ಕನ್ನಡಪ್ರಭ ವಾರ್ತೆ ಮಧುಗಿರಿ
ತಾಲೂಕು ಯಾದವ ಸಂಘ ಮತ್ತು ತಾಲೂಕು ಆಡಳಿತದಿಂದ ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯಾದವರು ಇತರೆ ಸಮಾಜದವರ ಜೊತೆಗೆ ಸಹೃದಯ ಸಂಬಂಧವನ್ನು ಇಟ್ಟುಕೊಂಡು ಪರಸ್ಪರ ಪ್ರೀತಿ,ವಿಶ್ವಾಸ, ನಂಬಿಕೆಗಳಿಂದ ಎಲ್ಲರೊಂದಿಗೆ ಬೆರೆತು ಬಾಳಿ ಬದುಕಬೇಕು ಎಂದರು.
ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ, ತಾಲೂಕು ಸರ್ವಜ್ಞ ವೇದಿಕೆ ಅಧ್ಯಕ್ಷ ವೆಂಕಟರಮಣಪ್ಪ, ಯಾದವ ಜನಾಂಗದ ತಾಲೂಕು ಅಧ್ಯಕ್ಷ ಚಿನ್ನಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಎಂ.ಇ.ಕರಿಯಣ್ಣ , ಖಜಾಂಚಿ ಚಿಕ್ಕಣ್ಣ, ಉಪಾಧ್ಯಕ್ಷ ರಾಜಮೋಹನ್, ಇಒ ಕೆ.ಎನ್.ಹನುಮಂತರಾಯಪ್ಪ, ಬಿಸಿಎಂ ಆಫೀಸರ್ ಜಯರಾಮ್, ಪ್ರೊ. ಸಿ.ಕೃಷ್ಣಪ್ಪ, ಚಿಕ್ಕಣ್ಣ, ಸಿದ್ದಾಪುರ ವೀರಣ್ಣ , ನಿರಂಜನದಾಸ್, ಮೂಡ್ಲಗಿರೀಶ್, ಮಲ್ಲಘಟ್ಟ ಮಧು, ರಘುಯಾದವ್, ಮಂಜುನಾಥ್, ಕೆ.ಪಿ.ಚಿತ್ತಯ್ಯ, ಡಿ.ಎಚ್.ನಾಗರಾಜು ಇತರರಿದ್ದರು.