ನಾಡ್ಪಾಲು ಗ್ರಾಮದ ತಿಂಗಳೆಯಲ್ಲಿ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ)ಯ ವಿದ್ಯಾರ್ಥಿಗಳಿಗೆ ಗುರು ಬನ್ನಂಜೆ ಸಂಜೀವ ಸುವರ್ಣ ಅವರಿಂದ ಯಕ್ಷಗಾನ ತರಬೇತಿ ಶಿಬಿರ ಆರಂಭವಾಗಿದೆ. ತಿಂಗಳೆ ಪ್ರತಿಷ್ಠಾನದ ಸಹಯೋಗದೊಂದಿಗೆ ಈ 11 ದಿನಗಳ ಶಿಬಿರದಲ್ಲಿ ಎನ್‌ಎಸ್‌ಡಿಯ 30 ವಿದ್ಯಾರ್ಥಿಗಳು ಯಕ್ಷಗಾನವನ್ನು ಕಲಿಯಲಿದ್ದಾರೆ.
ಕನ್ನಡಪ್ರಭ ವಾರ್ತೆ ಹೆಬ್ರಿ
ನಾಡ್ಪಾಲು ಗ್ರಾಮದ ತಿಂಗಳೆಯಲ್ಲಿ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ)ಯ ವಿದ್ಯಾರ್ಥಿಗಳಿಗೆ ಗುರು ಬನ್ನಂಜೆ ಸಂಜೀವ ಸುವರ್ಣ ಅವರಿಂದ ಯಕ್ಷಗಾನ ತರಬೇತಿ ಶಿಬಿರ ಆರಂಭವಾಗಿದೆ. ತಿಂಗಳೆ ಪ್ರತಿಷ್ಠಾನದ ಸಹಯೋಗದೊಂದಿಗೆ ಈ 11 ದಿನಗಳ ಶಿಬಿರದಲ್ಲಿ ಎನ್‌ಎಸ್‌ಡಿಯ 30 ವಿದ್ಯಾರ್ಥಿಗಳು ಯಕ್ಷಗಾನವನ್ನು ಕಲಿಯಲಿದ್ದಾರೆ. ಬುಧವಾರ ಶಿಬಿರಕ್ಕೆ ಉದ್ಯಮಿ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಚಾಲನೆ ನೀಡಿ, ಗುರು ಸಂಜೀವ ಸುವರ್ಣ ಅವರಲ್ಲಿ ಯಕ್ಷಗಾನ ತರಬೇತಿ ಪಡೆಯುವುದೇ ಪೂರ್ವ ಜನ್ಮದ ಸುಕೃತ ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುರು ಬನ್ನಂಜೆ ಸಂಜೀವ ಸುವರ್ಣ ಮಾತನಾಡಿ, ಕಲಿಯುವ ತುಡಿತ ಸಾಧನೆಯ ಛಲ ಇವೆರಡು ಇದ್ದರೆ ಸಾಕು ಯಾವ ಕಲೆಯನ್ನು ಸುಲಲಿತವಾಗಿ ಅಭ್ಯಾಸ ಮಾಡಬಹುದು ಎಂದರು.ವೇದಿಕೆಯಲ್ಲಿ ತಿಂಗಳೆ ಪ್ರತಿಷ್ಠಾನದ ಮುಖ್ಯಸ್ಥರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ, ಎನ್‌ಎಸ್‌ಡಿಯ ಮುಖ್ಯಸ್ಥರಾದ ಪ್ರೊ.ವಿವೇಕ್, ಭಾಗವತರಾದ ಲಂಬೋಧರ ಹೆಗಡೆ, ಶ್ರೀಧರ ಹೆಗಡೆ ಉಪಸ್ಥಿತರಿದ್ದರು.ಬನ್ನಂಜೆ ಸಂಜೀವ ಸುವರ್ಣರ ಶಿಷ್ಯರಾದ ಶೃತಿ ಬಂಗೇರ , ಪಲ್ಲವಿ ಕೊಡಗು, ಶಿಶಿರ್, ಮನೋಜ್, ಕಾರ್ತಿಕ್, ಸುಮಂತ್ ತಂಡದವರು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಡಾ ಪ್ರಶಾಂತ ಶೆಟ್ಟಿ ಕಾರ್ಯಕ್ರಮ ಸ್ವಾಗತಿಸಿ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.