ಮಣ್ಣು, ನೀರಿನ ಸಂರಕ್ಷಣೆ ಸಾರುವ ಜಲಾನಯನ ಯಾತ್ರೆಗೆ ಚಾಲನೆ

KannadaprabhaNewsNetwork |  
Published : Feb 21, 2025, 12:45 AM IST
ಚಿತ್ರ : 19ಎಂಡಿಕೆ5 :  ಮಣ್ಣು ಮತ್ತು ನೀರಿನ ಸಂರಕ್ಷಣೆ ಸಾರುವ ಜಲಾನಯನ ಯಾತ್ರೆಗೆ ಚಾಲನೆ ನೀಡಲಾಯಿತು.  | Kannada Prabha

ಸಾರಾಂಶ

ಮಣ್ಣು ಮತ್ತು ನೀರಿನ ಮಹತ್ವದ ಬಗ್ಗೆ ಕಲಾವಿದ ಈ ರಾಜು ಮತ್ತು ತಂಡದಿಂದ ಬೀದಿನಾಟಕ ಮೂಲಕ ರೈತರಲ್ಲಿ ಸ್ವಸಹಾಯ ಸಂಘದ ಸದಸ್ಯರಿಗೆ ಅರಿವು ಮೂಡಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲಕನೂರು ಹೊಸಳ್ಳಿ ಗ್ರಾಮದಲ್ಲಿ ಅನುಷ್ಠಾನಗೊಳಿಸಿದ್ದ ಕೃಷಿ ಇಲಾಖೆಯ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಜಲಾನಯನ ಅಭಿವೃದ್ಧಿ ಘಟಕ 2 ಯೋಜನೆಯಡಿ ಮಣ್ಣು, ನೀರಿನ ಸಂರಕ್ಷಣೆ ಸಾರುವ ಜಲಾನಯನ ಯಾತ್ರೆಗೆ ನೇರುಗಳಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿನೋದ್ ಕುಮಾರ್ ಎಚ್.ಕೆ ಅವರು ಜಂಟಿ ಕೃಷಿ ನಿರ್ದೇಶಕರಾದ ಡಾ.ಚಂದ್ರಶೇಖರ್, ಉಪ ಕೃಷಿ ನಿರ್ದೇಶಕರು ಡಾ.ಸೋಮಶೇಖರ್ ಚಾಲನೆ ನೀಡಿದರು.

ನಂತರ ಮಣ್ಣು ಮತ್ತು ನೀರಿನ ಮಹತ್ವದ ಬಗ್ಗೆ ಕಲಾವಿದ ಈ.ರಾಜು ಮತ್ತು ತಂಡದಿಂದ ಬೀದಿನಾಟಕ ಮೂಲಕ ರೈತರಲ್ಲಿ ಸ್ವ ಸಹಾಯ ಸಂಘದ ಸದಸ್ಯರಿಗೆ ಅರಿವು ಮೂಡಿಸಲಾಯಿತು.

ಮಹಿಳೆಯರಿಂದ ಕಳಸಹೊತ್ತು ಮುಖ್ಯ ಬೀದಿಯಲ್ಲಿ ಯಾತ್ರೆ ಸಾಗಿ ಸಭೆ ಕಾರ್ಯಕ್ರಮ ನಡೆಯಿತು. ಪ್ರಾಸ್ತಾವಿಕ ಮಾತನಾಡಿದ ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಡಾ.ಸೋಮಸುಂದರ್ ಜಲಾನಯನದ ಮಹತ್ವ ಮಣ್ಣು ನೀರು ಅರಣ್ಯ ಗಿಡಗಳ ರಕ್ಷಣೆ ಬಗ್ಗೆ ಸಭೆಯಲ್ಲಿ ತಿಳಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಚಂದ್ರಶೇಖರ್ ಜಲಾನಯನ ಇಲಾಖೆ ಕಡೆಯಿಂದ ನೀಡಲಾದ ಸೌಲಭ್ಯ ಬಗ್ಗೆ ಮಾಹಿತಿ ನೀಡಿದರು.

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಡಬ್ಲ್ಯೂಡಿಸಿ 2.0 ವು ಜಲ ಭದ್ರತೆ ಹಾಗೂ ಕೃಷಿ ಸುಸ್ಥಿರ ಬಗ್ಗೆ ತಿಳಿಸಿ ಸಮುದಾಯದ ಭೂಮಿಗಳಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿ ಮಾಡುವುದರಿಂದ ಹರಿವು ನೀರನ್ನು ತಡೆದು ನಿಲ್ಲಿಸಿ ನಂತರ ಆ ನೀರನ್ನು ರೈತರು ತಮ್ಮ ಹೊಲ ಜಮೀನು ತೋಟಗಳಿಗೆ ನೀರು ಹಾಯಿಸಬಹುದು ಎಂದರು.

ಕೃಷಿ ಹೊಂಡ ರಚನೆ ಮಾಡುವುದರಿಂದ ಅಂತರ್ಜಲ ಮಟ್ಟ ಹೆಚ್ಚಿಸಬಹುದು. ರೈತರಿಗೆ ತಮ್ಮ ತೋಟಗಳಿಗೆ ನೀರಿನ ಪೂರೈಕೆ ಮಾಡಬಹುದಾಗಿದೆ. ಇದರಿಂದ ಸಮಯಕ್ಕೆ ತಕ್ಕಂತೆ ಗಿಡಗಳಿಗೆ ನೀರನ್ನು ಹಾಯಿಸಿ ಉತ್ತಮ ಫಸಲನ್ನು ಪಡೆಯಲು ಸಹಕಾರಿ ಅಗಿದೆ. ಭೂರಹಿತ ಮಹಿಳೆಯರಿಗೆ ಅವರ ಜೀವನೋಪಾಯ ಘಟಕದಡಿ ಅನೇಕ ಸೌಲಭ್ಯಗಳನ್ನು ಇಲಾಖೆ ನೀಡಿದ್ದು ಅದರ ಉಪಯೋಗವನ್ನು ಭೂರಹಿತರು ಪಡೆದುಕೊಂಡಿದ್ದಾರೆ ಎಂದು ಸಭೆಯಲ್ಲಿ ತಿಳಿಸಿದರು.

ಗ್ರಾ.ಪಂ.ಅಧ್ಯಕ್ಷರು ಮಾತನಾಡಿ ಜಲಾನಯನ ಇಲಾಖೆ ನಮ್ಮ ಗ್ರಾಮಕ್ಕೆ ಒಂದು ವರದಾನವಾಗಿದೆ ನಮ್ಮ ಊರಿನ ರೈತರಿಗೆ ಭೂರಹಿತ ರಿಗೆ ಅನೇಕ ಸೌಲಭ್ಯ ನೀಡಿ ಊರಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಸಹಕಾರಿ ಆಗಿದೆ. ಈ ಕಾರ್ಯಕ್ರಮದಲ್ಲಿ ಜಲಾನಯನ ಸಹಾಯಕರನ್ನು ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಸ್ವಾಗತವನ್ನು ಸಹಾಯಕ ಕೃಷಿ ನಿರ್ದೇಶಕರು ವೀರಣ್ಣ ಕೆ.ಪಿ. ಅವರು ಸ್ವಾಗತಿಸಿದರು. ಐಸಿರಿ ಅವರು ನಿರೂಪಿಸಿದರು. ತಾಂತ್ರಿಕ ಅಧಿಕಾರಿ ಕವಿತಾ ಅವರು ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ