ನೇಕಾರ ನಗರಿಯಲ್ಲಿ ಗಮನ ಸೆಳೆದ ಯಕ್ಷಗಾನ

KannadaprabhaNewsNetwork |  
Published : Jul 06, 2025, 01:48 AM IST
ನೇಕಾರ ನಗರಿಯಲ್ಲಿ ಯಕ್ಷಗಾನ ಪ್ರದರ್ಶನ ಯಶಸ್ವಿ. | Kannada Prabha

ಸಾರಾಂಶ

ಕರಾವಳಿ ಭಾಗದ ಜೀವನಾಡಿಯಾಗಿರುವ ಯಕ್ಷಗಾನ ಉತ್ತರ ಕರ್ನಾಟಕದ ಜನತೆಯ ಜೀವನದ ಭಾಗವಾಗಿರುವ ಬಯಲಾಟ, ನಾಟಕಗಳ ಗೀಳಿನಲ್ಲಿದ್ದವರಿಗೆ ಯಕ್ಷಗಾನ ಹೊಸ ಆಯಾಮ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಕನ್ನಡಪ್ರಭ ವಾರ್ತೆ,ರಬಕವಿ-ಬನಹಟ್ಟಿ

ಕರಾವಳಿ ಭಾಗದ ಜೀವನಾಡಿಯಾಗಿರುವ ಯಕ್ಷಗಾನ ಉತ್ತರ ಕರ್ನಾಟಕದ ಜನತೆಯ ಜೀವನದ ಭಾಗವಾಗಿರುವ ಬಯಲಾಟ, ನಾಟಕಗಳ ಗೀಳಿನಲ್ಲಿದ್ದವರಿಗೆ ಯಕ್ಷಗಾನ ಹೊಸ ಆಯಾಮ ನೀಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಶುಕ್ರವಾರ ರಾತ್ರಿ ೮ಕ್ಕೆ ನೇಕಾರ ನಗರಿ ಬನಹಟ್ಟಿಯ ಈಶ್ವರಲಿಂಗ ಮೈದಾನದಲ್ಲಿ ಉಡುಪಿ ಜಿಲ್ಲೆಯ ಹಾಲಾಡಿಯ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯ ಪಾಪಣ್ಣ ವಿಜಯ-ಗುಣಸುಂದರಿ ಯಕ್ಷಗಾನ ಪ್ರದರ್ಶನ ಜನತೆಯ ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಆರಾಧ್ಯ ದೈವ ಶ್ರೀ ಕಾಡಸಿದ್ಧೇಶ್ವರ ದೇವಾಲಯ ಆವರಣದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ನಂತರ ಈಶ್ವರಲಿಂಗ ಮೈದಾನದಲ್ಲಿ ೬ ಗಂಟೆ ಕಾಲ ಕಲೆಯ ಪ್ರದರ್ಶನ ಜರುಗಿತು.

ಯಕ್ಷಗಾನವೆಂಬುದು ದೈವಗಳ ಆರಾಧನೆ. ದೇವರ ಆರಾಧನೆಯಿಂದ ಸಂಕಷ್ಟಗಳು ನಿವಾರಣೆಯಾಗುತ್ತದೆ ಎಂದು ಕಾರ್ಯಕ್ರಮ ಆಯೋಜಿಸಿದ ರಬಕವಿ-ಬನಹಟ್ಟಿ ಹೊಟೇಲ್ ಒಡೆಯರ ಸಂಘದ ಅಧ್ಯಕ್ಷ ಬಾಬಣ್ಣ ಮೊಯ್ಲಿ ತಿಳಿಸಿದರು.

ಪ್ರಾರಂಭಕ್ಕೂ ಮುನ್ನ ಆಯೋಜಕರು ಬನಹಟ್ಟಿಯ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಮಾಡಿದರು. ಭಾಗವತರಾದ ಜಿ. ರಾಘವೇಂದ್ರ ಮಯ್ಯ ಮಾತನಾಡಿದರು. ಭಾಗವತ ಉಮೇಶ ಮರಾಠೆ, ಮದ್ದಳೆಯಾಗಿ ರಮೇಶ ಭಂಡಾರಿ ಕಡತೋಳ, ಚಂಡೆಯಾಗಿ ಗುರುರಾಜ ಪಡಿಯಾರ ಹಾಗು ಸ್ತ್ರೀ ಪಾತ್ರದಲ್ಲಿ ಮಾಧವ ನಾಗೂರು, ರವಿಂದ್ರ ಶೆಟ್ಟಿ ಹಕ್ಲಾಡಿ, ಕುಮಾರ ಅರಳಸುರಳಿ ಹಾಗು ಹಾಸ್ಯದಲ್ಲಿ ಕಾರ್ತಿಕ ಪಾಂಡೇಶ್ವರ, ಚೌಕುಳಮಕ್ಕಿ ಬಸವ ಸೇರಿದಂತೆ ಅನೇಕ ಮುಮ್ಮೇಳದವರು ಭಾಗವಹಿಸಿದ್ದರು.

ಇದೇ ಸಂದರ್ಭ ಭುಜಿಂಗ ಮೊಯ್ಲಿ, ರತ್ನಾಕರ ಶೆಟ್ಟಿ, ರವೀಂದ್ರ ದೇವಾಡಿಗ, ಗಿರೀಶ ಗೌಡ, ವಿನಯ ಪೂಜಾರಿ, ರಾಘವೇಂದ್ರ, ತಿಮ್ಮಣ್ಣ ಮೊಯ್ಲಿ ಸೇರಿದಂತೆ ರಬಕವಿ-ಬನಹಟ್ಟಿ ಹೊಟೇಲ್ ಒಡೆಯರ ಸಂಘದ ಅನೇಕ ಸದಸ್ಯರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ