-ಖರ್ಗೆ ಕುಟುಂಬದ ಬೆಂಬಲದಿಂದಲೇ ಬೆಳೆದ ಚಲವಾದಿ ಇದೀಗ ಖರ್ಗೆ ಕುಟುಂಬಕ್ಕೆ ನಿಂದನೆ
--ಕನ್ನಡಪ್ರಭ ವಾರ್ತೆ ಕಲಬುರಗಿ
ಮೇಲ್ಮನೆಯಲ್ಲಿ ಬಿಜೆಪಿಯ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿಯರ ಬಳಿ ಶ್ವಾನದ ಬಳಿ ಇರುವಷ್ಟೂ ನಿಯತ್ತು ಇಲ್ಲವೆಂದು ಕಲಬುರಗಿ ಕೈ ಮುಖಂಡರು ಗುಡುಗಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್, ಶಾಸಕ ಅಲ್ಲಂಪ್ರಭು ಪಾಟೀಲ್, ಎಂವೈ ಪಾಟೀಲರು, ಖರ್ಗೆಯವರ ಬೆಂಬಲ, ಆಶಿರ್ವಾದಿಂದಲೇ ಚಲವಾದಿ ಬೆಳೆದು ಬಂದವರು. ಅವರು ತಾವು ಎಲ್ಲಿದ್ದರು, ಹೇಗೆ ಬೆಳೆದು ಬಂದರು ಎಂಬುದನ್ನೇ ಮರೆತಿದ್ದಾರೆಂದು ಜರಿದರು.
ಖರ್ಗೆ ಕುಟುಂಬವೇ ಚಲವಾದಿಗೆ ಗುರುತಿಸಿ ಬೆಂಬಲಿಸಿತ್ತು. ಇದೀಗ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಚಲವಾದಿಯವರು ತಮ್ಮ ಮೂಲ ಬೆಳೆದು ಬಂದ ಜಾಗ, ಬೆಳವಣಿಗೆಗೆ ಕಾರಣರಾದವರನ್ನೇ ಮರೆತು ಜರಿಯುತ್ತಿದ್ದಾರೆ. ಶ್ವಾನ ಮಾಲೀಕರನ್ನು ತುಂಬ ವಿಶ್ವಾಸದಿಂದ ಕಾಣುತ್ತದೆ. ಆದರೆ, ಚಲವಾದಿಯವರ ಬಲಿ ಶ್ವಾನಕ್ಕಿರುವಷ್ಟೂ ನಿಯತ್ತು ಇಲ್ಲ, ಬೇರೆಯವರನ್ನ ಶ್ವಾನಕ್ಕೆ ಹೋಲಿಸಿ ಗೇಲಿ ಮಾಡುವ ನೈತಿಕತೆ ಅವರಿಗೆ ಇಲ್ಲವೇ ಇಲ್ಲವೆಂದು ಹಿರಿಯ ಶಾಸಕರಾದ ಎಂವೈ ಪಾಟೀಲ್, ಅಲ್ಲಂಪ್ರಭು ಪಾಟೀಲ್, ಜಗದೇವ ಗುತ್ತೇದಾರ್ ಜರಿದರು.ಖರ್ಗೆ ಪರಿವಾರ ನಿಂದಿಸಲೆಂದೇ ಬಿಜೆಪಿ ನಾರಾಯಣಸ್ವಾಮಿಗೆ ಮೇಲ್ಮನೆ ವಿಪಕ್ಷ ಸ್ಥಾನ ಕೊಡುಗೆ ನೀಡಿದಂತಿದೆ. ಪಕ್ಷದಲ್ಲಿ ಅನೇಕ ಹಿರಿಯ ನಾಯಕರಿದ್ದರೂ ಅವರನ್ನೆಲ್ಲ ಕಡೆಗಣಿಸಿ ಚಲವಾದಿಯರನ್ನೇ ವಿಪಕ್ಷ ನಾಯಕ ಪಟ್ಟಕ್ಕೆ ಹತ್ತಿಸಿರೋದರ ಹಿಂದೆ ಬಿಜೆಪಿಯ ಖರ್ಗೆ ವಿರೋಧಿ ಕಾರ್ಯಸೂಚಿ ಅಡಗಿದೆ ಎಂಬ ಗುಮಾನಿ ಕಾಡುತ್ತಿದೆ ಎಂದರು.
ನಾಯಿ ಎಂದು ಪ್ರಿಯಾಂಕ್‌ಗೆ ಜರಿದದ್ದಕ್ಕೆ ಚಿತ್ತಾಪುರ ಜನ ರೊಚ್ಚಿಗೆದ್ದಿದ್ದಾರೆ. ಪೊಲೀಸರು ಜನರ ಧೋರಣೆ ಅರಿತು ತಕ್ಷಣವೇ ಛಲವಾದಿಗೆ ಭದ್ರತೆ ಒದಗಿಸಿ ಆಗುವ ಅನಾಹುತ ತಪ್ಪಿಸಿದ್ದಾರೆ. ರಾಜಕೀಯದಲ್ಲಿ ನಿಂದನೆ ವೈಯಕ್ತಿಕವಾಗಿ ಇರಬಾರದು ಎಂದರು.ಅಭಿವೃದ್ಧಿ ಪರ ಚಿಂತನೆಯಿಂದ ಜನ ಮೆಚ್ಚುತ್ತಾರೆಯೇ ಹೊರತು ನಿಂದನೆಗಳಿಂದ ಅಲ್ಲ ಎಂಬುದನ್ನ ಅರಿಯಬೇಕು. ಪಿಯಾಂಕ್ ಚಿಕ್ಕ ವವಯಸ್ಸಲ್ಲೇ ಪ್ರಗತಿಪರ ಚಿಂತನೆಗಳ ನಾಯಕರಾಗಿ ಹೊರಹೊಮ್ಮಿರೋದು ಬಿಜೆಪಿಯವರಿಗೆ ಅರಗಿಸಿಕೊಳ್ಳಲು ಆಗದೆ ಈ ರೀತಿ ಅವರನ್ನೇ ಗುರಿ ಮಾಡಿ ರಾಜಕಾರಣ ಮಾಡಲಾಗುತ್ತಿದೆ ಎಂದರು.
ಚಿತ್ತಾಪುರಕ್ಕೆ, ಕಲಬರಗಿಗೆ ಬಿಜೆಪಿಯವರು ಯಾರೇ ಬರಲಿ, ಹೋರಾಟ ಮಾಡಲಿ, ಪ್ರಜಾಪ್ರಭುತ್ವದಲ್ಲಿ ಇವಕ್ಕೆಲ್ಲ ಅವಕಾಶವಿದೆ. ಆದರೆ, ವೈಯಕ್ತಿಕ ನಿಂದನೆ ಸರಿಯಲ್ಲ. ಬಿಜೆಪಿ ಇದೇ ಘಟನೆ ದೊಡ್ಡದು ಮಾಡಿ ಪ್ರಚಾರ ಪಡೆಯಲು ಮುಂದಾಗಿದೆ. ಕಲಬುರಗಿ ಚಲೋ ಮಾಡಲಿ, ಬೇಡ ಎಂದವರಾರು? ಎಂದು ಅಲ್ಲಂಪ್ರಭು ಪ್ರಶ್ನಿಸಿದರು.ಖರ್ಗೆಯವರೂ ಪ್ರಧಾನಿ ಮೋದಿಗೆ, ಗೃಹ ಸಚಿವರಾದಿಯಾಗಿ ಹಲವರಿಗೆ ನಿಂದಿಸಿದ್ದನ್ನು ಮೆಲಕು ಹಾಕುತ್ತ ಪತ್ರಕರ್ತರು ಪ್ರಶ್ನಿಸಿದಾಗ ಕಾಂಗ್ರೆಸ್ ಮುಖಂಡರು ಸೂಕ್ತ ಉತ್ತರಕ್ಕಾಗಿ ಪರದಾಡಿದರು. ಮೋದಿಗೆ ಡಾ. ಖರ್ಗೆ ವಿಷಸರ್ಪ ಅಂದದ್ದು ಸರಿಯೆ? ಎಂಬ ಪ್ರಶ್ನೆಗೆ ಅದೆಲ್ಲ ಯಾಕೆ ಹೇಳಿದ್ದು ಎಂದು ನಾಯಕರೇ ವಿವರಿಸಿದ್ದಾರೆ. ಈಗ ಆ ಬಗ್ಗೆ ಪ್ರತಿಕ್ರಿಯೆ ನೀಡೋದು ಸರಿಯಲ್ಲವೆಂದು ಸಮಜಾಯಿಷಿ ನೀಡಿದರು.
ಚಿತ್ತಾಪುರದಲ್ಲಿ ಯಾರು ಚಲವಾದಿಗೆ ದಿಗ್ಭಂಧನ ಹಾಕಿಲ್ಲ, ಜನ ಕೋಪದಲ್ಲಿದ್ದ ಕಾರಣ ಪೊಲೀಸರು ಅವರನ್ನು ಗೆಸ್ಟ್‌ಹೌಸ್‌ನಲ್ಲಿದ್ದು ಭದ್ರತೆ ಒದಗಿಸಿದ್ದಾರೆ. ತಿರಂಗಾ ಯಾತ್ರೆಯಲ್ಲಿ ಪಾಲ್ಗೊಳ್ಳಲು ನಾವು ಯಾರೂ ವಿರೋಧಿಸಿಲ್ಲವೆಂದು ಮುಖಂಡರು ಹೇಳಿದರು. ಜಿ.ಪಂ ಮಾಜಿ ವಿಪಕ್ಷ ನಾಯಕ ಶಿವಾನಂದ ಪಾಟೀಲ್, ಸಂಗಮೇಶ ನಾಗನಹಳ್ಳಿ ಡಾ. ಕಿರಣ ಪಾಟೀಲ್ ಇದ್ದರು.--ಫೋಟೋ- ಕಾಂಗ್ರೆಸ್ ಪ್ರೆಸ್ ಮೀಟ್ ಮತ್ತು 1