ಕಾಂಗ್ರೆಸ್ ಸರ್ಕಾರದ ಕುತಂತ್ರ ಶೀಫ್ರ ವಿಫಲ: ಯಶಪಾಲ್

KannadaprabhaNewsNetwork |  
Published : Oct 30, 2026, 03:15 AM IST
ಬಿಜೆಪಿಯಿಂದ ಮೆಸ್ಕಾಂ ವೈಫಲ್ಯದ ವಿರುದ್ಧ ಪಂಜಿನ ಮೆರವಣಿಗೆ | Kannada Prabha

ಸಾರಾಂಶ

ಉಡುಪಿ ನಗರ ಬಿಜೆಪಿ ವತಿಯಿಂದ ಮೆಸ್ಕಾಂ ವೈಫಲ್ಯ ವಿರುದ್ಧ ಬುಧವಾರ ಬೋರ್ಡ್ ಹೈಸ್ಕೂಲಿನಿಂದ ಮೆಸ್ಕಾಂ ಕಚೇರಿ ತನಕ ನಡೆದ ಪಂಜಿನ ಮೆರವಣಿಗೆಯಲ್ಲಿ ಮಾತನಾಡಿದರು.

ಉಡುಪಿ: ಜನರ ಹೊಟ್ಟೆಗೆ ಹಿಟ್ಟು ನೀಡಲು ಯೋಗ್ಯತೆ ಇಲ್ಲದ ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳಿ ಜನರ ಜುಟ್ಟಿಗೆ ಮಲ್ಲಿಗೆ ಮುಡಿಸುವುದಕ್ಕೆ ಹೊರಟಿದೆ. ಕಾಂಗ್ರೆಸ್‌ನ ಕುತಂತ್ರವನ್ನು ಜನರು ಶೀಘ್ರ ವಿಫಲ ಮಾಡಲಿದ್ದಾರೆ ಎಂದು ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ ಎಚ್ಚರಿಸಿದ್ದಾರೆ.ಅವರು ಉಡುಪಿ ನಗರ ಬಿಜೆಪಿ ವತಿಯಿಂದ ಮೆಸ್ಕಾಂ ವೈಫಲ್ಯ ವಿರುದ್ಧ ಬುಧವಾರ ಬೋರ್ಡ್ ಹೈಸ್ಕೂಲಿನಿಂದ ಮೆಸ್ಕಾಂ ಕಚೇರಿ ತನಕ ನಡೆದ ಪಂಜಿನ ಮೆರವಣಿಗೆಯಲ್ಲಿ ಮಾತನಾಡಿದರು.ಇನ್ನೂ ಬೇಸಿಗೆ ಆರಂಭವಾಗಿಲ್ಲ, ಆದರೂ ನಿತ್ಯವೂ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ, ವಿದ್ಯಾರ್ಥಿಗಳ ಓದಿಗೆ ತೊಂದರೆ ಮಾಡಲಾಗುತ್ತಿದೆ. ಸರ್ಕಾರ ಖಜಾನೆಯಲ್ಲಿ ದುಡ್ಡಿಲ್ಲದಿದ್ದರೂ ಕರಾವಳಿ ಸಂಪುಟ ಸಭೆ ಹೆಸರಲ್ಲಿ 36,000 ಕೋಟಿ ರು. ಅನುದಾನ ನೀಡುವ ಸುಳ್ಳು ಹೇಳಿದೆ. ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದ ಮೂಲಕ ಜನರು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ. ಇನ್ನಾದರೂ ಸರ್ಕಾರ ಸ್ಟಿಂಗ್ ಆಪರೇಶನ್ ಎಂಬ ನೆಪಗಳನ್ನು ಬಿಟ್ಟು ಜನರ ಸಮಸ್ಯೆ ಆಲಿಸಿ, ಪರಿಹರಿಸಿ ಎಂದವರು ಆಗ್ರಹಿಸಿದರು.ಬಿಜೆಪಿ ರಾಜ್ಯ ಕಾರ್ಯಾಕಾರಿಣಿ ಸದಸ್ಯ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಸಿಇಟಿ, ನೀಟ್ ಪರೀಕ್ಷೆಗೆ ತಯಾರಿಸಿ ನಡೆಸುತ್ತಿರುವ ವಿದ್ಯಾರ್ಥಿಗಳು ವಿದ್ಯುತ್ ಲೋಡ್ ಶೆಡ್ಡಿಂಗ್‌ನಿಂದ ಆತಂಕಕ್ಕೀಡಾಗಿದ್ದಾರೆ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿ, ವಿದ್ಯುತ್ ಶುಲ್ಕ ಏರಿಕೆ, ರಾಜ್ಯಕ್ಕೆ ಲೋಡ್ ಶೆಡ್ಡಿಂಗ್ ಶಾಪವಾಗಿದೆ. ರಾಜ್ಯದಲ್ಲಿ ಡಬಲ್ ಎಂಜಿನ ಸರ್ಕಾರ ಅಸ್ತಿತ್ವಕ್ಕೆ ಬರುವ ತನಕ ಬಿಜೆಪಿ ಪ್ರತಿಭಟನೆ ಮಾಡಲಿದೆ ಎಂದರು.ಪಕ್ಷದ ಪ್ರಮುಖರಾದ ಕುಯಿಲಾಡಿ ಸುರೇಶ್ ನಾಯಕ್, ದಿನಕರ ಶೆಟ್ಟಿ ಹೆರ್ಗ, ದಿನಕರ ಬಾಬು, ಉದಯಕುಮಾರ್ ಶೆಟ್ಟಿ, ಶ್ರೀಕಾಂತ್ ನಾಯಕ್ ಅಲೆವೂರು, ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ವೀಣಾ ಎಸ್. ಶೆಟ್ಟಿ, ನಳಿನಿ ಪ್ರದೀಪ್ ರಾವ್, ಸಂಧ್ಯಾ ರಮೇಶ್, ಪ್ರಭಾಕರ ಪೂಜಾರಿ, ದಿನೇಶ್ ಅಮೀನ್, ರಶ್ಮಿತಾ ಬಾಲಕೃಷ್ಣ ಶೆಟ್ಟಿ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರ ನಷ್ಟ ತಡೆಗೆ ಹಾಲಿನ ದರ 8 ರು. ಏರಿಕೆ - ಯಾವ ಪ್ಯಾಕೆಟ್‌ ಹಾಲಿಗೆ ಎಷ್ಟು?
ರೇ* ಮಾಡಿದ್ದಕ್ಕಾಗಿ ಅಪಹರಣ ಮೂಲಕ ಪ್ರತೀಕಾರ