ದಾವಣಗೆರೆ: 2025ರಲ್ಲಿ ನಡೆಸಲಾದ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಬ್ಯಾಚುಲರ್‌ಆಫ್ ಪ್ಲಾನಿಂಗ್ ವಿಭಾಗದಲ್ಲಿ ನಗರದ ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಡಿ.ಎಸ್. ಯಶವಂತ ರಾಷ್ಟ್ರಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿ, ದಾವಣಗೆರೆ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಬ್ಯಾಚುಲರ್ ಆಫ್ ಪ್ಲಾನಿಂಗ್ ಮತ್ತು ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ವಿಭಾಗಗಳಲ್ಲಿ 50 ರ‍್ಯಾಂಕ್ ಒಳಗೆ 11 ವಿದ್ಯಾರ್ಥಿಗಳು, 500 ರ‍್ಯಾಂಕ್ ಒಳಗೆ 18 ವಿದ್ಯಾರ್ಥಿಗಳು, 1000 ರ‍್ಯಾಂಕ್ ಒಳಗೆ 23 ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಉತ್ತಮ ರ‍್ಯಾಂಕ್‌ಗಳನ್ನು ಗಳಿಸಿದ್ದಾರೆ.
ರ‍್ಯಾಂಕ್ ಸಾಧಕರಿಗೆ ವಿದ್ಯಾಸಂಸ್ಥೆ ಕಾರ್ಯದರ್ಶಿ ಸಂಗಮೇಶ್ವರಗೌಡ, ನಿರ್ದೇಶಕ ಡಾ. ಜಿ.ಎನ್.ಎಚ್. ಕುಮಾರ್, ಪ್ರಾಚಾರ್ಯ ಡಾ. ಎಸ್.ಪ್ರಸಾದ್ ಬಂಗೇರ ಹಾಗೂ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.- - -
-23ಕೆಡಿವಿಜಿ40: ಡಿ.ಎಸ್.ಯಶವಂತ-23ಕೆಡಿವಿಜಿ41: ಮಹಮ್ಮದ್ ಮುತಾಹರ್
-23ಕೆಡಿವಿಜಿ42: ಬಿ.ಜೆ.ಶ್ರೀನಿವಾಸ-23ಕೆಡಿವಿಜಿ43: ಎಂ.ಸಾನಿಧ್ಯ
-23ಕೆಡಿವಿಜಿ44: ಕೆ.ವಿ.ವರುಣ್