ಕನ್ನಡಪ್ರಭ ವಾರ್ತೆ ಮೈಸೂರು
ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ಆಯ್ಕೆ ಪ್ರಶ್ನಿಸಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿರುವ ಕುರಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ, ಡಿಸಿಎಂ ಇಬ್ಬರಿಗೆ ಕೈ ಮುಗಿದು ಕೇಳ್ತಿನಿ, ಬಾನು ಮುಷ್ತಾಕ್ ಭಾಷಣ ಒಪ್ಪುತ್ತೀರಾ ಹೇಳಿ? ಒಪ್ಪುವುದಾದರೆ ಧೈರ್ಯವಾಗಿ ಹೇಳಲಿ ಎಂದರು.
ಕೇಸ್ ಮ್ಯಾನೇಜ್ ಮಾಡುವುದರಲ್ಲಿ ಸಿಎಂ ಬಹಳ ಚಾಣಾಕ್ಷರು. ಮೂಡಾ ಕೇಸ್ ನಲ್ಲೇ ಅದನ್ನು ನಾವು ನೋಡಿದ್ದೇವೆ. ನಮಗೆ ಕೇಸ್ ಬಗ್ಗೆ ಹೇಳಿ ಕೊಡುವುದಕ್ಕೆ ಬರಬೇಡಿ ಎಂದು ಅವರು ಹೇಳಿದರು.ಬಾನು ಮುಷ್ತಾಕ್ ಸಾಧನೆ ಬಗ್ಗೆ ನನಗೆ ಗೌರವವಿದೆ. ಶೇ.100 ದಸರಾ ಧಾರ್ಮಿಕ ಆಚರಣೆ. ನಮ್ಮ ಧಾರ್ಮಿಕ ಆಚರಣೆ ಬಗ್ಗೆ ಅವರಿಗೆ ಅಸಮಾಧಾನಗಳಿವೆ. ಮುಸ್ಲಿಂ ಎನ್ನುವ ಕಾರಣಕ್ಕೆ ನನ್ನ ವಿರೋಧವಿಲ್ಲ. ಕನ್ನಡಾಂಬೆ ಬಗ್ಗೆ ಬಾನು ಮುಷ್ತಾಕ್ ಹೇಳಿರುವ ಹೇಳಿಕೆ ಬಗ್ಗೆ ನಮ್ಮ ತಕಾರರು ಇದೆ. ಹಿಂದೂ ಸಂಸ್ಕಾರಗಳ ಬಗ್ಗೆ ಬಾನು ಮುಷ್ತಾಕ್ ಗೆ ಒಪ್ಪಿಗೆ ಇಲ್ಲ ಎಂದು ಅವರು ತಿಳಿಸಿದರು.
ಮುಸ್ಲಿಂರು ಶಾಂತಿ ಪ್ರಿಯರು ಎಂದು ಸಿಎಂ ಮೊನ್ನೆ ಹೇಳಿದ್ದಾರೆ. ಮಂಡ್ಯದಲ್ಲಿ ಗಣೇಶ ಮೂರ್ತಿ ಮೇಲೆ ಕಲ್ಲು ಎಸೆದಿದ್ದು ಯಾರು ಸಿದ್ದರಾಮಯ್ಯ ಅವರೇ? ಹಿಂದೂಗಳಷ್ಟು ಜಾತ್ಯಾತೀತರು ಮತ್ತೊಬ್ಬರು ಇಲ್ಲ. ಸಿಎಂ ಹಿಂದೂಗಳಿಗೆ ಜಾತ್ಯಾತೀತ ಪಾಠ ಮಾಡಬೇಡಿ. ನಮ್ಮ ಸಂಸ್ಕೃತಿ ಬಗ್ಗೆ ಅಸಡ್ಡೆ ಮಾತಾಡುವ ಬಾನು ಮುಷ್ತಾಕ್ ಅವರು ನಮ್ಮ ಕಣ್ಣಿಗೆ ಘಜ್ನಿ, ಮೊಘಲರ ರೀತಿ ಕಾಣಿಸಿ ಕೊಳ್ಳುತ್ತಾರೆ. ಸಿಎಂ ಮುಸ್ಲಿಂರಿಗೆ ಉತ್ತೇಜನ ಕೊಡುತ್ತಿದ್ದಾರೆ. ಮುಸ್ಲಿಂರು ಶಾಂತಿ ಪ್ರಿಯರು ಎಂದ ಕ್ಷಣ ಮುಸ್ಲಿಂ ಇಲ್ಲಿ ಕಲ್ಲು ಎಸೆದಿದ್ದಾರೆ ಎಂದು ಅವರು ಕಿಡಿಕಾರಿದರು.
ಬಾಕ್ಸ್....
ಮಂಡ್ಯ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ಇದು ಕನ್ನಡಿಗರ ಸರ್ಕಾರ ಅಲ್ಲ. ಇದು ತಾಲಿಬಾನಿ ಸರ್ಕಾರ. ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಕೆಲ ಸಂಘಟನೆಯವರು ಎದ್ದು ಕುಳಿತುಕೊಳ್ಳುತ್ತಾರೆ. ಡಿಜೆ ಹಳ್ಳಿ- ಕೆಜೆ ಹಳ್ಳಿ ಕೇಸ್ ವಾಪಾಸ್ ಪಡೆದಿದ್ದಕ್ಕೆ ಮತ್ತೆ ಪುಂಡಾಟಿಕೆ ಶುರು ಮಾಡಿದ್ದಾರೆ ಎಂದರು.