ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಸಂವಿಧಾನ ದಿನಾಚರಣೆ ಪ್ರಯುಕ್ತ ಬೆಂಗಳೂರಿನಲ್ಲಿ ನಡೆಯಲಿರುವ ಸಂವಿಧಾನ ಜಾಗೃತಿ ಜಾಥಾ ರಾಷ್ಟ್ರೀಯಮಟ್ಟದ ಕಾರ್ಯಕ್ರಮ ಸಮಾವೇಶಕ್ಕೆ ಜ.26ರಂದು ಜಿಲ್ಲಾ ಕೇಂದ್ರದ ಮೂಲಕವೂ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ ಎಂದರು.
ಅಚ್ಚುಕಟ್ಟುತನ ಇರಲಿ:ಭಾರತ ಸಂವಿಧಾನ ಮತ್ತು ಏಕತೆ ಕಾರ್ಯಕ್ರಮ ಆಚರಿಸುವ ನಿಟ್ಟಿನಲ್ಲಿ ಜಾಥಾ ಜಿಲ್ಲಾ ಕೇಂದ್ರದಿಂದ ಹೊರಡಲಿದೆ. ಸಂವಿಧಾನ ಮಹತ್ವ ಜಾಗೃತಿ ಕುರಿತ ವಿಡಿಯೋಗಳನ್ನು ಪ್ರದರ್ಶಿಸುವ ಎಲ್‌ಇಡಿ ವಾಹನಗಳು ಜಿಲ್ಲೆಯ ಗ್ರಾಪಂಗಳನ್ನು ತಲುಪಲಿವೆ. ಸಂವಿಧಾನ ಪೀಠಿಕೆ ಪ್ರತಿಗಳನ್ನು ಮೆರವಣಿಗೆ ವೇಳೆ ವಿತರಿಸಲಾಗುತ್ತದೆ. ಈ ವಿಶೇಷ ಕಾರ್ಯಕ್ರಮವನ್ನು ಅಧಿಕಾರಿಗಳು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ನಗರ ಹಾಗೂ ಗ್ರಾಮಗಳ ಮೂಲಕ ಮೆರವಣಿಗೆ ಈ ಸಂದರ್ಭ ಸಂವಿಧಾನದ ಪ್ರತಿಗಳ ವಿತರಣೆಗೆ ಜಿಲ್ಲಾಧಿಕಾರಿ ಸೂಚಿಸಿದರು.
ಸಂವಿಧಾನ ಸಂಬಂಧಿತ ವಿಷಯಗಳ ಕುರಿತ ಸ್ಪರ್ಧೆಗಳನ್ನು ಆಯೋಜಿಸಬೇಕು. ಮೆರವಣಿಗೆ ಸಾಗುವ ಸಂದರ್ಭದಲ್ಲಿ ಎಲ್ಲ ರೀತಿಯ ಸಹಕಾರ ಬೆಂಬಲವನ್ನು ನಾಗರಿಕರು, ಸರ್ಕಾರೇತರ ಸಂಸ್ಥೆಗಳಿಂದ ಪಡೆಯಬೇಕು. ಭಾರತ ಸಂವಿಧಾನ ಮತ್ತು ಅದರ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಸರೋಜಾ ಜಿ.ಟಿ. ಸೇರಿ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.