ಯಕ್ಷಗಾನ ಅಂಚೆ ಚೀಟಿ ಬಿಡುಗಡೆಗೊಳಿಸಿದ ಎಸ್.ರಾಜೇಂದ್ರ ಕುಮಾ‌ರ್

KannadaprabhaNewsNetwork |  
Published : Feb 26, 2024, 01:31 AM IST
ಯಕ್ಷಗಾನದ ನೂತನ ಅಂಚೆ ಚೀಟಿ ಬಿಡುಗಡೆಗೊಳಿಸುತ್ತಿರುವುದು. | Kannada Prabha

ಸಾರಾಂಶ

ಕರಾವಳಿಯ ಕಲೆ ಯಕ್ಷಗಾನ ಕುರಿತ ಅಂಚೆ ಚೀಟಿಯನ್ನು ಭಾನುವಾರ ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟ‌ರ್ ಜನರಲ್ ಎಸ್.ರಾಜೇಂದ್ರ ಕುಮಾ‌ರ್ ಬಿಡುಗಡೆಗೊಳಿಸಿದರು.

ಮಂಗಳೂರು: ಕರಾವಳಿಯ ಕಲೆ ಯಕ್ಷಗಾನ ಕುರಿತ ಅಂಚೆ ಚೀಟಿಯನ್ನು ಭಾನುವಾರ ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟ‌ರ್ ಜನರಲ್ ಎಸ್.ರಾಜೇಂದ್ರ ಕುಮಾ‌ರ್ ಬಿಡುಗಡೆಗೊಳಿಸಿದರು. 5 ರು. ಮುಖಬೆಲೆಯ ಯಕ್ಷಗಾನ ಅಂಚೆ ಚೀಟಿಯಲ್ಲಿ ತೆಂಕು- ಬಡಗು ಎರಡೂ ತಿಟ್ಟುಗಳಿಗೆ ಸಮಾನ ಪ್ರಾಧಾನ್ಯತೆ ನೀಡಲಾಗಿದ್ದು, ಎರಡೂ ತಿಟ್ಟುಗಳ ರೇಖಾಚಿತ್ರವನ್ನು ಅಂಚೆ ಚೀಟಿಯಲ್ಲಿ ಮೂಡಿಸಲಾಗಿದೆ.

ಈ ಅಂಚೆ ಚೀಟಿಯ ಪ್ರಾಯೋಜಕತ್ವವನ್ನು ಸರ್ಕಾರಿ ಸ್ವಾಮ್ಯದ ಮಂಗಳೂರು ರಿಫೈನರಿ ಆಂಡ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್‌) ವಹಿಸಿದ್ದು, 5.30 ಲಕ್ಷ ರು.ಗಳನ್ನು ಅಂಚೆ ಇಲಾಖೆಗೆ ಬಿಡುಗಡೆಗೊಳಿಸಿದೆ.

ಅಧ್ಯಕ್ಷತೆ ವಹಿಸಿದ್ದ ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಯಕ್ಷಗಾನದ ಇತಿಹಾಸದಲ್ಲಿ ಈ ದಿನ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು. ಕರಾವಳಿಯ ಕಲೆಗೆ ಮಹತ್ವದ ಸ್ಥಾನ ಅಂಚೆ ಚೀಟಿಯ ಮೂಲಕ ಲಭಿಸಿದೆ. ಯಕ್ಷಗಾನವನ್ನು ವಿಶ್ವಾದ್ಯಂತ ಪರಿಚಯಿಸುವ ನಿಟ್ಟಿನಲ್ಲಿ ಭಾರತೀಯ ಅಂಚೆ ಇಲಾಖೆ ಹೊರ ತಂದಿರುವ ಈ ಸ್ಟ್ಯಾಂಪ್‌ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಕಡಲತಡಿಯ ಭಾರ್ಗವ ಶಿವರಾಮ ಕಾರಂತರು ಹಾಗೂ ದೈವಾರಾಧನೆ ಕುರಿತ ಅಂಚೆ ಚೀಟಿ ಕೂಡ ಹೊರತರುವಲ್ಲಿ ವಿಶೇಷ ಪ್ರಯತ್ನ ಮಾಡಲಾಗುವುದು ಎಂದರು.

ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, ಕರಾವಳಿಯ ಹೆಮ್ಮೆಯ ಕಲೆಯಾಗಿರುವ ಯಕ್ಷಗಾನ ಇದೀಗ ಅಂಚೆ ಚೀಟಿಯ ಮೂಲಕ ವಿಶ್ವಾದ್ಯಂತ ಪರಿಚಯವಾಗಲಿದೆ ಎಂದರು.

ಯಕ್ಷಗಾನ ವಿದ್ವಾಂಸ ಡಾ.ಪ್ರಭಾಕರ ಜೋಶಿ ಮಾತನಾಡಿ, ಅಂಚೆ ಚೀಟಿ ರಾಯಭಾರದ ಕೆಲಸ ಮಾಡುತ್ತಿದೆ. ಇಲ್ಲಿನ ‌ ಸಂಪ್ರದಾಯ ಕಲೆಗಳನ್ನು ಪರಿಚಯಿಸಲು ಅಂಚೆ ಚೀಟಿ ಪ್ರಧಾನ ಪಾತ್ರ ವಹಿಸಬಲ್ಲುದು ಎಂದರು.

ಅಂಚೆ ಚೀಟಿ ವಿಶೇಷತೆ ಏನು?

ಈ ಅಂಚೆ ಚೀಟಿಯ ಪ್ರಾಯೋಜಕತ್ವವನ್ನು ಸರ್ಕಾರಿ ಸ್ವಾಮ್ಯದ ಮಂಗಳೂರು ರಿಫೈನರಿ ಆಂಡ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್‌) ವಹಿಸಿದ್ದು, 5.30 ಲಕ್ಷ ರು.ಗಳನ್ನು ಅಂಚೆ ಇಲಾಖೆಗೆ ಬಿಡುಗಡೆಗೊಳಿಸಿದೆ. 5 ರು. ಮುಖಬೆಲೆಯ ಯಕ್ಷಗಾನ ಅಂಚೆ ಚೀಟಿಯಲ್ಲಿ ತೆಂಕು- ಬಡಗು ಎರಡೂ ತಿಟ್ಟುಗಳಿಗೆ ಸಮಾನ ಪ್ರಾಧಾನ್ಯತೆ ನೀಡಲಾಗಿದ್ದು, ಎರಡೂ ತಿಟ್ಟುಗಳ ರೇಖಾಚಿತ್ರವನ್ನು ಅಂಚೆ ಚೀಟಿಯಲ್ಲಿ ಮೂಡಿಸಲಾಗಿದೆ. ಈ ಹಿಂದೆ ಕೆರೆಮನೆ ಶಿವರಾಮ ಹೆಗಡೆ ಹಾಗೂ ಕೆರೆಮನೆ ಶಂಭು ಹೆಗಡೆ ಅವರ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆಗೊಳಿಸಲಾಗಿತ್ತು. ಆದರೆ ಯಕ್ಷಗಾನವನ್ನೇ ವಿಷಯಾಧಾರಿತವಾಗಿ ಅಂಚೆ ಚೀಟಿ ಬಿಡುಗಡೆ ಇದೇ ಮೊದಲು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ