ಯಕ್ಷಗಾನ ಗಂಡುಮೆಟ್ಟಿನ ಕಲೆ: ಪ್ರವೀಣ ಸದಾಶಿವ ಭಟ್

KannadaprabhaNewsNetwork |  
Published : Oct 30, 2026, 02:45 AM IST
ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರಸಂಗವನ್ನು ಮಹಿಳೆಯರು ಪ್ರದರ್ಶಿಸಿದರು. | Kannada Prabha

ಸಾರಾಂಶ

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪತ್ರಕರ್ತ ಸಂದೇಶ ದೇಸಾಯಿ ಮಾತನಾಡಿ, ಸಂಘಟನೆ, ಸಂಸ್ಥೆ ನಡೆಸುವುದು ತುಂಬಾ ಕಷ್ಟ. ಆದರೂ ಅದನ್ನು ಯಶಸ್ವಿಯಾಗಿ ನಡೆಸಿ ತೋರಿಸುತ್ತಿದ್ದಾರೆ ಎಂದರು.

ಜೋಯಿಡಾ: ಯಕ್ಷಗಾನ ಗಂಡು ಮೆಟ್ಟಿನ ಕಲೆ. ನವರಸ ಭರಿತ ಕಲೆಗೆ ಪವಿತ್ರ ಸ್ಥಾನವಿದೆ. ಈ ಕಲೆಯನ್ನು ಸಪ್ತಸ್ವರ ಸೇವಾ ಸಂಸ್ಥೆಯವರು ಬೆಳೆಸುತ್ತಾ ಧಾರ್ಮಿಕವಾಗಿ ಕೂಡ ನಾವು ಜಾಗೃತ ಅವಸ್ಥೆಯಲ್ಲಿದ್ದೇವೆ ಎಂದು ತೋರಿಸಿ ಕೊಡುತ್ತಿದ್ದಾರೆ ಎಂದು ವೇದಮೂರ್ತಿ ಪ್ರವೀಣ ಸದಾಶಿವ ಭಟ್ ಹೇಳಿದರು.

ತಾಲೂಕಿನ ಯರಮುಖದಲ್ಲಿ ಯಕ್ಷಗಾನ ಸಪ್ತಾಹದ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಪ್ತಾಹದಲ್ಲಿ ನಮ್ಮ ಮಕ್ಕಳೂ ಭಾಗವಹಿಸಿದ್ದಾರೆ. ಹಾಗಾಗಿ ತರಬೇತಿ ನೀಡಿದವರಿಗೂ, ಸ್ಥಳಾವಕಾಶ ಮಾಡಿಕೊಟ್ಟ ಸಂಸ್ಥೆಯವರಿಗೂ ಚಿರಋಣಿ ಎಂದರು.ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪತ್ರಕರ್ತ ಸಂದೇಶ ದೇಸಾಯಿ ಮಾತನಾಡಿ, ಸಂಘಟನೆ, ಸಂಸ್ಥೆ ನಡೆಸುವುದು ತುಂಬಾ ಕಷ್ಟ. ಆದರೂ ಅದನ್ನು ಯಶಸ್ವಿಯಾಗಿ ನಡೆಸಿ ತೋರಿಸುತ್ತಿದ್ದಾರೆ. ನಿರಂತರ ಏಳು ದಿನಗಳ ಕಾಲ ಕಾರ್ಯಕ್ರಮದ ಜತೆಗೆ ಊಟ ಕೂಡ ನೀಡುತ್ತಿರುವುದು ಮಹಾ ಸಾಧನೆ ಎಂದು ಸಂಘಟಕರನ್ನು ಅಭಿನಂದಿಸಿದರು.

ಪತ್ರಕರ್ತ ಟಿ.ಕೆ. ದೇಸಾಯಿ ಮಾತನಾಡಿ, ಸಂಸ್ಥೆಯಲ್ಲಿ ಕಳೆದ 16 ವರ್ಷಗಳಿಂದ ಊಟೋಪಚಾರದ ವ್ಯವಸ್ಥೆ ಮಾಡಿದ ಪರಮೇಶ್ವರ ಸಿದ್ದಿ ದಂಪತಿಗಳನ್ನು ಅಭಿನಂದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೊರಡಾದ ನಾದವರ್ಷಿಣಿ ಟ್ರಸ್ಟ್ ಅಧ್ಯಕ್ಷ, ಹಿಂದೂಸ್ತಾನಿ ಸಂಗಿತ ಕಲಾವಿದರೂ ಆಗಿರುವ ಸುಧಾಮ ಎಸ್. ದಾನಗೇರಿ ಮಾತನಾಡಿ, ಕಲೆ ಸಂಗೀತ, ಸಾಹಿತ್ಯ ಯಕ್ಷಗಾನಗಳೆಲ್ಲ ಸನಾತನ ಧರ್ಮವನ್ನು ಉಳಿಸಿ ಬೆಳೆಸುವಂತ ಕಲೆಗಳಾಗಿವೆ ಎಂದರು.

ಈ ವೇಳೆ ಸಂಗೀತ ರಸದೌತಣ ನೀಡಿದ ಅಂಕೋಲಾದ ಆನಂದ ಆಗೇರ ಸಂಗಡಿಗರು, ಉಚಿತ ಊಟ ನೀಡಿದ ಪರಮೇಶ್ವರ ಸಿದ್ದಿ ದಂಪತಿಗಳನ್ನು ಸನ್ಮಾನಿಸಲಾಯಿತು. ಪತ್ರಕರ್ತ ಹರೀಶ ಭಟ್, ನರಶಿಂಹ ಭಾಗ್ವತ್, ಅಧ್ಯಕ್ಷೆ ಸುಮಂಗಲಾ ದೇಸಾಯಿ, ರಾಘವೇಂದ್ರ ನಾಯ್ಕ್, ಪುಲು ಲುಯಿಸ್ ಫರ್ನಾಂಡಿಸ ಉಪಸ್ಥಿತರಿದ್ದರು

ಕಾರ್ಯಕ್ರಮವನ್ನು ರಾಧಾ ಹೆಗಡೆ, ಸಂಧ್ಯಾ ದೇಸಾಯಿ, ಗಾಯತ್ರಿ ಹೆಗಡೆ, ಸಾವಿತ್ರಿ ಭಾಗ್ವತ ಇತರರು ನಿರ್ವಹಿಸಿದರು. ನಂತರ ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರಸಂಗವನ್ನು ಸಂಸ್ಥೆಯ ಹೆಣ್ಣುಮಕ್ಕಳು ಪ್ರದರ್ಶಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೇಪ್‌ ಮಾಡಿದ್ದಕ್ಕಾಗಿ ಅಪಹರಣ ಮೂಲಕ ಪ್ರತೀಕಾರ
ಉತ್ತರ ಪಾಲಿಕೆಯಲ್ಲಿ 18 ಜಂಕ್ಷನ್‌ ಗುರುತು