ಟಿಕೆಟ್ ತಪ್ಪಲು ಯಡಿಯೂರಪ್ಪ ಕಾರಣ

KannadaprabhaNewsNetwork |  
Published : Mar 29, 2024, 12:50 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್ ಪೂರಕ | Kannada Prabha

ಸಾರಾಂಶ

ಮಗ ರಘುಚಂದನ್‌ಗೆ ಟಿಕೆಟ್ ಆಗಿತ್ತು. ಆದರೆ ಕಡೇಗಳಿಗೆಯಲ್ಲಿ ಗೋವಿಂದ ಕಾರಜೋಳ ಅವರ ಪಾಲಾಯ್ತು. ಯಡಿಯೂರಪ್ಪ ಅವರಿಂದಲೇ ನನ್ನ ಮಗನಿಗೆ ಅನ್ಯಾಯವಾಯಿತೆಂದು ಶಾಸಕ ಎಂ.ಚಂದ್ರಪ್ಪ ಆರೋಪಿಸಿದರು.

ಚಿತ್ರದುರ್ಗ: ಬುಧವಾರ ಮಧ್ಯಾಹ್ನದವರೆಗೂ ಮಗ ರಘುಚಂದನ್‌ಗೆ ಟಿಕೆಟ್ ಆಗಿತ್ತು. ಆದರೆ ಕಡೇಗಳಿಗೆಯಲ್ಲಿ ಗೋವಿಂದ ಕಾರಜೋಳ ಅವರ ಪಾಲಾಯ್ತು. ಯಡಿಯೂರಪ್ಪ ಅವರಿಂದಲೇ ನನ್ನ ಮಗನಿಗೆ ಅನ್ಯಾಯವಾಯಿತೆಂದು ಶಾಸಕ ಎಂ.ಚಂದ್ರಪ್ಪ ಆರೋಪಿಸಿದರು.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಗನ ಹೆಸರು ಅಂತಿಮ ಆಗಿತ್ತು. ಗೋವಿಂದ ಕಾರಜೋಳ ಅವರಿಗೆ ಟಿಕೆಟ್ ನೀಡಲಿಲ್ಲ. ಅಂದರೆ ಕ್ಯಾಂಪೇನ್ ಮಾಡಲ್ಲ ಎಂದು ಹೈಕಮಾಂಡ್‌ಗೆ ಯಡಿಯೂರಪ್ಪ ಸಂದೇಶ ರವಾನೆ ಮಾಡಿದ್ದಾರೆ. ಈ ಕಾರಣಕ್ಕಾಗಿಯೇ ನನ್ನ ಮಗನಿಗೆ ಟಿಕೆಟ್ ಮಿಸ್ ಆಯಿತೆಂದು ಹೇಳಿದರು.

ರಘು ಚಂದನ್‌ಗೆ 2019ರಲ್ಲಿ ಟಿಕೆಟ್ ಕೇಳಿದ್ದೆ, ಆಗ ಮುಂದಿನ ಬಾರಿ ಪರಿಗಣಿಸುವುದಾಗಿ ತಿಳಿಸಿದ್ದರು. ನಾರಾಯಣ ಸ್ವಾಮಿ ಪರ ಚುನಾವಣೆ ಆಡಿ ಕಳೆದ ಬಾರಿ 40 ಸಾವಿರ ರು. ಲೀಡ್ ಕೊಟ್ಟಿದ್ದೆ. 2024ರ ಎಲೆಕ್ಷನ್‌ನಲ್ಲಿ ಟಿಕೆಟ್ ಕೊಡ್ತೇವೆ ಎಂದ ಸಂತೋಷ್ ಜೀ ಕೂಡಾ ಹೇಳಿದ್ದರು. ಇದೇ ಗೋವಿಂದ ಕಾರಜೋಳ ನನ್ನ ಮಗನ ಓಡಾಡಲು ಹೇಳಿದ್ರು. ಮೋದಿ, ಅಮೀತ್ ಶಾ ಸರ್ವೆಯಲ್ಲಿ ರಘುಚಂದನ್ ಹೆಸರಿತ್ತು. ಸಿಇಸಿ ಕಮಿಟಿಯಲ್ಲಿ ನನ್ನ ಮಗನ ಹೆಸರು ಫೈನಲ್ ಆಗಿತ್ತು. ಅಂತಿಮವಾಗಿ ಯಡಿಯೂರಪ್ಪ ಟಿಕೆಟ್ ತಪ್ಪಿಸಿದರೆಂದು ಚಂದ್ರಪ್ಪ ದೂರಿದರು.

ಮೂರು ಮಂದಿ ವಡ್ಡರಿಂದ ಯಡಿಯೂರಪ್ಪ ಸಿಎಂ

ಯಡಿಯೂರಪ್ಪ ಕೆಜೆಪಿಕಟ್ಟಿದ್ದಾಗ ಅವರ ಸಮಾಜದವರು ಬರ್ಲಿಲ್ಲ. ನಾನು 6 ತಿಂಗಳ ಮುಂಚೆಯೇ ರಾಜೀನಾಮೆ ಕೊಟ್ಟಿದ್ದೆ. ಅವರ ಮಗ ಬಿ.ವೈ ರಾಘವೇಂದ್ರ ಬಿಜೆಪಿಯಲ್ಲೇ ಇದ್ದರು. 2008ರಲ್ಲಿ 110 ಸ್ಥಾನ ಗೆದ್ದಾಗ ನಮ್ಮ ಸಮಾಜದವರು ತ್ಯಾಗ ಮಾಡಿದ್ದರು. ಶಿವರಾಜ್ ತಂಗಡಗಿ, ವೆಂಕಟರಮಣಪ್ಪ, ಗೂಳಿಹಟ್ಟಿ ಬೆಂಬಲಿಸಿದ್ದರು ಮೂರು ಮಂದಿ ವಡ್ಡರಿಂದ ಯಡಿಯೂರಪ್ಪ ಸಿಎಂ ಆಗಿದ್ದರು. ಅಂಥ ಮೂರು ಮಂದಿಯನ್ನ ಸಂಪುಟದಿಂದ ತೆಗೆದು ಅನ್ಯಾಯ ಮಾಡಿದ್ದರು. ಆದರೂ ಕೂಡಾ ನಾನು ಇವರನ್ನ ಎಂದೂ ಕೈಬಿಟ್ಟು ಹೋಗಿರಲಿಲ್ಲ.

ಯಡಿಯೂರಪ್ಪ ಒಳ್ಳೆ ಬಹುಮಾನ ಕೊ್ಟ್ಟಿದ್ದಾರೆ ಎಂದರು.

ಕಾರಜೋಳ ಯಡಿಯೂರಪ್ಪ ನಡುವೆ ಅದೇನು ಸಮ್ ಥಿಂಗ್ 500 ಕಿ.ಮೀ. ದೂರದ ವ್ಯಕ್ತಿಗೆ ಟಿಕೆಟ್ ಕೊಡುವಂತಹದ್ದು ಏನಿತ್ತು. ಕಾರ್ಯಕರ್ತರ ಅಭಿಪ್ರಾಯ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳುವೆ. ವಿಜಯೇಂದ್ರ ಯುವಕ ಎಂದು ಅಧ್ಯಕ್ಷನ ಮಾಡಿದ್ದಾರೆ, ನನ್ನ ಮಗನಿಗೆ ಟಿಕೆಟ್ ಕೊಡ್ಲಿಲ್ಲ. ನಮ್ಮ ಸಮಾಜದ ಎಲ್ಲರೂ ಕೈ ಬಿಟ್ಟು ಹೋಗಿದ್ದಾರೆ, ನಾನು ಮಾತ್ರ ಆಧಾರವಾಗಿದ್ದೆ. ಬೊಮ್ಮಾಯಿ ಸಂಪುಟದಲ್ಲಿ ನನಗೆ ಅನ್ಯಾಯ ಮಾಡಿದ್ರು. ಹಗಲು ರಾತ್ರಿ ಯಡಿಯೂರಪ್ಪ ಮನೆಗೆ ದುಡಿದೆ. ಆದ್ರೂ ಮೋಸವಾಯಾಯಿತೆಂದು ಚಂದ್ರಪ್ಪ ನೋವಿನಿಂದ ನುಡಿದರು.

ಚಿತ್ರದುರ್ಗಲ್ಲಿ ಓರ್ವ ಮಹಾನ್ ನಾಯಕ ಇದ್ದಾನೆ. ಈಗಾಗಲೇ ಆತನಿಗೆ ತಕ್ತ ಶಾಸ್ತಿ ಆಗಿದೆ, ಮುಂದೆಯೂ ಆಗಲಿದೆ. ಸೋತವನನ್ನ ಕರೆತಂದು ಎಂಎಲ್ಸಿ ಮಾಡಿದೆವು. ಮುಂದೆಯೂ ಆತ ಸರಿಯಾದ ನೋವು ಉಣ್ಣುತ್ತಾನೆಂದು ಮಾಜಿ ಶಾಸಕ ತಿಪ್ಪಾರೆಡ್ಡಿ ಹೆಸರು ಉಲ್ಲೇಖಿಸದೆ ಚಂದ್ರಪ್ಪ ದೂರಿದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!