ಕನ್ನಡಪ್ರಭ ವಾರ್ತೆ ಯಾದಗಿರಿ
ಬುಧವಾರ ಪ್ರಕಟಗೊಂಡ 2023-24ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮೂರೂ ವಿಭಾಗಗಳಲ್ಲಿ (ಕಲಾ, ವಿಜ್ಞಾನ ಹಾಗೂ ವಾಣಿಜ್ಯ) ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಟಾಪ್ ಸ್ಥಾನದಲ್ಲಿದ್ದಾರೆ.ಯಾದಗಿರಿ ಜಿಲ್ಲೆಯ ಹತ್ತಿಕುಣಿಯ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಭಾಗ್ಯಶ್ರೀ ಒಟ್ಟು 600ಕ್ಕೆ 587 ಅಂಕಗಳ (ಶೇ.97.83) ಮೂಲಕ ಜಿಲ್ಲೆಯಲ್ಲಿ ಕಲಾ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದ್ದಾಳೆ.
ವಿಜ್ಞಾನ ವಿಭಾಗದಲ್ಲಿ ಯಾದಗಿರಿ ಜಿಲ್ಲೆ ಸುರಪುರ ಎನ್.ಎನ್. ಶೆಟ್ಟಿ ಸೈನ್ಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಸನ್ಮತಿ 589 (ಶೇ.98.17) ಅಂಕಗಳ ಪಡೆಯುವ ಮೂಲಕ ಜಿಲ್ಲೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಮೊದಲ ಸ್ಥಾನ ಪಡೆದಿದ್ದಾಳೆ.ವಾಣಿಜ್ಯ ವಿಭಾಗದಲ್ಲಿ ಸುರಪುರ ತಾಲೂಕಿನ ಕೆಂಭಾವಿಯ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಸ್ನೇಹಾ 577 ಅಂಕಗಳ (ಶೇ.96.17) ಪಡೆಯುವ ಮೂಲಕ, ಜಿಲ್ಲೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ಹೆಮ್ಮೆಗೆ ಪಾತ್ರಳಾಗಿದ್ದಾಳೆ.
ಅದರಂತೆ, ಕಲಾ ವಿಭಾಗದಲ್ಲಿ ಶಹಾಪುರ ತಾಲೂಕಿನ ಭೀಮರಾಯನಗುಡಿಯ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಮಾಳವಿಕಾ 583 ಅಂಕಗಳ (ಶೇ.97.17) ಮೂಲಕ ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ, ಗುರುಮಠಕಲ್ ತಾಲೂಕಿನ ಬಳಿಚಕ್ರ ಸರ್ಕಾರಿ ಪಿಯು ಕಾಲೇಜಿನ ಮಹೇಶಮ್ಮ 580 (ಶೇ.96.67) ಹಾಗೂ ಲಿಂಗೇರಿ ಕೋನಪ್ಪ, ಸ್ಟೇಷನ್ ರಸ್ತೆ, ಮಹಿಳಾ ಪಿಯು ಕಾಲೇಜಿನ ಮಂಜಮ್ಮ 580 (ಶೇ.96.67) ಅಂಗಳ ಮೂಲಕ ಇವರಿಬ್ಬರೂ ಜಿಲ್ಲೆಯಲ್ಲಿ ಕಲಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಯಾದಗಿರಿಯ ಜವಾಹರ ಪಿಯು ಕಾಲೇಜಿನ ವಿದ್ಯಾರ್ಥಿನಿ ರೇಣುಕಾ 577 ಅಂಕಗಳು (ಶೇ.96.17) ನಾಲ್ಕನೇ ಸ್ಥಾನ ಪಡೆದಿದ್ದರೆ, ಯಾದಗಿರಿಯ ಸ್ಟೇಷನ್ ಬಜಾರಿನ ಕೊಲ್ಲೂರು ಮಲ್ಲಪ್ಪ ಪಿಯು ಕಾಲೇಜಿನ ವಿದ್ಯಾರ್ಥಿ ವಾಸುದೇವ 575 ಅಂಕಗಳು (ಶೇ. 95.83) ಪಡೆದು, ಜಿಲ್ಲೆಗೆ 5ನೇ ಸ್ಥಾನ ಪಡೆದಿದ್ದಾನೆ.ವಿಜ್ಞಾನ ವಿಭಾಗದಲ್ಲಿ ಯಾದಗಿರಿಯ ಆರ್ಯಭಟ್ಟ ಪಿಯು ಕಾಲೇಜಿನ ವಿದ್ಯಾರ್ಥಿನಿ ಸಾಕ್ಷಿ 587 (ಶೇ.97.83) ಅಂಕಗಳ ಮೂಲಕ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಹಾಗೆಯೇ, ಯಾದಗಿರಿ ಸಬಾ ಪಿಯು ಕಾಲೇಜಿನ ಅಮೀನಾ ತಬಸ್ಸುಮ್ ಹಾಗೂ ಸುರಪುರದ ಶರಣಬಸವ ಪಿಯು ಕಾಲೇಜಿನ ವಿದ್ಯಾರ್ಥಿನಿ ರಾಣಿ ಯಶೋಧಾ ನಾಯಕ 586 ಅಂಕಗಳ (ಶೇ.97.67) ಪಡೆಯುವ ಮೂಲಕ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ. ಯಾದಗಿರಿ ಸಭಾ ಪಿಯು ಕಾಲೇಜಿನ ಅದೀಬಾ ಮಹೀನ್, ಯಾದಗಿರಿಯ ಪ್ರೇರಣಾ ಪಿಯು ಕಾಲೇಜಿನ ವಿದ್ಯಾರ್ಥಿನಿ ಶಾರದಾ ಹಾಗೂ ಶಹಾಪುರದ ಎಸ್. ಬಿ. ದರ್ಶನಾಪುರ ಪಿಯು ಕಾಲೇಜಿನ ವಿದ್ಯಾರ್ಥಿನಿ ಪ್ರಿಯಾ ಅವರುಗಳು 585 ಅಂಕಗಳ (ಶೇ.97.50) ಪಡೆಯುವ ಮೂಲಕ ಜಿಲ್ಲೆಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಶಹಾಪುರದ ಎಸ್.ಸಿ. ಜಿ. ಮೆಮೋರಿಯಲ್ ಪಿಯು ಕಾಲೇಜಿನ ವಿದ್ಯಾರ್ಥಿ ಅಭಿಷೇಕ್ 584 ಅಂಕಗಳ (ಶೇ.97.33) ಮೂಲಕ ಜಿಲ್ಲೆಯಲ್ಲಿ ವಿಜ್ಞಾನ ವಿಭಾಗದಲ್ಲಿ 5ನೇ ಸ್ಥಾನ ಪಡೆದಿದ್ದಾನೆ.
ವಾಣಿಜ್ಯ ವಿಭಾಗದಲ್ಲಿ ಯಾದಗಿರಿಯ ಸ್ಟೇಷನ್ ರಸ್ತೆಯಲ್ಲಿರುವ ಲಿಂಗೇರಿ ಕೋನಪ್ಪ ಪಿಯು ಕಾಲೇಜಿನ ವಿದ್ಯಾರ್ಥಿನಿ ಭುವನೇಶ್ವರಿ 569 ಅಂಕಗಳು (ಶೇ.94.83) ಮೂಲಕ ದ್ವಿತೀಯ ಸ್ಥಾನ, ಯಾದಗಿರಿಯ ಮಲ್ಲಿಕಾ ಪಿಯು ಕಾಲೇಜಿನ ಹೊನ್ನಯ್ಯ ಹಾಗೂ ಶಹಾಪುರ ತಾಲೂಕು ಭೀಮರಾಯನ ಗುಡಿಯ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿ ನಾಗೇಶ ಅವರುಗಳು 567 ಅಂಕಗಳ (ಶೇ.94.50) ಪಡೆಯುವ ಮೂಲಕ ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ. ಹಾಗೆಯೇ, ಯಾದಗಿರಿಯ ಕೊಲ್ಲೂರು ಮಲ್ಲಪ್ಪ ಪಿಯು ಕಾಲೇಜಿನ ಸಾಬರೆಡ್ಡಿ 567 ಅಂಕಗಳು (ಶೇ.94.17) ಮೂಲಕ 4ನೇ ಸ್ಥಾನ ಹಾಗೂ ಯಾದಗಿರಿಯ ಚಿತ್ತಾಪುರ ರಸ್ತೆಯಲ್ಲಿರುವ ಡಾನ್ ಬಾಸ್ಕೋ ಪಿಯು ಕಾಲೇಜಿನ ವಿದ್ಯಾರ್ಥಿನಿ ಇಷಿತಾ ವ್ಯಾಸ್ 563 ಅಂಕಗಳ (ಶೇ.93.83) ಪಡೆಯುವ ಮೂಲಕ ಐದನೇ ಸ್ಥಾನ ಗಿಟ್ಟಿಸಿದ್ದಾಳೆ.