ಯಾದಗಿರಿ: 13 ನಿವೇಶನಗಳಲ್ಲಿ ಸಮಸ್ಯೆ: ಹರಾಜು ಪ್ರಕ್ರಿಯೆ ರದ್ದು

KannadaprabhaNewsNetwork |  
Published : Jan 25, 2024, 02:04 AM IST
ಶಹಾಪುರ ನಗರದ ನಗರಸಭೆ ವತಿಯಿಂದ 32 ಮೂಲೆ ನಿವೇಶನಗಳನ್ನು ಹಂಚಿಕೆ ಸಂದರ್ಭದಲ್ಲಿ ಜನರಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು. | Kannada Prabha

ಸಾರಾಂಶ

ಸಣ್ಣ, ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆ 32 ನಿವೇಶನಗಳ ಹರಾಜು ಸಭೆಯಲ್ಲಿ 13 ನಿವೇಶನಗಳ ಸಮಸ್ಯೆ ಇದೆ. ಈಗ 19 ನಿವೇಶನಗಳಿಗೆ ಹರಾಜು ನಡೆಸಲಾಗುತ್ತಿದೆ ಎನ್ನುತ್ತಿದ್ದಂತೆ ಶಹಾಪುರ ನಗರಸಭೆ ಪೌರಾಯುಕ್ತರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ಶಹಾಪುರ

ನಗರದ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆ (ಐಡಿಎಸ್ಎಂಟಿ) 32 ಮೂಲೆ ನಿವೇಶನಗಳನ್ನು ಹರಾಜಿಗೆ ನಗರಸಭೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ, ಬಹುತೇಕ ನಿವೇಶನಗಳಲ್ಲಿ ಸಮಸ್ಯೆಗಳಿವೆ ಎಂಬ ಕಾರಣಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಈ ಹಿನ್ನೆಲೆ ಹರಾಜು ಪ್ರಕ್ರಿಯೆ ರದ್ದುಗೊಳಿಸಿದ ಘಟನೆ ನಡೆದಿದೆ.

32 ನಿವೇಶನಗಳಿಗೆ 338 ಜನರು ₹2000 ಶುಲ್ಕದೊಂದಿಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ, ಹರಾಜು ನಡೆಯುವ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರು 13 ನಿವೇಶನಗಳ ಸಮಸ್ಯೆ ಇದೆ. ಈಗ 19 ನಿವೇಶನಗಳಿಗೆ ಹರಾಜು ನಡೆಸಲಾಗುತ್ತಿದೆ ಎನ್ನುತ್ತಿದ್ದಂತೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿ, ಹರಾಜು ಪ್ರಕ್ರಿಯೆ ರದ್ದುಪಡಿಸಲಾಯಿತು.

ಅಧಿಕಾರಿಗಳಿಗೆ ತರಾಟೆ:

ಯಾವುದೇ ಮುನ್ಸೂಚನೆ ನೀಡದೇ 19 ನಿವೇಶನಗಳ ಸಾರ್ವಜನಿಕ ಹರಾಜಿಗೆ ಸಿದ್ಧತೆ ಮಾಡಿಕೊಂಡಿದ್ದ ಅಧಿಕಾರಿಗಳು ಸ್ಥಳಕ್ಕೆ ಬಂದು ಹರಾಜು ಪ್ರಕ್ರಿಯೆ ಆರಂಭಿಸಿದರು. ಇದಕ್ಕೆ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡ ಜನರು, 8 ನಿವೇಶನಗಳು ಉಪನೋಂದಣಿ ಅಧಿಕಾರಿ ಕಚೇರಿಯಲ್ಲಿ ನೋಂದಣಿಯಾಗಿವೆ. ಆದರೂ, ಅದೇ ನಿವೇಶನಗಳನ್ನು ಹರಾಜಿಗೆ ಯಾವ ಆಧಾರದ ಮೇಲೆ ಹಾಕಿದ್ದೀರಿ? ಅರ್ಜಿ ಶುಲ್ಕ ಇಎಂಡಿ ತೆಗೆದುಕೊಂಡ ಮೇಲೆ ಹರಾಜು ಮಾಡಲೇಬೇಕು. ಇಲ್ಲದಿದ್ದರೆ ನಾವು ಯಾವುದೇ ಕಾರಣಕ್ಕೂ ನಿವೇಶನ ಹರಾಜು ಮಾಡಲು ಬಿಡುವುದಿಲ್ಲ. ಭ್ರಷ್ಟ ಅಧಿಕಾರಿಗಳು ಇರುವುದರಿಂದಲೇ ಅಮಾಯಕ ಜನರಿಗೆ ಮೋಸವಾಗುತ್ತಿದೆ ಎಂದು ಅರ್ಜಿ ಸಲ್ಲಿಸಿದ ಜನರು ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅದಾಗಲೇ ಮಾರಾಟವಾಗಿದ್ದ ನಿವೇಶನವನ್ನು ಬೇರೆ ವ್ಯಕ್ತಿಯೊಬ್ಬರಿಗೆ ಮರುಮಾರಾಟ ಮಾಡಿದ್ದಿರಿ. ಈ ರೀತಿ ಮಾಡಲು ನಿಮಗೆ ನಾಚಿಕೆ, ಮಾನ ಇದೇಯಾ ಎಂದು ಪೌರಾಯುಕ್ತರಿಗೆ ನೇರವಾಗಿ ಪ್ರಶ್ನಿಸಿದರು. ಜನರ ಆಕ್ರೋಶ ಮತ್ತು ಪ್ರಶ್ನೆಗೆ ಉತ್ತರಿಸಲಾಗದೇ ಪೌರಾಯುಕ್ತ ಸಪ್ಪೆ ಮೊರೆಹಾಕಿಕೊಂಡು ನಿಂತಿದ್ದರು.

ಶಹಾಪುರ ನಗರಸಭೆ ಆಡಳಿತ ಸಂಪೂರ್ಣ ಕುಸಿದುಹೋಗಿದೆ. ಪ್ರಭಾವಿ ವ್ಯಕ್ತಿಯ ಕೈಗೊಂಬೆಯಂತೆ ನಗರಸಭೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿವೇಶನಗಳನ್ನು ಮೊದಲು ಮಾರಾಟ ಮಾಡಿದ ಅಧಿಕಾರಿಗಳು, ಈಗ ಪುನಃ ಅದೇ ನಿವೇಶನಗಳಿಗೆ ಹರಾಜು ಇಟ್ಟಿದ್ದಾರೆ. ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಇದು ತಾಜಾ ಉದಾಹರಣೆ. ಅಪ್ಪಣ್ಣ ದಶವಂತ, ಸದಸ್ಯ, ನಗರಸಭೆ, ಶಹಾಪುರ.

ಕಾನೂನುಬಾಹಿರವಾಗಿ ನಿವೇಶನ ಹರಾಜು ಮಾಡುವಲು ಹೊರಟಿರುವ ಅಧಿಕಾರಿಗಳ ವಿರುದ್ಧ ಚೀಟಿಂಗ್ ಕೇಸ್ ದಾಖಲಿಸಬೇಕು

ಮಹೇಶ್ ಗೌಡ ಸುಬೇದಾರ್, ರಾಜ್ಯ ಕಾರ್ಯಾಧ್ಯಕ್ಷ, ರಾಜ್ಯ ರೈತ ಸಂಘ ಹಸಿರು ಸೇನೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಶವಂತಪುರದಿಂದ ಹೊರಡೋ ಈ ರೈಲಿನ ಮಾರ್ಗ ಬದಲಾವಣೆ
ಬೆಂಗಳೂರಿಗರೆ ಎಚ್ಚರ : ಇಲ್ಲಿನ ತರಕಾರಿಗಳು ಸೇಫ್ ಅಲ್ಲ..!