ಲೇಖಕಿ ಸಂಕಮ್ಮ ಸಂಕಣ್ಣನವರಗೆ ಕರ್ನಾಟಕ ಸಂಭ್ರಮ-50 ಸುವರ್ಣ ಮಹೋತ್ಸವ ಪ್ರಶಸ್ತಿ

KannadaprabhaNewsNetwork |  
Published : Oct 31, 2024, 12:46 AM IST
ಮ | Kannada Prabha

ಸಾರಾಂಶ

ಅತ್ಯುತ್ತಮ ಲೇಖಕಿ ಸಂಕಮ್ಮ ಸಂಕಣ್ಣನವರ ಅವರಿಗೆ ಕರ್ನಾಟಕ ಸಂಭ್ರಮ-50 ಸುವರ್ಣ ಮಹೋತ್ಸವ ಪ್ರಶಸ್ತಿ-2024 ಪ್ರಶಸ್ತಿ ಲಭಿಸಿದೆ.

ಬ್ಯಾಡಗಿ: ಪಟ್ಟಣದ ಹೆಮ್ಮೆಯ ಹಿರಿಯ ಮಹಿಳಾ ಸಾಹಿತಿ ಕವಿಯತ್ರಿ ಅತ್ಯುತ್ತಮ ಲೇಖಕಿ ಸಂಕಮ್ಮ ಸಂಕಣ್ಣನವರ ಅವರಿಗೆ ಕರ್ನಾಟಕ ಸಂಭ್ರಮ-50 ಸುವರ್ಣ ಮಹೋತ್ಸವ ಪ್ರಶಸ್ತಿ-2024 ಪ್ರಶಸ್ತಿ ಲಭಿಸಿದ್ದು ಪಟ್ಟಣದ ಸಾಹಿತಿಗಳ ಬಗ್ಗೆ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಅವರ ಸಾಧನೆಯನ್ನು ಪರಿಗಣಿಸಿದ ರಾಜ್ಯ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಿದೆ, ಬಿ.ಎಸ್.ಸಿ. ಎಂ.ಎ. ವಿದ್ಯಾರ್ಹತೆ ಹೊಂದಿರುವ ಸಂಕಮ್ಮ 1957ರಲ್ಲಿ ಪುಟ್ಟಪ್ಪ ಹಾಗೂ ಪಾರ್ವತೆಮ್ಮ ಮೋಟೆಬೆನ್ನೂರ ದಂಪತಿಗೆ ಜನಿಸಿದ್ದು, ಸ್ಥಳೀಯ ಮೆಣಸಿನಕಾಯಿ ವರ್ತಕ ಗೋಣೇಶ ಸಂಕಣ್ಣನವರ ಅವರನ್ನು ವಿವಾಹವಾದರು. ಗೋಣೇಶಪ್ರಿಯ ಎಂಬ ಅಂಕಿತನಾಮದೊಂದಿಗೆ ನೂರಾರು ಕವನಗಳನ್ನು ರಚಿಸಿದ್ದಾರೆ. ಸಾಹಿತಿಯಾಗಿ, ಕವಿಯಾಗಿ ಚಲನಚಿತ್ರ ನಟಿಯಾಗಿ ಕೆಲಸ ನಿರ್ವಹಿಸಿರುವ ಸಂಕಮ್ಮ ದೂರದರ್ಶನದಲ್ಲಿ ಹತ್ತು ಹಲವು ಸಂದರ್ಶನ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಜೋಡಿಹಕ್ಕಿ (ಕವನ ಸಂಕಲನ), ಮುತ್ತಿನ ತೆನೆ (ಹನಿ ಗವನ), ವಚನ ವೃಷ್ಟಿ (ಆಧುನಿಕ ವಚನಗಳು), ಕನ್ನಡದ ಕಣ್ಮಣಿ ಡಾ. ಮಹದೇವ ಬಣಕಾರ (ಜೀವನ ಚರಿತ್ರೆ), ಹರಿದಾಡತಾವ ಭಾವ (ಕ.ಸಂ.), ಹೋರಾಟದ ಒಂದು ನೋಟ ಸಿದ್ದಮ್ಮ ಮೈಲಾರ (ಜೀವನ ಚರಿತ್ರೆ), ಮಾಸದ ಹೆಜ್ಜೆಗಳು (ಅಂಕಣ ಬರಹ), ನೆಲದ ನಕ್ಷತ್ರಗಳು (ಹಾವೇರಿ ಜಿಲ್ಲೆಯ ಸಾಧಕರು) ಜಿಲ್ಲೆಯ ಮಹಿಳಾ ರತ್ನಗಳು, ಜಿಲ್ಲೆಯ ಜಾನಪದ ಆಟಗಳು, ಸೂರ್ಯಪ್ರಭಾ, ಧರೆಗಿಳಿದ ಧನ್ವಂತರಿ, ನುಡಿ ಬಾಗಿನ ಬ್ಯಾಡಗಿ ರಾಯರು (ಅಭಿನಂದನಾ ಗ್ರಂಥ) ರಚಿಸಿದ್ದಾರೆ, ಕನಕ (ಸ್ಮರಣ ಸಂಚಿಕೆ) ಹೋರಾಟದ ಒಂದು ನೋಟ (ಅನುವಾದ ಕೃತಿ) ಸಂಕಮ್ಮ ರಚಿಸಿದ ಮಹತ್ವದ ಕೃತಿಗಳಾಗಿವೆ. ಇವರು ಬರದಂತಹ ಸ್ವಾತಂತ್ರ್ಯ ಸೇನಾನಿ ಸಿದ್ದಮ್ಮ ಮೈಲಾರ ಕೃತಿ ಹಿಂದಿ ಭಾಷೆಗೆ ಅನುವಾದಗೊಂಡಿದೆಯಲ್ಲದೇ ಇವರು ರಚಿಸಿದ ಕನ್ನಡದ ಹುಲಿ ಮಹದೇವ ಮೈಲಾರ ಕೃತಿಯು ಚಲನಚಿತ್ರವಾಗಿದ್ದು, ಇವರ ಸಾಧನೆಗಳಲ್ಲಿ ಮಹತ್ವದ ಮೈಲುಗಲ್ಲಾಗಿದೆ. ಧಾರವಾಡ ವಿದ್ಯಾವರ್ಧಕ ಸಂಘದ ನಿರ್ದೇಶಕಿಯಾಗಿ ಸಂಕಮ್ಮ ಆಯ್ಕೆಯಾಗಿದ್ದನ್ನು ಕೂಡ ಇಲ್ಲಿ ಸ್ಮರಿಸಿಕೊಳ್ಳಬಹುದು.

ಸಾಹಿತಿಗಳ ಆಶೀರ್ವಾದನೋಡಿದರೆ ಎಲ್ಲೋ ಒಂದು ಕಡೆ ಶಿಕ್ಷಕಿಯಾಗಬೇಕಾಗಿದ್ದ ನಾನು, ಕನ್ನಡದಲ್ಲಿರುವ ಗಟ್ಟಿತನ ಹಾಗೂ ಅದರಲ್ಲಿರುವ ಸ್ವಾದವನ್ನು ಲೇಖನಗಳ ಮೂಲಕ ಸವಿಯುವಂತಹ ಅವಕಾಶ ದೊರೆತಿದ್ದು ನನ್ನ ಪುಣ್ಯ. ನನಗೆ ಪಾಟೀಲ ಪುಟ್ಟಪ್ಪ ಪ್ರೇರಣೆಯಾಗಿದ್ದರೆ ಹಿರಿಯ ಸಾಹಿತಿಗಳ ಆಶೀರ್ವಾದ ಹಾಗೂ ಬ್ಯಾಡಗಿ ಪಟ್ಟಣ ಸೇರಿದಂತೆ ರಾಜ್ಯದೆಲ್ಲೆಡೆ ಸಿಕ್ಕ ಅಭಿಮಾನ ನನ್ನನ್ನು ಪ್ರಶಸ್ತಿ ಹಂತಕ್ಕೆ ತಲುಪಿಸಿವೆ.

ಸಂಕಮ್ಮ ಸಂಕಣ್ಣನವರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ