ಕನ್ನಡಪ್ರಭ ವಾರ್ತೆ ಯಾದಗಿರಿ
ಮಹೇಶ ಎಸ್. ಕನಕಟ್ಟಿ ಕೊಲೆಯಾದ ಉಪ ವಲಯ ಅರಣ್ಯಾಧಿಕಾರಿ. ಇವರು ಮೂಲತಃ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಶಾದಿಪೂರ ಗ್ರಾಮದವರು. ಶಹಾಪುರ ತಾಲೂಕಿನ ಉಪ ವಲಯದ ಅರಣ್ಯಾಧಿಕಾರಿಗಳಾಗಿ ಸದ್ಯ ಕರ್ತವ್ಯ ನಿರ್ವಹಿಸುತ್ತಿದ್ದರು.
ಅನಾಮಧೇಯ ಶವವೊಂದು ಹೋಟೆಲ್ ಎದುರಿನ ರಸ್ತೆ ಬದಿ ಬಿದ್ದಿದೆ ಎಂಬ ಮಾಹಿತಿಯಿಂದ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದ ಪೊಲೀಸರು, ಅನುಮಾನಾಸ್ಪದ ಸಾವು (174 (ಸಿ)) ಪ್ರಕರಣದಡಿ ದೂರು ದಾಖಲಿಸಿಕೊಂಡಿದ್ದರು. ಗುರುತಿನ ಚೀಟಿ ಆಧಾರದ ಮೇಲೆ ಇದು ಡಿವೈಎಫ್ ಮಹೇಶರದ್ದು ಎಂದು ಗೊತ್ತಾಗಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲಿಸಿದಾಗ, ನಾಲ್ಕೈದು ಜನರ ತಂಡ ಹಲ್ಲೆ ನಡೆಸಿ ಕೊಲೆ ಮಾಡಿರುವುದು ಕಂಡು ಬಂದಿದೆ. ಇದು ಸಹಜ ಸಾವಲ್ಲ, ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದರಿಂದ ಜೂ.17 ರಂದು ಶಹಾಪುರ ನಗರ ಠಾಣೆಯಲ್ಲಿ ಐಪಿಸಿ 302 ರಡಿ ದೂರು (0113/2024) ದಾಖಲಾಗಿತ್ತು. ಬುಧವಾರ (ಜೂ.19) ಐವರನ್ನು ಬಂಧಿಸಲಾಗಿದೆ.
ತಿಳಿಸಿದ್ದಾರೆ.
ಉಪ ವಲಯ ಅರಣ್ಯಾಧಿಕಾರಿ ಮಹೇಶ ಕನಕಟ್ಟಿ ಕೊಲೆಗೆ ಬಾರ್‌ನಲ್ಲಿ ನಡೆದ ಮಾತಿನ ಚಕಮಕಿ ಕಾರಣ ಎನ್ನಲಾಗುತ್ತಿದೆ. ಜೂ.5 ರಂದು ಸಂಜೆ ಡಿವೈಎಫ್‌ಓ ಮಹೇಶ ಅವರು ಊಟಕ್ಕೆ ಹೋಗಿದ್ದ ವೇಳೆ, ಅಲ್ಲಿಯೇ ಕುಳಿತಿದ್ದ ಆರೋಪಿಗಳ ಮಧ್ಯೆ ಮಾತಿನ ಚಕಮಕಿ ಉಂಟಾಗಿದೆ. ಈ ಸಂದರ್ಭದಲ್ಲಿ ಜಗಳ ವಿಕೋಪಕ್ಕೆ ತೆರಳಿದಾಗ, ಮಹೇಶ ಮೇಲೆ ಹಲ್ಲೆ ನಡೆಸಲಾಗಿದೆ. ಗಾಯಗೊಂಡಿದ್ದ ಅವರು ಅಲ್ಲಿಯೇ ಹೊರಬರುವಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಡಿವೈಎಫ್‌ಓ ಮಹೇಶ ಕನಕಟ್ಟಿ (49) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಶಹಾಪುರ ತಾಲೂಕಿನ ನಡಿಹಾಳ ತಾಂಡಾದ ರಾಜು ಚವ್ಹಾಣ್, ರೇಖು ಚಾಮನಾಳ್, ನರಸಿಂಗ ರಾಠೋಡ್, ತಾರಾಸಿಂಗ ಚವ್ಹಾಣ್, ಪ್ರಕಾಶ ಹೋತಪೇಟ ಬಂಧಿತರಾಗಿದ್ದಾರೆ. ಜಗಳ ಏಕೆ ಶುರುವಾಯಿತು, ಜಗಳ ಕೊಲೆಯಷ್ಟು ವಿಕೋಪಕ್ಕೆ ಹೋಗಲು ಕಾರಣ ಏನು ಎಂಬಿತ್ಯಾದಿ ಅಂಶಗಳು ಇನ್ನಷ್ಟೇ ತನಿಖೆಯಿಂದ ಹೊರಬರಬೇಕಿದೆ.
ಯಾದಗಿರಿ:
ಡಿವೈಎಫ್ಓ ಮಹೇಶ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
- ಜಿ.ಸಂಗೀತಾ, ಎಸ್ಪಿ, ಯಾದಗಿರಿ. ಸಿಸಿಟಿವಿ ತಿರುಚಿರಬಹುದಾದ ಸಾಧ್ಯತೆಗಳಿವೆ. ದೂರು ಕೊಟ್ಟರೆ ಕುಟುಂಬಸ್ಥರಿಗೆ ಅನುಕಂಪದ ನೌಕರಿ ಸಿಗಲಿಲ್ಲಕ್ಕಿಲ್ಲ ಎಂದು ನಮ್ಮನ್ನು ದಿಕ್ಕು ತಪ್ಪಿಸುವ ಯತ್ನವೂ ನಡೆದಿತ್ತು.ಸುಂದರ್, ಮೃತ ಡಿವೈಎಫ್‌ಓ ಮಹೇಶ ಪುತ್ರ.