎಂದರು.
ದಾಕ್ಷಾಯಿಣಿ ಬಿರಾದಾರ ಸ್ವಾಗತಿಸಿ, ಪರಿಚಯಿಸಿದರು. ಮೋಹನ ಕಟ್ಟಿಮನಿ ನಿರೂಪಿಸಿದರು.
ಕೋಟ್