ಸೊರಬ: ತಾಲೂಕಿನ ಯಲಸಿ ಗ್ರಾಮದ ದೊಡ್ಡಕೆರೆ ಹೆಗ್ಗೆರೆಯಲ್ಲಿ ಗುರುವಾರ ಜನಪದ ಕ್ರೀಡೆ ಮೀನು ಶಿಕಾರಿ ಸಡಗರದಿಂದ ಜರುಗಿತು.
ಗ್ರಾಮದಲ್ಲಿ ನಡೆದ ಕೆರೆಬೇಟೆಯಲ್ಲಿ ಕೂಣಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಗ್ರಾಮಸ್ಥರು ಮಾತ್ರವಲ್ಲದೇ ಸುತ್ತಲಿನ ಗ್ರಾಮದವರು ಜಾತಿ, ಮತಗಳ ಭೇದವಿಲ್ಲದೆ, ಹಿರಿಯರು, ಕಿರಿಯರೆನ್ನೆದೇ ಕೆರೆಬೇಟೆಯಲ್ಲಿ ಪಾಲ್ಗೊಂಡಿದ್ದರು. ಕೆಲವರಿಗೆ ಸುಮಾರು ೧೫ಕೆ.ಜಿ ವರೆಗೆ ಮೀನು ಲಭಿಸಿತು. ಕೂಣಿ ಹಿಡಿದು ಕೆರೆಗೆ ಇಳಿದವರು ಕೆರೆಬೇಟೆ ಮಾಡಿ ತೆರಳಿದರು.
ಗ್ರಾಮಸ್ಥರಿಗೆ ಮಾತ್ರವೇ ಕೆರೆಬೇಟೆ ನಡೆಸಲು ಅವಕಾಶ ನೀಡಲಾಗಿತ್ತು. ಆದರೂ ಗ್ರಾಮಸ್ಥರು ಅವರ ಸಂಬಂಧಿಗಳನ್ನು ಕೆರೆಗೆ ಇಳಿಸಿದರು. ಕೆಲವರು ಸುಮಾರು ೧೫ರಿಂದ ೨೦ ಕೆಜಿ ವರೆಗೆ ಮೀನುಗಳನ್ನು ಹಿಡಿದು ಸಂಭ್ರಮಿಸಿದರು. ಕೆರೆಬೇಟೆಗೆ ಯಲಸಿ ಗ್ರಾಮದವರು ಮಾತ್ರವಲ್ಲದೇ ಸುತ್ತಲಿನ ಹುಲ್ತಿಕೊಪ್ಪ, ಕೊರಕೋಡು, ಗುನ್ನೂರು, ಕಾರೆಹೊಂಡ, ಕೊಡಕಣಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.ಗ್ರಾಮ ಸಮಿತಿಯವರು ಯಾವುದೇ ಗಲಾಟೆ ಮತ್ತು ಗೊಂದಲಗಳಿಗೆ ಅವಕಾಶ ನೀಡದಂತೆ ಅಚ್ಚುಕಟ್ಟಾಗಿ ನಿರ್ವಹಿಸಿದರು.